ಆರ್‌ಸಿಬಿ ಸರಿಯಾಗಿ ಬಳಸಿಕೊಳ್ಳದೇ ತಂಡದಿಂದ ಕೈಬಿಟ್ಟ ಸ್ಟಾರ್ ಕ್ರಿಕೆಟಿಗರಿವರು!

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಪಿಎಲ್ ಇತಿಹಾಸ ಕಂಡ ಶ್ರೀಮಂತ ಹಾಗೂ ಆಟಗಾರ ಸ್ನೇಹಿ ತಂಡಗಳಲ್ಲೊಂದು. ತನ್ನ ಆಟಗಾರರನ್ನು ತನ್ನ ಕುಟುಂಬದ ರೀತಿ ನೋಡಿಕೊಳ್ಳುವ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಕೇವಲ ಫ್ರಾಂಚೈಸಿ ಮಾತ್ರವಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಕೂಡ ತಮ್ಮ ತಂಡದ ಆಟಗಾರರನ್ನು ಅತಿ ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ಕೆಲ ಆಟಗಾರರನ್ನು ಆರಾಧಿಸುತ್ತಾರೆ ಕೂಡ ಹೌದು.

ಕೊಹ್ಲಿ, ರೋಹಿತ್ ಅಲ್ಲ ಈತನನ್ನು ಅನುಸರಿಸಿ; ಆಂಗ್ಲ ಕ್ರಿಕೆಟಿಗರಿಗೆ ಪೀಟರ್ಸನ್ ಸಲಹೆ!ಕೊಹ್ಲಿ, ರೋಹಿತ್ ಅಲ್ಲ ಈತನನ್ನು ಅನುಸರಿಸಿ; ಆಂಗ್ಲ ಕ್ರಿಕೆಟಿಗರಿಗೆ ಪೀಟರ್ಸನ್ ಸಲಹೆ!

ಕಳೆದ ಕೆಲ ವರ್ಷಗಳಿಂದ ಕಳಪೆ ಪ್ರದರ್ಶನ ನೀಡಿ ಮಂಕಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಪ್ಲೇ ಆಫ್ ಹಂತವನ್ನು ಪ್ರವೇಶಿಸಿತ್ತು. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಒಳ್ಳೆಯ ಪ್ರದರ್ಶನ ನೀಡಿ ಮಿಂಚಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿಯೇ ಕಾಣದಂತಹ ಆರಂಭವನ್ನು ಪಡೆದುಕೊಂಡಿತು.

ಚೆನ್ನಾಗಿ ಆಡದೇ ಇದ್ರೂ ಈ ಆಟಗಾರನಿಗೆ ಪದೇಪದೆ ಅವಕಾಶ ಕೊಟ್ಟಿತ್ತು ಆರ್‌ಸಿಬಿ!

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಮೊದಲ ನಾಲ್ಕೂ ಪಂದ್ಯಗಳನ್ನು ಸತತವಾಗಿ ಗೆಲ್ಲುವುದರ ಮೂಲಕ ಅತ್ಯುತ್ತಮ ಆರಂಭ ಮಾಡಿ ಐಪಿಎಲ್ ಮುಂದೂಡಲ್ಪಟ್ಟ ವೇಳೆಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡು ಉತ್ತಮ ಸ್ಥಿತಿಯಲ್ಲಿದೆ.

