IPL Auction 2023: ಯಾವ ತಂಡದ ಪಾಲಾಗಲಿದ್ದಾರೆ ವಿಶ್ವದ ನಂಬರ್ 1 ಟೆಸ್ಟ್ ಬ್ಯಾಟರ್?

ವಿಶ್ವದ ನಂಬರ್ 1 ಟೆಸ್ಟ್ ಬ್ಯಾಟರ್ ಜೋ ರೂಟ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಈ ಮೊದಲು ಆಸಕ್ತಿ ಹೊಂದಿರಲಿಲ್ಲ. ಆದರೆ, 2023ರ ಐಪಿಎಲ್‌ಗೆ ಮುನ್ನ ನಡೆಯಲಿರುವ ಮಿನಿ ಹರಾಜಿನಲ್ಲಿ ತಮ್ಮ ಹೆಸರು ನೊಂದಾಯಿಸುವ ಮೂಲಕ, ಈ ಬಾರಿ ಐಪಿಎಲ್‌ನಲ್ಲಿ ಆಡಲು ಆಸಕ್ತಿ ತೋರಿಸಿದ್ದಾರೆ.

2023ರಲ್ಲಿ ಭಾರತದಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಭಾರತದ ಪಿಚ್‌ಗಳ ಬಗ್ಗೆ ತಿಳಿಯಲು ಈ ಬಾರಿ ಐಪಿಎಲ್ ಸಹಾಯಕವಾಗಲಿದೆ ಎನ್ನುವ ಉದ್ದೇಶದಿಂದ ಅವರು ಹರಾಜಿನಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ರೂಟ್ ಹರಾಜಿನಲ್ಲಿ ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದೇ ಕುತೂಹಲಕಾರಿಯಾಗಿದೆ.

PKL 2022 : ಪುಣೇರಿ ಪಲ್ಟನ್ ವಿರುದ್ಧ 51-39 ಅಂಕಗಳ ಭರ್ಜರಿ ಜಯ ಸಾಧಿಸಿದ ಗುಜರಾತ್ ಜೈಂಟ್ಸ್PKL 2022 : ಪುಣೇರಿ ಪಲ್ಟನ್ ವಿರುದ್ಧ 51-39 ಅಂಕಗಳ ಭರ್ಜರಿ ಜಯ ಸಾಧಿಸಿದ ಗುಜರಾತ್ ಜೈಂಟ್ಸ್

ರೂಟ್ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಹೊಂದಿಲ್ಲವಾದರೂ, ಐಪಿಎಲ್‌ನಲ್ಲಿ ಆಡುವ ಅನುಭವಕ್ಕಾಗಿ ಕಾಯುತ್ತಿದ್ದಾರೆ. ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ರೂಟ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿರುವ ಸಾಧ್ಯತೆ ಇದೆ.

ಜೋ ರೂಟ್ 2018ರಲ್ಲಿ ಐಪಿಎಲ್ ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದರು. ಆದರೆ, ಆ ವರ್ಷದಲ್ಲಿ ಅವರನ್ನು ಖರೀದಿಸಲು ಯಾವ ತಂಡವು ಕೂಡ ಆಸಕ್ತಿ ತೋರಿಸದ ಕಾರಣ ಹರಾಜಾಗದೆ ಉಳಿದರು. ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಬ್ಯಾಟರ್, ಆದರೆ ಟಿ20 ಮಾದರಿಯಲ್ಲು ಅವರು ಉತ್ತಮ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ, ಬ್ಯಾಟಿಂಗ್ ಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಲು ಹಲವು ತಂಡಗಳು ಅವರನ್ನು ಖರೀದಿಸುವ ಸಾಧ್ಯತೆ ಇದೆ.

ಲಕ್ನೋ ಸೂಪರ್ ಜೈಂಟ್ಸ್‌ ಪರವಾಗಿ ಆಡ್ತಾರ ರೂಟ್?

ಲಕ್ನೋ ಸೂಪರ್ ಜೈಂಟ್ಸ್‌ ಪರವಾಗಿ ಆಡ್ತಾರ ರೂಟ್?

ಎಲ್‌ಎಸ್‌ಜಿ ತಂಡದ ತಾವು ಆಡಿದ ಮೊದಲ ಆವೃತ್ತಿಯಲ್ಲೇ ಪ್ಲೇ ಆಫ್ ಹಂತ ಪ್ರವೇಶಿಸಿದ್ದರು. ಲಕ್ನೋ ಸೂಪರ್ ಜೈಂಟ್ಸ್ ಪರ್ಸ್‌ನಲ್ಲಿ 23.35 ಕೋಟಿ ರುಪಾಯಿ ಉಳಿದಿದೆ. ಅವರು 4 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ. ತಂಡದ ಅಗ್ರ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದ್ದರು, ಮಧ್ಯಮ ಕ್ರಮಾಂಕ ದುರ್ಬಲವಾಗಿದೆ.

