ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಹಳೆ ಮಾದರಿಯಲ್ಲಿ ಐಪಿಎಲ್ ಆಯೋಜನೆ, ಮೂರು ವರ್ಷಗಳ ನಂತರ ತವರಿನಲ್ಲಿ ಆಡಲಿದೆ ಆರ್‌ಸಿಬಿ

2023ರ ಐಪಿಎಲ್‌ ಅಭಿಮಾನಿಗಳಿಗೆ ರಸದೌತಣ ನೀಡಲು ಸಿದ್ಧವಾಗುತ್ತಿದೆ. ಕೋವಿಡ್ ಕಾರಣದಿಂದಾಗಿ ಹೊರ ದೇಶ ಮತ್ತು ಸೀಮಿತ ಸ್ಥಳಗಳಲ್ಲಿ ಕಳೆದ ಮೂರು ಐಪಿಎಲ್ ಪಂದ್ಯಾವಳಿಗಳು ನಡೆದಿದ್ದವು. ಆದರೆ ಮುಂಬರುವ 2023ರ ಐಪಿಎಲ್‌ ಮೊದಲಿನಂತೆ ಗತವೈಭವವನ್ನು ಮರಳಿ ಪಡೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮುಂಬರುವ ಋತುವನ್ನು ಸಾಮಾನ್ಯ ಮನೆ ಮತ್ತು ಹೊರಗಿನ ಮಾದರಿಯಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಡಳಿಯ ಅಂಗಸಂಸ್ಥೆ ರಾಜ್ಯ ಘಟಕಗಳಿಗೆ ದೃಢಪಡಿಸಿದ್ದಾರೆ. ಉದ್ಘಾಟನಾ ಮಹಿಳಾ ಐಪಿಎಲ್ 2023 ರ ಆರಂಭದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಐಪಿಎಲ್‌ನಲ್ಲಿ ನಡೆಯದ ಆಟ ವಿಶ್ವಕಪ್‌ನಲ್ಲಿ ನಡಿಯುತ್ತಾ?: ಐಪಿಎಲ್‌ನಲ್ಲಿ ಫ್ಲಾಪ್ ಆದ ಈ 5 ಕ್ರಿಕೆಟಿಗರು ವಿಶ್ವಕಪ್ ತಂಡಕ್ಕೆ ಆಯ್ಕೆಐಪಿಎಲ್‌ನಲ್ಲಿ ನಡೆಯದ ಆಟ ವಿಶ್ವಕಪ್‌ನಲ್ಲಿ ನಡಿಯುತ್ತಾ?: ಐಪಿಎಲ್‌ನಲ್ಲಿ ಫ್ಲಾಪ್ ಆದ ಈ 5 ಕ್ರಿಕೆಟಿಗರು ವಿಶ್ವಕಪ್ ತಂಡಕ್ಕೆ ಆಯ್ಕೆ

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ವೈರಸ್ ಹರಡುವುದನ್ನು ತಪ್ಪಿಸಲು ಹಿಂದಿನ ಒಂದೆರಡು ಆವೃತ್ತಿಗಳನ್ನು ಸೀಮಿತ ಸ್ಥಳಗಳಲ್ಲಿ ನಡೆಸಲಾಗಿದೆ, ಆದರೆ ಈಗ ಕೊರೊನಾ ನಿಯಂತ್ರಣದಲ್ಲಿದೆ, ವಿಶ್ವದ ಶ್ರೀಮಂತ ಲೀಗ್ ತನ್ನ ಹಳೆಯ ಸ್ವರೂಪಕ್ಕೆ ಮರಳುತ್ತದೆ, ಪ್ರತಿ ತಂಡವು ಒಂದು ತವರು ಮತ್ತು ಒಂದು ಹೊರಗಿನ ಪಂದ್ಯವನ್ನು ಆಡುತ್ತದೆ.

ಕಳೆದ ಮೂರು ವರ್ಷಗಳಿಂದ ತವರಿನಲ್ಲಿ ಪಂದ್ಯವನ್ನು ನೋಡದೆ ನಿರಾಸೆ ಅನುಭವಿಸಿದ್ದ ಅಭಿಮಾನಿಗಳು, ಮುಂದಿನ ಸೀಸನ್‌ನಲ್ಲಿ ತವರಿನ ಅಂಗಳದಲ್ಲಿ ತಮ್ಮ ನೆಚ್ಚಿನ ತಂಡಕ್ಕೆ ಕ್ರೀಡಾಂಗಣದಲ್ಲಿ ಬೆಂಬಲ ನೀಡಬಹುದಾಗಿದೆ.

 ಮೂರು ವರ್ಷದಿಂದ ಸೀಮಿತ ಸ್ಥಳಗಳಲ್ಲಿ ಆಯೋಜನೆ

ಮೂರು ವರ್ಷದಿಂದ ಸೀಮಿತ ಸ್ಥಳಗಳಲ್ಲಿ ಆಯೋಜನೆ

2020 ರ ಐಪಿಎಲ್ ಪಂದ್ಯಾವಳಿಯನ್ನು ಯುಎಇಯ ಮೂರು ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ಕೊರೊನಾ ಕಾರಣದಿಂದಾಗಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ, ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಿದ್ದವು. ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಎಲ್ಲಾ ಪಂದ್ಯಗಳನ್ನು ಆಯೋಜನೆ ಮಾಡಲಾಗಿತ್ತು.