ಟಿ20 ಲೀಗ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಪಾಯಕಾರಿ: ಡು ಪ್ಲೆಸಿಸ್

ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಕೈಲ್ ಜೆಮಿಸನ್ ಇಬ್ಬರನ್ನು ದೊಡ್ಡ ಮೊತ್ತಕ್ಕೆ ಖರೀದಿಸಿತು. ಹೀಗೆ ಪ್ರತಿ ಹರಾಜಿನಲ್ಲಿಯೂ ಆಟಗಾರರನ್ನು ದೊಡ್ಡ ಮೊತ್ತಕ್ಕೆ ಖರೀದಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲ ಸ್ಟಾರ್ ಆಟಗಾರರನ್ನು ತಂಡದಲ್ಲಿ ಇಟ್ಟುಕೊಳ್ಳದೆ ಕೈ ಬಿಟ್ಟ ಉದಾಹರಣೆಗಳಿವೆ. ಈ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾಗ ಸರಿಯಾಗಿ ಅವಕಾಶ ಸಿಗದೆ ತಂಡದಿಂದ ಹೊರಬಿದ್ದ ಸ್ಟಾರ್ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ..

1. ಕ್ವಿಂಟನ್ ಡಿ ಕಾಕ್

1. ಕ್ವಿಂಟನ್ ಡಿ ಕಾಕ್

2019ರ ಐಪಿಎಲ್ ಆವೃತ್ತಿಯಿಂದ ಮುಂಬೈ ಇಂಡಿಯನ್ಸ್ ತಂಡದ ಪರ ಸ್ಟಾರ್ ಆಟಗಾರನಾಗಿ ಮಿಂಚುತ್ತಿರುವ ಕ್ವಿಂಟನ್ ಡಿ ಕಾಕ್ 2018ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕಡೆಗಣಿಸಲ್ಪಟ್ಟಿದ್ದರು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಾಲು ಸಾಲು ಅವಕಾಶಗಳು ಸಿಕ್ಕ ಕಾರಣ ಕ್ವಿಂಟನ್ ಡಿ ಕಾಕ್ ಭರ್ಜರಿ ರನ್ ಗಳಿಸಿದರು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾಗ ಉತ್ತಮ ಆಟವನ್ನಾಡಿದರೂ ಕ್ವಿಂಟನ್ ಡಿ ಕಾಕ್ ಬದಲು ಪಾರ್ಥಿವ್ ಪಟೇಲ್‌ಗೆ ಅವಕಾಶ ನೀಡುವುದರ ಮೂಲಕ ಡಿಕಾಕ್ ಕಡೆಗಣಿಸಲ್ಪಟ್ಟಿದ್ದರು.

2. ನಾಥನ್ ಕೌಲ್ಟರ್ ನೈಲ್

2. ನಾಥನ್ ಕೌಲ್ಟರ್ ನೈಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲರ್‌ಗಳ ಆಯ್ಕೆ ವಿಚಾರದಲ್ಲಿ ಪದೇ ಪದೇ ಎಡವುತ್ತಲೇ ಇತ್ತು. ಪ್ರತಿ ಹರಾಜಿನಲ್ಲಿಯೂ ಹೊಚ್ಚ ಹೊಸ ಬೌಲರ್‌ಗಳನ್ನು ಖರೀದಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಲವಾರು ಬಾರಿ ಆ ಬೌಲರ್‌ಗಳಿಗೆ ಅವಕಾಶ ನೀಡದೆ ಕಡೆಗಣಿಸಿದ್ದುಂಟು. 2018ರ ಐಪಿಎಲ್ ಆವೃತ್ತಿಯಲ್ಲಿ ನಾಥನ್ ಕೌಲ್ಟರ್ ನೈಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದರು. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್‌ಗಳಿಗೆ ಆಲ್ಔಟ್ ಆಗಿದ್ದಾಗ ಇದೇ ಕೌಲ್ಟರ್ ನೈಲ್ ಕೊಲ್ಕತ್ತಾ ತಂಡದ ಬೌಲರ್ ಆಗಿದ್ದರು. ಅಂತಹ ಉತ್ತಮ ಬೌಲರ್‌ನ್ನು ಖರೀದಿಸಿದರೂ ಸಹ ಒಂದೇ ಒಂದು ಪಂದ್ಯದಲ್ಲಿಯೂ ಅವಕಾಶ ನೀಡದೇ ಇದ್ದದ್ದು ನಿಜಕ್ಕೂ ಆಶ್ಚರ್ಯಕರ ನಿಲುವಾಗಿತ್ತು.

