ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಆರ್‌ಸಿಬಿ ತಂಡದಲ್ಲಿದ್ದರೂ ಒಮ್ಮೆಯೂ ಬೆಂಗಳೂರು ಪರ ಕಣಕ್ಕಿಳಿಯದ 5 ಪ್ರಖ್ಯಾತ ಆಟಗಾರರು

Ipl-5 Famous Players Who Were A Part Of Rcb But Never Played A Single Match

ಐಪಿಎಲ್‌ನಲ್ಲಿ ಖ್ಯಾತ ಆಟಗಾರರನ್ನು ಹೊಂದಿದ್ದರೂ ಒಮ್ಮೆಯೂ ಚಾಂಫಿಯನ್ ಪಟ್ಟಕ್ಕೇರದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಅದೇ ಕಾರಣಕ್ಕಾಗಿ ಆರ್‌ಸಿಬಿ ತಂಡವನ್ನು ಐಪಿಎಲ್ ಇತಿಹಾಸದ ನತದೃಷ್ಟ ತಂಡವೆಂದೇ ಹೇಳಲಾಗುತ್ತದೆ. ಕಳೆದ 12 ಆವೃತ್ತಿಗಳಲ್ಲಿ ಹಲವಾರು ಖ್ಯಾತ ಆಟಗಾರರು ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿದಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಆರ್‌ಸಿಬಿ ತಮಡದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಆದರೆ ಆರ್‌ಸಿಬಿಯ ಈ ಸುದೀರ್ಘ ಪ್ರಯಾಣದಲ್ಲಿ ಕ್ರಿಸ್ ಗೇಲ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಕೆವಿನ್ ಪೀಟರ್‌ಸನ್, ಯುವರಾಜ್ ಸಿಂಗ್‌ರಂತಾ ದಿಗ್ಗಜ ಆಟಗಾರರು ತಂಡದಲ್ಲಿ ಭಾಗವಾಗಿದ್ದರು.

ವಿಶ್ವದಾಖಲೆ ನಿರ್ಮಿಸಿದ ಇಂಗ್ಲೆಂಡ್ ಮಾರಕ ವೇಗಿ ಜೇಮ್ಸ್ ಆ್ಯಂಡರ್ಸನ್!ವಿಶ್ವದಾಖಲೆ ನಿರ್ಮಿಸಿದ ಇಂಗ್ಲೆಂಡ್ ಮಾರಕ ವೇಗಿ ಜೇಮ್ಸ್ ಆ್ಯಂಡರ್ಸನ್!

ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ತಂಡ ಅತಿ ಹೆಚ್ಚು ಆಟಗಾರನ್ನು ಬಳಸಿಕೊಂಡ ತಂಡ ಎಂಬ ದಾಖಲೆಯನ್ನು ಹೊಂದಿದೆ. ತಮ್ಮ ತಂಡದ ಕಾಂಬಿನೇಶನ್‌ಅನ್ನು ಆರ್‌ಸಿಬಿ ಸಾಮಾನ್ಯವೆಂಬಂತೆ ಬದಲಾವಣೆ ಮಾಡಿಕೊಂಡು ಬಂದಿದೆ. ಆದರೆ ಐವರು ಖ್ಯಾತ ಆಟಗಾರರು ಆರ್‌ಸಿಬಿ ತಂಡದ ಸ್ಕ್ವಾಡ್‌ನಲ್ಲಿದ್ದರೂ ಒಂದೇ ಒಂದು ಪಂದ್ಯದಲ್ಲೂ ಕಣಕ್ಕಿಳಿದಿಲ್ಲ. ಅಂತಾ ಆಟಗಾರರು ಯಾರು ಮುಂದೆ ಓದಿ..

