ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ನೀಡಿದ ಆ ಸಲಹೆಯೇ ಯಶಸ್ಸಿಗೆ ಕಾರಣ: ಭರ್ಜರಿ ಅರ್ಧ ಶತಕ ಸಿಡಿಸಿದ ಕಾನ್ವೆ ಹೇಳಿದ್ದಿಷ್ಟು!

IPL 2O22: MS Dhoni told me to look to play straight against Delhi Capitals, said Devon Conway

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಡೆವೋನ್ ಕಾನ್ವೆ ಅದ್ಭುತ ಫಾರ್ಮ್‌ನಲ್ಲಿದ್ದು ಮತ್ತೊಂದು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಡೆವೋನ್ ಕಾನ್ವೆ 87 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ಈ ಮೂಲಕ ಸಿಎಸ್‌ಕೆ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಈ ಪ್ರದರ್ಶನದ ಬಳಿಕ ಮಾತನಾಡಿದ ಡೆವೋನ್ ಕಾನ್ವೆ ತನ್ನ ಬ್ಯಾಟಿಂಗ್‌ನಲ್ಲಿನ ಬದಲಾವಣೆಗೆ ಓರ್ವ ವ್ಯಕ್ತಿ ನೀಡಿದ ಒಂದು ಸಲಹೆಯೇ ಕಾರಣ ಎಂದಿದ್ದಾರೆ.

ಡೆವೋನ್ ಕಾನ್ವೆ ಸತತವಾಗಿ ಸ್ಥಿರ ಪ್ರದರ್ಶನ ನೀಡಲು ಕಾರಣವಾದ ಆ ಸಲಹೆಯನ್ನು ನೀಡಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ. ಈ ಮಾತನ್ನು ಸ್ವತಃ ಕಾನ್ವೆ ಹೇಳಿಕೊಂಡಿದ್ದು ತನ್ನ ಯಶಸ್ಸಿಗೆ ಧೋನಿ ನೀಡಿದ ಆ ಸಲಹೆಯೇ ಕಾರಣ ಎಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕಾನ್ವೆ 49 ಎಸೆತಗಳನ್ನು ಎದುರಿಸಿ ಐದು ಸಿಕ್ಸರ್‌ಗಳ ಸಹಿತ 87 ರನ್‌ಗಳ ಕೊಡುಗೆ ನಿಡಿದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 208 ರನ್‌ ಗಳಿಸಿತು.

ವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗ

ಈ ಬಾರಿಯ ಆರಂಭದಿಂದಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಪ್ರದರ್ಶನ ನೀಡಿತ್ತು. ಸತತ ಸೋಲು ಚೆನ್ನೈ ಸೂಪರ್ ಕಿಂಗ್ಸ್‌ಗೆ ಆಘಾತ ನೀಡಿತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸಿಎಸ್‌ಕೆ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಈ ಪ್ರದರ್ಶನದಲ್ಲಿ ಡೆವೋನ್ ಕಾನ್ವೆ ಪಾತ್ರ ಬಹಳ ಮಹತ್ವದ್ದಾಗಿದ್ದು ಅವರ ಬ್ಯಾಟಿಂಗ್ ಪ್ರದರ್ಶನ ಇದಕ್ಕೆ ಸಾಕ್ಷಿ ನೀಡುತ್ತಿದೆ.

ತಮ್ಮ ಈ ಪ್ರದರ್ಶನಕ್ಕೆ ನಾಯಕ ಧೋನಿಯೇ ಕಾರಣ ಎಂದಿದ್ದಾರೆ ಡೆವೋನ್ ಕಾನ್ವೆ. "ನಾನು ಈ ಪ್ರದರ್ಶನದ ಶ್ರೇಯಸ್ಸನ್ನು ಎಂಎಸ್ ಧೋನಿಗೆ ನೀಡಲು ಬಯಸುತ್ತೇನೆ. ನಾನು ಕಳೆದ ಪಂದ್ಯದಲ್ಲಿ ಹೆಚ್ಚಾಗಿ ಸ್ವೀಪ್ ಶಾಟ್‌ಗಳನ್ನು ಬಳಸಿದ್ದೆ. ಆದರೆ ಧೋನಿ ನನಗೆ ನೇರವಾಗಿ ಆಡಲು ಸಲಹೆ ನೀಡಿದರು. ಈ ಯೋಚನೆ ನನ್ನ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿತು" ಎಂದಿದ್ದಾರೆ ಡೆವೋನ್ ಕಾನ್ವೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಆರಂಭಿಕ ಜೋಡಿಯಾದ ಡೆವೊನ್ ಕಾನ್ವೆ ಹಾಗೂ ಋತುರಾಜ್ ಗಾಯಕ್ವಾಡ್ ಪ್ರದರ್ಶನ ತಂಡಕ್ಕೆ ನೆರವಾಗಿದೆ. ಮೊದಲ ವಿಕೆಟ್‌ಗೆ ಈ ಜೋಡಿ 110 ರನ್‌ಗಳ ಜೊತೆಯಾವನ್ನು ನೀಡಿತು. ಇದರ ಪರಿಣಾಮವಾಗಿ ತಂಡ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು.

ಪ್ಲೇಆಫ್ ಹಾದಿ ಸಿಎಸ್‌ಕೆಗೆ ದುರ್ಗಮ: ಚೆನ್ನೈ ಸೂಪರ್ ಕಿಂಗ್ಸ್ ಸತತ ಎರಡು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿದ್ದು ಗೆಲುವಿನ ಲಯಕ್ಕೆ ಮರಳಿದಂತಿದೆ. ತಂಡದ ಪ್ರದರ್ಶನದಲ್ಲಿಯೂ ಸಾಕಷ್ಟು ಸಕಾರಾತ್ಮಕ ಅಂಶಗಳು ಕಾಣಿಸುತ್ತಿದೆ. ಆದರೆ ತಂಡ ತಡವಾಗಿ ಗೆಲುವಿನ ಲಯಕ್ಕೆ ಮರಳಿರುವುದು ಮುಂದಿನ ಹಂತಕ್ಕೇರುವ ಅವಕಾಶವನ್ನು ದುರ್ಗಮವಾಗಿಸಿದೆ. ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಸಿಎಸ್‌ಕೆ ಮುಂದಿನ ಮೂರು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿದರೂ ಉಳಿದ ತಂಡಗಳ ಫಲಿತಾಂಶದ ಮೇಲೆಯೂ ಅವಲಂಭಿಸಬೇಕಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದು ಯಾಕೆ? ಇಲ್ಲಿದೆ ಕಾರಣಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದು ಯಾಕೆ? ಇಲ್ಲಿದೆ ಕಾರಣ

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ (ನಾಯಕ/ ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ತುಷಾರ್ ದೇಶಪಾಂಡೆ, ಕ್ರಿಸ್ ಜೋರ್ಡಾನ್, ರಾಜವರ್ಧನ್ ಹಂಗರ್ಗೇಕರ್, ಮಹೇಶ್ ತೀಕ್ಷಣ, ಹರಿ ನಿಶಾಂತ್, ಎನ್ ಜಗದೀಸನ್, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಕೆಎಂ ಆಸಿಫ್, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ, ಮೊಯಿನ್ ಅಲಿ, ಡ್ವೈನ್ ಪ್ರಿಟೋರಿಯಸ್

Story first published: Tuesday, May 10, 2022, 9:33 [IST]
Other articles published on May 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X