2021 ರಲ್ಲಿ, ಪಂದ್ಯಾವಳಿಯು ದೆಹಲಿ, ಅಹಮದಾಬಾದ್, ಮುಂಬೈ ಮತ್ತು ಚೆನ್ನೈನಲ್ಲಿ ನಾಲ್ಕು ಸ್ಥಳಗಳಲ್ಲಿ ನಡೆಯಿತು. ಐಪಿಎಲ್ 2022 ಮುಂಬೈನ ಮೂರು ಕ್ರೀಡಾಂಗಣ ಮತ್ತು ಪುಣೆಯ ಒಂದು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು.

ಟಿ20 ವಿಶ್ವಕಪ್‌ನ ಭಾರತ ತಂಡದಲ್ಲಿ ಈ IPL ತಂಡಗಳ ಆಟಗಾರರಿಲ್ಲ; ಮುಂಬೈ, ಆರ್‌ಸಿಬಿ ಮೇಲುಗೈ!

ಹತ್ತು ತಂಡಗಳು, ಹತ್ತು ನಗರಗಳಲ್ಲಿ ಪಂದ್ಯ ಆಯೋಜನೆ

ಹತ್ತು ತಂಡಗಳು, ಹತ್ತು ನಗರಗಳಲ್ಲಿ ಪಂದ್ಯ ಆಯೋಜನೆ

2023ರ ಐಪಿಎಲ್‌ನಲ್ಲಿ ಎಲ್ಲಾ ಹತ್ತು ತಂಡಗಳು ತಮ್ಮ ತವರು ಪಂದ್ಯಗಳನ್ನು ತಮ್ಮ ನಿಗದಿತ ಸ್ಥಳಗಳಲ್ಲಿ ಆಡುವುದರೊಂದಿಗೆ ತವರು ಮತ್ತು ಹೊರಗಿನ ಸ್ವರೂಪಕ್ಕೆ ಹಿಂತಿರುಗುತ್ತವೆ" ಎಂದು ಗಂಗೂಲಿ ರಾಜ್ಯ ಘಟಕಗಳಿಗೆ ಬರೆದಿದ್ದಾರೆ.

ಬಿಸಿಸಿಐ 2020 ರ ನಂತರ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಐಪಿಎಲ್ ಆಯೋಜನೆ ಮಾಡುತ್ತಿದೆ. ಕೋವಿಡ್ ಸಾಂಕ್ರಾಮಿಕದ ಮೊದಲಿನಂತೆ ಐಪಿಎಲ್ ಪಂದ್ಯಗಳನ್ನು ಆಯೋಜನೆ ಮಾಡುವುದಾಗಿ ಹೇಳಿದೆ.

ಬೆಂಗಳೂರಿನಲ್ಲಿ ಪಂದ್ಯ ನೋಡಲು ಸಿದ್ಧರಾಗಿ

ಬೆಂಗಳೂರಿನಲ್ಲಿ ಪಂದ್ಯ ನೋಡಲು ಸಿದ್ಧರಾಗಿ

ಬಿಸಿಸಿಐ ಅಧಿಕೃತ ಘೋಷಣೆ ಮಾಡಿರುವುದರಿಂದ ಈ ಬಾರಿ ಐಪಿಎಲ್‌ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದು ಖಚಿತವಾಗಿದೆ. ಕಳೆದ ಮೂರು ವರ್ಷಗಳಿಂದ ಆರ್ ಸಿಬಿ ಪಂದ್ಯವನ್ನು ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

ಆರ್‌ಸಿಬಿ ಪಂದ್ಯ ನಡೆಯುವಾಗ ಚಿನ್ನಸ್ವಾಮಿ ಕ್ರೀಡಾಂಗಣ ಭರ್ತಿಯಾಗಲಿದೆ. ಅದರಲ್ಲೂ ಮುಂದಿನ ಐಪಿಎಲ್‌ನಲ್ಲಿ ಮಿಸ್ಟರ್ 360 ಐಪಿಎಲ್‌ನಲ್ಲಿ ಭಾಗವಹಿಸುವುದಾಗಿ ಹೇಳಿರುವುದು, ಕೊಹ್ಲಿ, ಮ್ಯಾಕ್ಸ್‌ವೆಲ್‌ರ ಆಟವನ್ನು ನೋಡಲು ಕಾತರದಿಂದ ಕಾಯುವಂತೆ ಮಾಡಿದೆ.

ಮೊದಲ ಮಹಿಳಾ ಐಪಿಎಲ್ ಆಯೋಜನೆ

ಮೊದಲ ಮಹಿಳಾ ಐಪಿಎಲ್ ಆಯೋಜನೆ

ಭಾರತೀಯ ಕ್ರಿಕೆಟ್ ಸಂಸ್ಥೆಯು ಮುಂದಿನ ವರ್ಷದ ಆರಂಭದಲ್ಲಿ ಬಹು ನಿರೀಕ್ಷಿತ ಮಹಿಳಾ ಐಪಿಎಲ್‌ನ ಉದ್ಘಾಟನಾ ಆವೃತ್ತಿಯನ್ನು ಆಯೋಜಿಸಲು ಕಾರ್ಯ ರೂಪಿಸುತ್ತಿದೆ. ಮಹಿಳಾ ಐಪಿಎಲ್ ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಗುಣಮಟ್ಟವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

"ಬಿಸಿಸಿಐ ಪ್ರಸ್ತುತ ಬಹು ನಿರೀಕ್ಷಿತ ಮಹಿಳಾ ಐಪಿಎಲ್‌ ಆಯೋಜಿಸಲು ಕಾರ್ಯನಿರ್ವಹಿಸುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ನಾವು ಮೊದಲ ಋತುವನ್ನು ಪ್ರಾರಂಭಿಸಲು ನಿರೀಕ್ಷಿಸುತ್ತಿದ್ದೇವೆ" ಎಂದು ಗಂಗೂಲಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Story first published: Thursday, September 22, 2022, 16:12 [IST]
Other articles published on Sep 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X