ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಅನಿಲ್ ಕುಂಬ್ಳೆ ನಂತರ ಪಂಜಾಬ್ ಕಿಂಗ್ಸ್ ನಾಯಕ ಹುದ್ದೆಯಿಂದ ಮಯಾಂಕ್ ಅಗರ್ವಾಲ್ ವಜಾ!

IPL 2023: Punjab Kings Likely To Remove Mayank Agarwal As Captain, After Anil Kumble; Report

ಐಪಿಎಲ್ 2022ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಆರನೇ ಸ್ಥಾನವನ್ನು ಗಳಿಸಿತು ಮತ್ತು ಮತ್ತೊಮ್ಮೆ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾಗಿ ನಿರಾಶಾದಾಯಕ ಋತುವನ್ನು ಮುಗಿಸಿತು. ಹೀಗಾಗಿ ತಂಡದಲ್ಲಿ ಹಲವು ಬದಲಾವಣೆಗಳು ನಡೆಯುತ್ತಿವೆ.

T20 World Cup: ಭಾರತಕ್ಕೆ ವಿರಾಟ್ ಕೊಹ್ಲಿ ಉನ್ನತ ಫಾರ್ಮ್ ಏಕೆ ಬೇಕು; ವಿವರಿಸಿದ ಇರ್ಫಾನ್ ಪಠಾಣ್T20 World Cup: ಭಾರತಕ್ಕೆ ವಿರಾಟ್ ಕೊಹ್ಲಿ ಉನ್ನತ ಫಾರ್ಮ್ ಏಕೆ ಬೇಕು; ವಿವರಿಸಿದ ಇರ್ಫಾನ್ ಪಠಾಣ್

ಕಳೆದ ಋತುವಿನಿಂದ ಲಕ್ನೋ ಸೂಪರ್ ಜೈಂಟ್ಸ್‌ಗೆ ಸೇರಿದ ನಂತರ ಕೆಎಲ್ ರಾಹುಲ್ ಬದಲಿಗೆ ಪಂಜಾಬ್ ಕಿಂಗ್ಸ್ ತಂಡ ಮಯಾಂಕ್ ಅಗರ್ವಾಲ್ ಅವರ ಹೊಸ ನಾಯಕತ್ವವನ್ನು ಹೊಂದಿದ್ದರು. ಆದರೆ ಇದೀಗ ಐಪಿಎಲ್ 2023ಕ್ಕೆ ಮುಂಚಿತವಾಗಿ ಪಂಜಾಬ್ ಕಿಂಗ್ಸ್ ತಂಡ ಮಯಾಂಕ್ ಅಗರ್ವಾಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ನಿರ್ಧರಿಸಿದೆ.

ಜಾನಿ ಬೈರ್‌ಸ್ಟೋವ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಬಹುದು

ಜಾನಿ ಬೈರ್‌ಸ್ಟೋವ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಬಹುದು

ಈಗಾಗಲೇ ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರೊಂದಿಗೆ ಒಪ್ಪಂದ ಮುಂದುವರೆಸದಿರಲು ನಿರ್ಧರಿಸಿದೆ. ಅದರ ಮುಂದುವರೆದ ಭಾಗವಾಗಿ ಮಯಾಂಕ್ ಅಗರ್ವಾಲ್ ಅವರನ್ನು ನಾಯಕತ್ವದಿಂದ ವಜಾಗೊಳಿಸುವ ಬಗ್ಗೆಯೂ ಯೋಚಿಸುತ್ತಿದೆ. ಇದೀಗ ಪಂಜಾಬ್ ಕಿಂಗ್ಸ್ ತಂಡದಿಂದ ಇಬ್ಬರು ಕನ್ನಡಿಗರು ಪ್ರಮುಖ ಹುದ್ದೆಯಿಂದ ಕೆಳಗಿಳಿದಂತಾಗುತ್ತದೆ.

InsideSport ವೆಬ್‌ಸೈಟ್‌ನಲ್ಲಿನ ವರದಿಯ ಪ್ರಕಾರ, ಮುಂಬರುವ ಐಪಿಎಲ್ 2023 ಋತುವಿನಲ್ಲಿ ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಬಹುದು ಎಂದು ತಿಳಿಸಿದೆ.