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್

ಹಾಲಿ ಕ್ರಿಕೆಟ್‌ ಜಗತ್ತಿನಲ್ಲಿ ಮಿಂಚು ಹರಿಸುತ್ತಿರುವ ಆಟಗಾರ ಸ್ಟೀವ್ ಸ್ಮಿತ್ ಈ ಹಿಂದೆ ವಿರಾಟ್ ಕೊಹ್ಲಿ ಜೊತೆ ಒಂದೇ ತಂಡದ ಸ್ಕ್ವಾಡ್‌ನಲ್ಲಿ ಇದ್ದರು ಎಂಬುದು ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಅರಿತೇ ಇಲ್ಲ. ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿದ್ದ ನ್ಯೂಜಿಲೆಂಡ್‌ನ ಜೆಸ್ಸಿ ರೈಡರ್ 2010ರ ಆವೃತ್ತಿಯಲ್ಲಿ ಗಾಯಗೊಂಡು ಹೊರಬಿದ್ದಾಗ ಹಾಲಿ ರಾಜಸ್ಥಾನ ರಾಯಲ್ಸ್ ತಡದ ನಾಯಕನಾಗಿರುವ ಸ್ಟೀವ್ ಸ್ಮಿತ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಆದರೆ ಸ್ಟೀವ್ ಸ್ಮಿತ್‌ಗೆ ಆ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಕಣಕ್ಕಿಳಿಯುವ ಅವಕಾಶ ನೀಡದೆ ಬಳಿಕ ಅವರನ್ನು ತಂಡದಿಂದ ಬಿಡುಗಡೆಗೊಳಿಸಿತ್ತು.

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಕಣಕ್ಕಿಳಿಸದ ಇನ್ನೋರ್ವ ಖ್ಯಾತ ಆಟಗಾರನೆಂದರೆ ಅದು ಭುವನೇಶ್ವರ್ ಕುಮಾರ್. 2009 ಹಾಗೂ 2010ರ ಆವೃತ್ತಿಯಲ್ಲಿ ಭುವನೇಶ್ವರ್ ಕುಮಾರ್ ಆರ್‌ಸಿಬಿ ತಂಡದ ಸ್ಕ್ವಾಡ್‌ನಲ್ಲಿದ್ದರು. 2009ರಲ್ಲಿ ವೇಗಿಗಳಿಗೆ ಸೂಕ್ತವೆನಿಸಿದ್ದ ವಿದೇಶಿ ನೆಲದಲ್ಲ ಭುವನೇಶ್ವರ್ ಮಿಂಚಿದ್ದರೂ ಬೆಂಗಳೂರು ತಂಡ ಒಂದೇ ಒಂದು ಅವಕಾಶವನ್ನು ನೀಡಲಿಲ್ಲ. ಬಳಿಕ ಪುಣೆ ತಂಡವನ್ನು ಸೇರಿಕೊಂಡ ಭುವನೇಶ್ವರ್ ಕುಮಾರ್ ಅಲ್ಲಿ ಸ್ಟಾರ್ ಆಟಗಾರ ಎನಿಸಿಕೊಂಡರು. ಆದರೆ ಚಾಂಪಿಯನ್ಸ್ ಲೀಗ್‌ನಲ್ಲಿ ಭುವನೆಶ್ವರ್ ಕುಮಾರ್ ಡೆಲ್ಲಿ ಡೇರ್ ಡಿವಿಲ್ಸ್ ವಿರುದ್ಧ ಆರ್‌ಸಿಬಿ ಪರವಾಗಿ ಏಕೈಕ ಪಂದ್ಯವನ್ನಾಡುವ ಅವಕಾಶವನ್ನು 2009ರಲ್ಲಿ ಪಡೆದುಕೊಂಡಿದ್ದರು.

ಸುಬ್ರಮಣ್ಯಂ ಬದ್ರಿನಾಥ್

ಸುಬ್ರಮಣ್ಯಂ ಬದ್ರಿನಾಥ್

ಆರಂಭಿಕ ಸೀಸನ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಕಾರಣರಾಗಿದ್ದ ಆಟಗಾರರಲ್ಲಿ ಸುಬ್ರಮಣ್ಯಂ ಬದ್ರೀನಾಥ್ ಕೂಡ ಒಬ್ಬರು. ಆದರೆ ಧೋನಿ ನಾಯಕತ್ವದ ಫ್ರಾಂಚೈಸಿ ಬದ್ರೀನಾಥ್ ಅವರನ್ನು ತಂಡದಿಂದ ಬಿಡುಗಡೆಗೊಳಿಸಿದ ನಂತರ ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಂಡರು. 2015ರಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡ ಬದ್ರೀನಾಥ್ ಇಲ್ಲಿ ಕನಿಷ್ಟ ಒಂದು ಅವಕಾಶವನ್ನು ಗಳಿಸಿಕೊಳ್ಳಲೂ ವಿಫಲರಾದರು.

