ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL Auction 2023: ಇಂಪ್ಯಾಕ್ಟ್ ಪ್ಲೇಯರ್ ನಿಯಮ, ಈ ಐವರು ಕ್ರಿಕೆಟಿಗರಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ !

IPL 2023: These 5 Impact Players Can Sign For Franchise At The IPL Auction 2023

ಐಪಿಎಲ್‌ ಪಂದ್ಯಗಳನ್ನು ಮತ್ತಷ್ಟು ರೋಚಕವಾಗಿಸುವ ದೃಷ್ಟಿಯಿಂದ ಬಿಸಿಸಿಐ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ಮುಂದಾಗಿದೆ. 2023ರ ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ಬರಲಿದೆ.

2022ರ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆದ ದೇಶೀಯ ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022 ರಲ್ಲಿ ಬಿಸಿಸಿಐ ಈ ಕಲ್ಪನೆಯನ್ನು ಜಾರಿ ಮಾಡಿತ್ತು. ದೆಹಲಿ ತಂಡದ ಆಲ್‌ರೌಂಡರ್ ಹೃತಿಕ್ ಶೋಕೀನ್ ಟೂರ್ನಿಯ ಇತಿಹಾಸದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆದರು.

ಈ ನಿಯಮದ ಪ್ರಕಾರ ಎರಡೂ ತಂಡಗಳು ತಮ್ಮ ತಂಡದಲ್ಲಿ ಪ್ಲೇಯಿಂಗ್ XI ಹೊರತುಪಡಿಸಿ, ನಾಲ್ವರು ಬದಲೀ ಆಟಗಾರರನ್ನು (ಇಂಪ್ಯಾಕ್ಟ್ ಪ್ಲೇಯರ್) ಅನ್ನು ಹೆಸರಿಸಬಹುದು. ಪಂದ್ಯದ ಸಮಯದಲ್ಲಿ ಈ ನಾಲ್ವರಲ್ಲಿ ಒಬ್ಬರನ್ನು ಆಡುವ ಬಳಗದ ಒಬ್ಬ ಆಟಗಾರನ ಬದಲಿಯಾಗಿ ಆಡಿಸಬಹುದು. ಬದಲೀ ಆಟಗಾರನಿಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಲು ಅವಕಾಶ ಇರುತ್ತದೆ.

ಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ, ಎರಡನೇ ಟೆಸ್ಟ್‌ನಿಂದ ಪ್ರಮುಖ ಬೌಲರ್ ಹೊರಕ್ಕೆಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ, ಎರಡನೇ ಟೆಸ್ಟ್‌ನಿಂದ ಪ್ರಮುಖ ಬೌಲರ್ ಹೊರಕ್ಕೆ

ಹೊಸ ನಿಯಮ ಜಾರಿಗೆ ಷರತ್ತುಗಳನ್ನು ಕೂಡ ವಿಧಿಸಲಾಗಿದೆ. ಇನ್ನಿಂಗ್ಸ್‌ನ 14 ನೇ ಓವರ್‌ನ ಅಂತ್ಯದ ಮೊದಲು ಆಟಗಾರನನ್ನು ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ.

ಐಪಿಎಲ್‌ನಲ್ಲಿಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಪರಿಚಯಿಸುವ ಬಿಸಿಸಿಐ ನಿರ್ಧಾರದ ಹಿನ್ನೆಲೆಯಲ್ಲಿ, ಐಪಿಎಲ್ 2023 ಹರಾಜಿನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಗಾಗಿ ಉತ್ತಮ ಆಟಗಾರರನ್ನು ಹೊಂದಲು ಬಯಸುತ್ತವೆ. ಹಲವು ಕ್ರಿಕೆಟಿಗರಿಗೆ ಉತ್ತಮ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ.

ಕ್ಯಾಮರೂನ್ ಗ್ರೀನ್‌ಗೆ ಬೇಡಿಕೆ ಹೆಚ್ಚುವ ಸಾಧ್ಯತೆ

ಕ್ಯಾಮರೂನ್ ಗ್ರೀನ್‌ಗೆ ಬೇಡಿಕೆ ಹೆಚ್ಚುವ ಸಾಧ್ಯತೆ

ಟಿ20 ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾ ಭಾರತಕ್ಕೆ ಟಿ20 ಸರಣಿಗಾಗಿ ಪ್ರವಾಸ ಕೈಗೊಂಡಾಗ ಹೆಚ್ಚು ಪರಿಣಾಮ ಬೀರಿದ ಆಟಗಾರ ಕ್ಯಾಮರೂನ್ ಗ್ರೀನ್. ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಭಾರತದ ವಿರುದ್ಧದ ಟಿ20 ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. 2023ರ ಐಪಿಎಲ್‌ ಹರಾಜಿನಲ್ಲಿ ಅವರು ಹೆಸರು ನೊಂದಾಯಿಸಿಕೊಂಡಿದ್ದು ಹಲವು ಫ್ರಾಂಚೈಸಿಗಳು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅವರು ಮಿಂಚುವ ಸಾಮರ್ಥ್ಯ ಹೊಂದಿರುವುದರಿಂದ ಪಂದ್ಯದ ಯಾವುದೇ ಹಂತದಲ್ಲಾದರು ಅವರು ಉತ್ತಮ ಆಯ್ಕೆಯಾಗಬಲ್ಲರು. ಆದ್ದರಿಂದಲೇ ಈ ಬಾರಿ ಹರಾಜಿನಲ್ಲಿ ಗ್ರೀನ್‌ ಬಾರಿ ಮೊತ್ತಕ್ಕೆ ಹರಾಜಾಗುವ ಬಗ್ಗೆ ಅಂದಾಜು ಮಾಡಲಾಗಿದೆ.

IND vs BAN: ODI ಕ್ರಿಕೆಟ್‌ನಲ್ಲಿ ತಂಡ ತನಗೆ ಈ ಪಾತ್ರ ನೀಡಿದೆ ಎಂದ ಕೆಎಲ್ ರಾಹುಲ್

ಕ್ರಿಸ್‌ ಜೋರ್ಡಾನ್ ಕೂಡ ಉತ್ತಮ ಆಯ್ಕೆ

ಕ್ರಿಸ್‌ ಜೋರ್ಡಾನ್ ಕೂಡ ಉತ್ತಮ ಆಯ್ಕೆ

ಇಂಗ್ಲೆಂಡ್ ತಂಡದ ವೇಗಿ ಕ್ರಿಸ್ ಜೋರ್ಡಾನ್ ಅಂತಿಮ ಓವರ್ ಗಳಲ್ಲಿ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಈಗಾಗಲೇ ನೋಡಿದ್ದೇವೆ. ಅವರು ಪಂದ್ಯದ ಆರಂಭದಲ್ಲಿ ಅಥವಾ ಮಧ್ಯಮ ಓವರ್ ಗಳಲ್ಲಿ ಬೌಲಿಂಗ್ ಮಾಡದಿದ್ದರು, ಅಂತಿಮ ಓವರ್ ಗಳಲ್ಲಿ ಎರಡು ಅಥವಾ ಮೂರು ಓವರ್ ಬೌಲಿಂಗ್ ಮಾಡುತ್ತಾರೆ. ಸಾಕಷ್ಟು ಪರಿಣಾಮಕಾರಿಯಾಗಿ ಯಾರ್ಕರ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಕಾರಣ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಇವರು ಇಂಪ್ಯಾಕ್ಟ್ ಪ್ಲೇಯರ್ ಆಗಲು ಉತ್ತಮ ಆಯ್ಕೆ.

2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ 34 ರನ್ ನೀಡಿ 3 ವಿಕೆಟ್ ಪಡೆದಿದ್ದರು ಮತ್ತು ಫೈನಲ್‌ನಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದು ಯಶಸ್ವಿಯಾಗಿದ್ದರು.

ಹೆನ್ರಿಕ್ ಕ್ಲಾಸೆನ್ ಉತ್ತಮ ಬ್ಯಾಟಿಂಗ್ ಆಯ್ಕೆ

ಹೆನ್ರಿಕ್ ಕ್ಲಾಸೆನ್ ಉತ್ತಮ ಬ್ಯಾಟಿಂಗ್ ಆಯ್ಕೆ

ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್ ಉತ್ತಮವಾಗಿ ಆಡಿದರು ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುತ್ತಿಲ್ಲ. ಕ್ವಿಂಟನ್ ಡಿ ಕಾಕ್ ವಿಕೆಟ್ ಕೀಪಿಂಗ್ ಮತ್ತು ರಿಲೀ ರೊಸ್ಸೌ ಮತ್ತು ಡೇವಿಡ್ ಮಿಲ್ಲರ್ ಪ್ರಮುಖ ಬ್ಯಾಟಿಂಗ್ ಸ್ಥಾನಗಳನ್ನು ಆಕ್ರಮಿಸಿಕೊಂಡಿರುವುದರಿಂದ, ಕ್ಲಾಸೆನ್ ಅವಕಾಶ ಪಡೆಯಲು ಪರದಾಡುತ್ತಿದ್ದಾರೆ.