3. ಕೆಎಲ್ ರಾಹುಲ್

3. ಕೆಎಲ್ ರಾಹುಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗರೇ ಇಲ್ಲ, ಇದ್ದ ಕನ್ನಡಿಗರನ್ನು ಬೆಂಗಳೂರು ತಂಡ ಬಿಟ್ಟುಕೊಟ್ಟಿದೆ ಎಂಬ ಕೂಗು ಆಗಾಗ ಕೇಳಿಬರುತ್ತಿತ್ತು. ಈ ರೀತಿಯ ಕೂಗು ಕೇಳಿ ಬರಲು ಕಾರಣರಾದ ಕನ್ನಡಿಗರ ಪೈಕಿ ಕೆಎಲ್ ರಾಹುಲ್ ಕೂಡ ಒಬ್ಬರು. 2016ರ ಐಪಿಎಲ್ ಆವೃತ್ತಿಯಲ್ಲಿ ಬೆಂಗಳೂರು ಪರ ರಾಹುಲ್ 397 ರನ್ ಬಾರಿಸಿದರೂ ಸಹ ಮುಂದಿನ ಆವೃತ್ತಿಯಲ್ಲಿ ತಂಡದಿಂದ ಕೈಬಿಡಲಾಯಿತು. ತದನಂತರ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ಪರ ಪ್ರತಿ ಆವೃತ್ತಿಯಲ್ಲಿಯೂ ಹೆಚ್ಚಿನ ರನ್ ಗಳಿಸಿ ಮಿಂಚುತ್ತಿದ್ದಾರೆ.

4. ಶೇನ್ ವಾಟ್ಸನ್

4. ಶೇನ್ ವಾಟ್ಸನ್

2016ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಶೇನ್ ವಾಟ್ಸನ್ 20 ವಿಕೆಟ್ ಪಡೆದು ಮಿಂಚಿದರು, ಆದರೆ ಅದೇ ಆವೃತ್ತಿಯಲ್ಲಿ ಶೇನ್ ವಾಟ್ಸನ್ ಬ್ಯಾಟಿಂಗ್‌ನಲ್ಲಿ ನೆಲ ಕಚ್ಚಿದ್ದರು. ಆ ಆವೃತ್ತಿಯಲ್ಲಿ ಒಂದೇ ಒಂದು ಅರ್ಧ ಶತಕವನ್ನು ಬಾರಿಸಿದ ವಾಟ್ಸನ್ ತೀರಾ ಕೆಳಮಟ್ಟದ ಪ್ರದರ್ಶನವನ್ನು ನೀಡಿದ್ದರು. ಇನ್ನು ಬೆಂಗಳೂರು ತಂಡದಲ್ಲಿದ್ದಾಗ ವ್ಯಾಟ್ಸನ್‌ಗೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಅವಕಾಶ ನೀಡುತ್ತಾ ಇದ್ದದ್ದೇ ಆತ ಕಳಪೆಯಾಗಲು ಕಾರಣ ಎಂಬ ವಾದವೂ ಇದೆ. ಬೇರೆ ತಂಡಗಳಲ್ಲಿ ಮೇಲಿನ ಕ್ರಮಾಂಕದ ಆಟಗಾರನಾಗಿ ವಾಟ್ಸನ್ ಕಣಕ್ಕಿಳಿಯುತ್ತಿದ್ದ ಕಾರಣ ಉತ್ತಮ ಪ್ರದರ್ಶನವನ್ನು ನೀಡಿದರು ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ವಾಟ್ಸನ್ ಕಳಪೆ ಪ್ರದರ್ಶನ ನೀಡಿದ ನಂತರ ಬೆಂಗಳೂರು ತಂಡ ಆತನನ್ನು ಕೈಬಿಟ್ಟಿತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, June 7, 2021, 16:26 [IST]
Other articles published on Jun 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X