ನಥನ್ ಕೌಲ್ಟರ್‌ನೈಲ್

ನಥನ್ ಕೌಲ್ಟರ್‌ನೈಲ್

ಆಸ್ಟ್ರೇಲಿಯಾದ ನಥನ್ ಕೌಲ್ಟರ್‌ನೈಲ್ ವೇಗಿಯಾಗಿ ಹಾಗೂ ಆಲ್‌ರೌಂಡರ್ ಆಗಿ ವಿಶ್ವದ ಬೇಡಿಕೆಯ ಕ್ರಿಕೆಟಿಗನಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡದ ಆಟಗಾರನಾಗಿದ್ದಾರೆ. ಆದರೆ ಕಳೆದ 2019ರ ಆವೃತ್ತಿಯಲ್ಲಿ ಕೌಲ್ಟರ್‌ನೈಲ್ ಆರ್‌ಸಿಬಿ ತಂಡದ ಆಟಗಾರನಾಗಿದ್ದರು. ಅರ್‌ಸಿಬಿಯ ಬೌಲಿಂಗ್ ಸಮಸ್ಯೆಯ ಕಾರಣದಿಂದಾಗಿ ಕಳೆದ ಆವೃತ್ತಿಯಲ್ಲಿ ತಂಡಕ್ಕೆ ಕೌಲ್ಟರ್‌ನೈಲ್ ಅವರನ್ನು ಸೇರ್ಪಡೆಗೊಳಿಸಿತ್ತು. ಆದರೆ ಆರ್‌ಸಿಬಿ ತಂಡದಲ್ಲಿ ಕಣಕ್ಕಿಳಿಯುವ ಮುನ್ನವೇ ಕೌಲ್ಟರ್‌ನೈಲ್ ಗಾಯಗೊಂಡು ಹೊರಬಿದ್ದರು. ಬಳಿಕ ಆ ಸ್ಥಾನವನ್ನು ಆಫ್ರಿಕಾದ ವೇಗಿ ಡೇಲ್ ಸ್ಟೇನ್ ತುಂಬಿದ್ದಾರೆ.

ನುವಾನ್ ಪ್ರದೀಪ್

ನುವಾನ್ ಪ್ರದೀಪ್

ನುವಾನ್ ಪ್ರದೀಪ್ ಕಳೆದ ಕೆಲ ವರ್ಷಗಳಿಂದ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಆದರೆ ಶ್ರೀಲಂಕಾ ಅಯ್ಕೆಗಾರರ ಕಣ್ಣಿಗೆ ನುವಾನ್ ಪ್ರದೀಪ್ ಬೀಳುವ ಮುನ್ನವೇ ಆರ್‌ಸಿಬಿ ಈತನ ಮೇಲೆ ಕಣ್ಣಿಟ್ಟು ತಂಡಕ್ಕೆ ಸೇರ್ಪಡೆಗೊಳಿಸಿತ್ತು. 2011ರಲಲ್ಇ ಆರ್‌ಸಿಬಿ ಅಚ್ಚರಿಯ ರೀತಿಯಲ್ಲಿ ಒಪ್ಪಂದವನ್ನು ಮಾಡಿಕೊಂಡಿತ್ತಾದರೂ ಆರ್‌ಸಿಬಿ ಪರವಾಗಿ ಕಣಕ್ಕಿಳಿಯುವ ಅವಕಾಶ ಸಿಗಲಿಲ್ಲ. ಬಳಿಕ ಆರ್‌ಸಿಬಿ ತಂಡದಿಂದ ಹೊರಬಿದ್ದ ನುವಾನ್ ಪ್ರದೀಪ್ ಐಪಿಎಲ್‌ನಲ್ಲಿ ಈವರೆಗೂ ಕಮ್‌ಬ್ಯಾಕ್ ಮಾಡಲು ಸಾಧ್ಯವಾಲೇ ಇಲ್ಲ.

Story first published: Wednesday, August 26, 2020, 16:05 [IST]
Other articles published on Aug 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X