ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಆಟಗಾರರ ಹರಾಜಿಗೆ ಬ್ರೇಕ್; ಇನ್ನುಮುಂದೆ ಇರುವುದಿಲ್ಲ ಮೆಗಾ ಹರಾಜು?

IPL: As per reports No more mega auctions to be held after IPL 2022

ಇತ್ತೀಚೆಗಷ್ಟೇ ನಡೆದ ನೂತನ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆಯಲ್ಲಿ ಅಹ್ಮದಾಬಾದ್ ಮತ್ತು ಲಖನೌ ತಂಡಗಳು ಘೋಷಣೆಯಾದವು. ಹೀಗಾಗಿ ಈ 2 ನೂತನ ಫ್ರಾಂಚೈಸಿಗಳ ಸೇರ್ಪಡೆಯಿಂದ ಮುಂಬರಲಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮತ್ತಷ್ಟು ವಿಸ್ತಾರವಾಗುತ್ತಿದ್ದು 10 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಹೌದು, 8 ತಂಡಗಳೊಂದಿಗೆ ನಡೆದ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದಾಗಿದ್ದು ಮುಂಬರುವ ವರ್ಷ 2 ನೂತನ ತಂಡಗಳಾದ ಲಖನೌ ಮತ್ತು ಅಹಮದಾಬಾದ್ ಸೇರ್ಪಡೆಯಿಂದ 10 ತಂಡಗಳೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯಲಿದೆ. ಹೀಗಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ತಂಡಗಳ ನಡುವಿನ ಹಣಾಹಣಿ ಮತ್ತಷ್ಟು ಕುತೂಹಲ ಮತ್ತು ರೋಚಕತೆಯಿಂದ ಕೂಡಿರುವುದಂತೂ ಖಚಿತ.

ಭಾರತ vs ನ್ಯೂಜಿಲೆಂಡ್‌: 2ನೇ ಟೆಸ್ಟ್‌ನಿಂದ ಯಾರು ಹೊರಕ್ಕೆ? ದ್ರಾವಿಡ್ ಹೇಳಿದ್ದಿಷ್ಟುಭಾರತ vs ನ್ಯೂಜಿಲೆಂಡ್‌: 2ನೇ ಟೆಸ್ಟ್‌ನಿಂದ ಯಾರು ಹೊರಕ್ಕೆ? ದ್ರಾವಿಡ್ ಹೇಳಿದ್ದಿಷ್ಟು

ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಲಖನೌ ಮತ್ತು ಅಹಮದಾಬಾದ್ ತಂಡಗಳು ಸೇರ್ಪಡೆಯಾಗುತ್ತಿರುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಸದ್