ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಪಂಜಾಬ್ ಕಿಂಗ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಟ್ರೆವರ್ ಬೇಲಿಸ್ ನೇಮಕ

ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ಟ್ರೆವರ್ ಬೇಲಿಸ್‌ರನ್ನು ನೇಮಕ ಮಾಡಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಸೀಸನ್‌ಗೆ ಬೇಲಿಸ್ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮುಖ್ಯ ಕೋಚ್ ಹುದ್ದೆಯಿಂದ ನಿರ್ಗಮಿಸಿದ ಅನಿಲ್ ಕುಂಬ್ಳೆ ಅವರ ಸ್ಥಾನವನ್ನು ಆಸ್ಟ್ರೇಲಿಯಾದ ತರಬೇತುದಾರ ತುಂಬಲಿದ್ದಾರೆ.

2022 ರ ಐಪಿಎಲ್‌ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್‌ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಮುಂದಿನ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಸಲುವಾಗಿ ಟ್ರೆವರ್ ಬೇಲಿಸ್, ತಂಡದ ನಾಯಕ ಮಯಾಂಕ್ ಅಗರ್ವಾಲ್‌ರೊಂದಿಗೆ ಕೆಲಸ ಮಾಡಲಿದ್ದಾರೆ.

ವಿದೇಶಿ ಲೀಗ್‌ಗಳಲ್ಲಿ ಆಡಲು ನ್ಯೂಜಿಲೆಂಡ್‌ ತಂಡದಿಂದ ದೂರವುಳಿದ ಆಲ್‌ರೌಂಡರ್ ಜಿಮ್ಮಿ ನೀಶಮ್ವಿದೇಶಿ ಲೀಗ್‌ಗಳಲ್ಲಿ ಆಡಲು ನ್ಯೂಜಿಲೆಂಡ್‌ ತಂಡದಿಂದ ದೂರವುಳಿದ ಆಲ್‌ರೌಂಡರ್ ಜಿಮ್ಮಿ ನೀಶಮ್

ಮುಂಬೈ ಇಂಡಿಯನ್ಸ್ ತಂಡವು ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್‌ಕೀಪರ್ ಮಾರ್ಕ್ ಬೌಚರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದನ್ನು ಖಚಿತಪಡಿಸಿದ ಕೆಲವೇ ಗಂಟೆಗಳ ನಂತರ ಬೇಲಿಸ್ ಅವರ ನೇಮಕವು ಬಂದಿದೆ.

IPL 2023: Trevor Bayliss Appointed As New head Coach For Punjab Kings

ಟ್ರೆವರ್ ಬೇಲಿಸ್ ತರಬೇತುದಾರರಾಗಿ ಅತ್ಯುತ್ತಮ ದಾಖಲೆ ಹೊಂಇದ್ದಾರೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಚೊಚ್ಚಲ ಏಕದಿನ ವಿಶ್ವಕಪ್‌ ಗೆದ್ದಿದ್ದ ಇಯಾನ್ ಮೋರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡಕ್ಕೆ ಟ್ರೆವರ್ ಬೇಲಿಸ್ ಮುಖ್ಯ ಕೋಚ್ ಆಗಿದ್ದರು.

IPL 2023: ಮುಂಬೈ ಇಂಡಿಯನ್ಸ್ ತಂಡಕ್ಕೆ ಮುಖ್ಯ ಕೋಚ್‌ ಆಗಿ ಮಾರ್ಕ್ ಬೌಚರ್ ನೇಮಕIPL 2023: ಮುಂಬೈ ಇಂಡಿಯನ್ಸ್ ತಂಡಕ್ಕೆ ಮುಖ್ಯ ಕೋಚ್‌ ಆಗಿ ಮಾರ್ಕ್ ಬೌಚರ್ ನೇಮಕ

ಕೆಕೆಆರ್ ತಂಡದ ಕೋಚ್ ಆಗಿದ್ದ ಟ್ರೆವರ್ ಬೇಲಿಸ್

ಕೊಲ್ಕತ್ತಾ ನೈಟ್ ರೈಡರ್ಸ್‌ನ ಮಾಜಿ ನಾಯಕ ಗೌತಮ್ ಗಂಭೀರ್ ಜೊತೆ ಕೆಲಸ ಮಾಡಿರುವ ಟ್ರೆವರ್ ಬೇಲಿಸ್ ಕೆಕೆಆರ್ ಎರಡು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಟ್ರೆವರ್ ಬೇಲಿಸ್ ತರಬೇತುದಾರರಾಗಿದ್ದ ಅವಧಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ ತಂಡ 2012 ಮತ್ತು 2014ರಲ್ಲಿ ಕಪ್ ಗೆದ್ದಿತ್ತು.

ಕಳೆದ ಮೂರು ವರ್ಷಗಳಿಂದ ಅನಿಲ್‌ ಕುಂಬ್ಳೆ ಪಂಜಾಬ್ ತಂಡದ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಆದರೆ, ಮೂರು ವರ್ಷಗಳಲ್ಲಿ ಪಂಜಾಬ್ ತಂಡ ಉತ್ತಮ ಪ್ರದರ್ಶನ ನೀಡದ ಕಾರಣ, ಪಂಜಾಬ್ ಕಿಂಗ್ಸ್ ಅನಿಲ್ ಕುಂಬ್ಳೆ ಅವರ ಒಪ್ಪಂದವನ್ನು ನವೀಕರಿಸಲಿಲ್ಲ.

ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ತಂಡವು 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಫೈನಲ್‌ನಲ್ಲಿ ಆಡಿದ್ದೇ ಈವರೆಗಿನ ಉತ್ತಮ ಸಾಧನೆಯಾಗಿದೆ. ಫೈನಲ್‌ನಲ್ಲಿ ಸೋಲನುಭವಿಸಿದ್ದ ಪಂಜಾಬ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಐಪಿಎಲ್‌ನ ಕಳೆದ ನಾಲ್ಕು ಸೀಸನ್‌ಗಳಲ್ಲಿ ಪಂಜಾಬ್ ಕಿಂಗ್ಸ್ ಆರನೇ ಸ್ಥಾನ ಪಡೆದಿದೆ. ಈ ವರ್ಷದ ಪಂದ್ಯಾವಳಿಯಲ್ಲಿ, ಮಯಾಂಕ್ ಅಗರ್ವಾಲ್ ಅವರು ಕೆಎಲ್ ರಾಹುಲ್ ಅವರಿಂದ ನಾಯಕತ್ವವನ್ನು ವಹಿಸಿಕೊಂಡಿದ್ದರು ಆದರೆ ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಐಪಿಎಲ್ 2022 ಕ್ಕೆ ಮುಂಚಿತವಾಗಿ ಪಂಜಾಬ್ ಉಳಿಸಿಕೊಂಡಿದ್ದ ಇಬ್ಬರು ಆಟಗಾರರೆಂದರೆ ಮಯಾಂಕ್ ಮತ್ತು ಅರ್ಷದೀಪ್ ಸಿಂಗ್.

Story first published: Friday, September 16, 2022, 17:34 [IST]
Other articles published on Sep 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X