ಮಯಾಂಕ್ ಅಗರ್ವಾಲ್ ತಂಡವನ್ನು ಮುನ್ನಡೆಸುವ ಯೋಜನೆಯಲ್ಲಿಲ್ಲ

ಮಯಾಂಕ್ ಅಗರ್ವಾಲ್ ತಂಡವನ್ನು ಮುನ್ನಡೆಸುವ ಯೋಜನೆಯಲ್ಲಿಲ್ಲ

"ಇಲ್ಲ, ಮಯಾಂಕ್ ಅಗರ್ವಾಲ್ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಯೋಜನೆಯಲ್ಲಿಲ್ಲ. ಅವರು ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು. ಅವರು ನಮಗೆ ನಿರ್ಣಾಯಕ ಆಟಗಾರರಾಗುತ್ತಾರೆ. ಅನಿಲ್ ಕುಂಬ್ಳೆ ಬಗ್ಗೆ ನಾವು ಕೆಲವು ಆಯ್ಕೆಗಳನ್ನು ಚರ್ಚಿಸುತ್ತಿದ್ದೇವೆ, ಆದರೆ ಯಾವುದೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನಮಗೆ ಇನ್ನು ಸಮಯವಿದೆ. ನಾವು ಸರಿಯಾದ ಸಮಯದಲ್ಲಿ ಕರೆ ತೆಗೆದುಕೊಳ್ಳುತ್ತೇವೆ," ಎಂದು ಪಂಜಾಬ್ ಕಿಂಗ್ಸ್ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

ಕಳೆದ ಐಪಿಎಲ್‌ನಲ್ಲಿ ಕೇವಲ 196 ರನ್

ಕಳೆದ ಐಪಿಎಲ್‌ನಲ್ಲಿ ಕೇವಲ 196 ರನ್

ಸಾಮಾನ್ಯವಾಗಿ ಓಪನಿಂಗ್ ಮಾಡುವ ಮಯಾಂಕ್ ಅಗರ್ವಾಲ್, ಕಳೆದ ಋತುವಿನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಅದು ಅವರಿಗೆ ಯಾವುದೇ ಪ್ರಯೋಜನವನ್ನು ನೀಡಲಿಲ್ಲ, ಏಕೆಂದರೆ ಅವರು ಕಳೆದ ಐಪಿಎಲ್‌ನಲ್ಲಿ ಅವರ ಕೆಟ್ಟ ಋತುಗಳಲ್ಲಿ ಒಂದಾಗಿತ್ತು. ಐಪಿಎಲ್ 2022ರಲ್ಲಿ ಮಯಾಂಕ್ ಅಗರ್ವಾಲ್ ಆಡಿದ 13 ಪಂದ್ಯಗಳಲ್ಲಿ 16.33 ಸರಾಸರಿ ಮತ್ತು 122.50 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 196 ರನ್ ಗಳಿಸಿದರು.

ಐಪಿಎಲ್ 2022ರಲ್ಲಿ ಜಾನಿ ಬೈರ್‌ಸ್ಟೋವ್ 253 ರನ್

ಐಪಿಎಲ್ 2022ರಲ್ಲಿ ಜಾನಿ ಬೈರ್‌ಸ್ಟೋವ್ 253 ರನ್

ಮತ್ತೊಂದೆಡೆ, ಜಾನಿ ಬೈರ್‌ಸ್ಟೋವ್ ಅವರು ಇಂಗ್ಲೆಂಡ್‌ನ ರಾಷ್ಟ್ರೀಯ ತಂಡಕ್ಕಾಗಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಪಂಜಾಬ್ ಕಿಂಗ್ಸ್ ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ಇಂಗ್ಲಿಷ್ ಕ್ರಿಕೆಟಿಗನನ್ನು ಉತ್ತಮ ಅಭ್ಯರ್ಥಿ ಎಂದು ಪರಿಗಣಿಸಲು ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಐಪಿಎಲ್ 2022ರಲ್ಲಿ ಜಾನಿ ಬೈರ್‌ಸ್ಟೋವ್ 11 ಪಂದ್ಯಗಳಿಂದ 144.57 ಸ್ಟ್ರೈಕ್ ರೇಟ್‌ನಲ್ಲಿ ಎರಡು ಅರ್ಧ ಶತಕಗಳೊಂದಿಗೆ 253 ರನ್ ಗಳಿಸಿದರು ಮತ್ತು ಅತ್ಯುತ್ತಮ 66 ರನ್ ಗಳಿಸಿದರು.

ಏತನ್ಮಧ್ಯೆ, ಐಪಿಎಲ್ 2023ಕ್ಕೆ ಆರು ತಿಂಗಳಿಗಿಂತ ಹೆಚ್ಚು ಬಾಕಿ ಇರುವಾಗ ಪಂಜಾಬ್ ಕಿಂಗ್ಸ್ ತಂಡ ಈಗಾಗಲೇ ತಮ್ಮ ಹೊಸ ಕೋಚ್‌ಗಾಗಿ ಹುಡುಕಾಟವನ್ನು ಪ್ರಾರಂಭಿಸಿದೆ. ಪಂಜಾಬ್ ಕಿಂಗ್ಸ್ ಫ್ರಾಂಚೈಸ್ ಸದ್ಯ ಕೋಚ್ ಸ್ಥಾನಕ್ಕಾಗಿ ಇಯಾನ್ ಮಾರ್ಗನ್, ಟ್ರೆವರ್ ಬೇಲಿಸ್ ಮತ್ತು ಒಬ್ಬ ಮಾಜಿ ಭಾರತದ ಕೋಚ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

Story first published: Monday, August 22, 2022, 10:43 [IST]
Other articles published on Aug 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X