ಸಾಕಷ್ಟು ಉತ್ತಮ ಇನ್ನಿಂಗ್ಸ್ ಆಡಿರುವ ಕ್ಲಾಸೆನ್, ಯಾವುದೇ ತಂಡಕ್ಕಾದರೂ ಉತ್ತಮ ಬ್ಯಾಟಿಂಗ್ ಆಯ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಲವು ಫ್ರಾಂಚೈಸಿಗಳು ಇವರನ್ನು ಬದಲೀ ಆಟಗಾರನ ಆಯ್ಕೆಗೆ ಉತ್ತಮ ಆಟಗಾರ ಎಂದು ಪರಿಗಣಿಸುವುದರಿಂದ ಉತ್ತಮ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ಆಲ್‌ರೌಂಡರ್ ಡೇನಿಯಲ್ ಸ್ಯಾಮ್ಸ್

ಆಸ್ಟ್ರೇಲಿಯಾ ಆಲ್‌ರೌಂಡರ್ ಡೇನಿಯಲ್ ಸ್ಯಾಮ್ಸ್

ಆಸ್ಟ್ರೇಲಿಯದ ಎಡಗೈ ವೇಗಿ ಡೇನಿಯಲ್ ಸ್ಯಾಮ್ಸ್ ಕೂಡ ಯಾವುದೇ ಫ್ರಾಂಚೈಸಿಗೆ ಉತ್ತಮ ಆಯ್ಕೆಯಾಗಿದ್ದಾರೆ. ಅಂತಿಮ ಓವರ್ ಗಳಲ್ಲಿ ಸ್ಯಾಮ್ಸ್ ಉತ್ತಮವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. 2022ರ ಐಪಿಎಲ್‌ನಲ್ಲಿ ಮುಂಬೈ ಪರವಾಗಿ ಆಡಿದ್ದ ಅವರು ಈಗ ಹೊಸ ತಂಡದ ಪರವಾಗಿ ಆಡಲು ಕಾಯುತ್ತಿದ್ದಾರೆ.

ಬೌಲಿಂಗ್‌ನಲ್ಲಿ ಮಾತ್ರವಲ್ಲ ಅಂತಿಮ ಓವರ್ ಗಳಲ್ಲಿ ಸ್ಯಾಮ್ಸ್ ಯಾವುದೇ ಬೌಲಿಂಗ್‌ ಅನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರ. ಸ್ಥಿರವಾಗಿ ಪ್ರದರ್ಶನ ನೀಡದಿದ್ದರೂ, ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ.

ಬಿಗ್ ಹಿಟ್ಟರ್ ಓಡಿನ್ ಸ್ಮಿತ್

ಬಿಗ್ ಹಿಟ್ಟರ್ ಓಡಿನ್ ಸ್ಮಿತ್

ವೆಸ್ಟ್ ಇಂಡೀಸ್ ತಂಡದ ಬಿಗ್ ಹಿಟ್ಟರ್ ಓಡಿನ್ ಸ್ಮಿತ್ 2022 ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಪಂಜಾಬ್ ಕಿಂಗ್ಸ್ ಪರವಾಗಿ ಆಡಿದ್ದ ಅವರು, ಪಂದ್ಯಾವಳಿಯ ಪ್ರಾರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 8 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿ ಉತ್ತಮ ಆರಂಭ ಪಡೆದರು.

ಆದರೆ ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ಪಂಜಾಬ್ ಕಿಂಗ್ಸ್ ಅವರನ್ನು ಬಿಡುಗಡೆ ಮಾಡಿದೆ. ಅಂತಿಮ ಓವರ್ ಗಳಲ್ಲಿ ಸ್ಫೋಟಕ ಬ್ಯಾಟರ್ ಆಗಿರುವುದರಿಂದ ಇಂಪ್ಯಾಕ್ಟ್ ಪ್ಲೇಯರ್ ಆಗಲು ಸ್ಮಿತ್ ಉತ್ತಮ ಆಯ್ಕೆಯಾಗಿದ್ದಾರೆ.

Story first published: Wednesday, December 7, 2022, 5:45 [IST]
Other articles published on Dec 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X