ಮನೀಶ್ ಪಾಂಡೆ ಮತ್ತು ಎವಿನ್ ಲೆವಿಸ್ ಅವರನ್ನು ಬಿಡುಗಡೆ ಮಾಡಿದ ನಂತರ, ಮಧ್ಯಮ ಕ್ರಮಾಂಕದಲ್ಲಿ ಆಡುವ ಉತ್ತಮ ಬ್ಯಾಟರ್ ಅಗತ್ಯವಿದೆ. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ರೂಟ್ ಸೂಕ್ತವಾಗಿದ್ದು, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿರಬಹುದಾಗಿದೆ.

ಚಾಂಪಿಯನ್ ತಂಡದ ಪಾಲಾಗಲಿದ್ದಾರ?

ಚಾಂಪಿಯನ್ ತಂಡದ ಪಾಲಾಗಲಿದ್ದಾರ?

ಪ್ರಸ್ತುತ ಐಪಿಎಲ್ ಚಾಂಪಿಯನ್ ಗುಜರಾತ್ ಟೈಟಾನ್ಸ್ ಸ್ಥಿರ ಅಗ್ರ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ವಿಭಾಗವನ್ನು ಹೊಂದಿದೆ. ಆದರೆ, ಗುಜರಾತ್ ಟೈಟಾನ್ಸ್ ತಂಡಕ್ಕೆ 3 ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರನ ಅಗತ್ಯವಿದೆ.

ಗುಜರಾತ್ ಟೈಟಾನ್ಸ್ ಪರ್ಸ್‌ನಲ್ಲಿ 19.25 ಕೋಟಿ ರುಪಾಯಿ ಹಣ ಉಳಿದಿದ್ದು, ಮೂವರು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ. ಹಾಗಾಗಿ, ಜೋ ರೂಟ್‌ ತಂಡಕ್ಕೆ ಸೇರ್ಪಡೆಯಾಗುವುದರಿಂದ ತಂಡದ ಮಧ್ಯಮ ಬ್ಯಾಟಿಂಗ್ ಕ್ರಮಾಂಕಕ್ಕೆ ಹೆಚ್ಚಿನ ಶಕ್ತಿ ಬರಲಿದೆ. ಹಾರ್ದಿಕ್ ಪಾಂಡ್ಯ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ಪಂಜಾಬ್ ಮತ್ತು ಹೈದರಾಬಾದ್ ತಂಡಗಳಿಗೂ ಬೇಕು ಬ್ಯಾಟರ್

ಪಂಜಾಬ್ ಮತ್ತು ಹೈದರಾಬಾದ್ ತಂಡಗಳಿಗೂ ಬೇಕು ಬ್ಯಾಟರ್

ಪಂಜಾಬ್ ಕಿಂಗ್ಸ್ ಸ್ಫೋಟಕ ಆಟಗಾರರಿಗೆ ಮೊದಲ ಪ್ರಾಶಸ್ತ್ಯ ನೀಡುವ ತಂಡ. ಆದರೂ ಮಯಾಂಕ್ ಅಗರ್ವಾಲ್‌ರನ್ನು ಬಿಡುಗಡೆ ಮಾಡಿರುವ ಪಂಜಾಬ್ ಆಂಕರ್ ಇನ್ನಿಂಗ್ಸ್ ಆಡುವ ಆಟಗಾರನನ್ನು ತಂಡದಲ್ಲಿ ಹೊಂದುವ ಬಗ್ಗೆ ಚಿಂತಿಸುವ ಸಾಧ್ಯತೆ ಇದೆ. ರೂಟ್ ಆಟದಲ್ಲಿ ಹೊಂದಿಕೊಂಡ ನಂತರ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಮತ್ತೊಬ್ಬ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್ ಸ್ಟೋವ್ ಈಗಾಗಲೇ ತಂಡದಲ್ಲಿದ್ದು, ಮತ್ತೊಬ್ಬ ಇಂಗ್ಲೆಂಡ್ ಬ್ಯಾಟರ್ ರೂಟ್ ಅವರನ್ನು ತಂಡದಲ್ಲಿ ಹೊಂದುವ ಬಗ್ಗೆ ಚಿಂತಿಸಬಹುದು. ಪಂಜಾಬ್ ಕಿಂಗ್ಸ್ ಪರ್ಸ್‌ನಲ್ಲಿ 32.2 ಕೋಟಿ ರುಪಾಯಿ ಇದ್ದು, ಮೂವರು ವಿದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶ ಇದೆ.

ಇನ್ನು ಸನ್‌ರೈಸರ್ಸ್ ಹೈದರಾಬಾದ ಪರ್ಸ್‌ನಲ್ಲಿ 42.25 ಕೋಟಿ ರುಪಾಯಿ ಉಳಿದಿದ್ದು, ನಾಲ್ವರು ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ಇದೆ. ಕೇನ್ ವಿಲಿಯಮ್ಸ್‌ರನ್ನು ತಂಡದಿಂದ ಕೈಬಿಟ್ಟ ನಂತರ ಮಧ್ಯಮ ಕ್ರಮಾಂಕದಲ್ಲಿ ರೂಟ್ ಅವರ ಬದಲಿಗೆ ಉತ್ತಮ ಆಯ್ಕೆಯಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, November 29, 2022, 23:11 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X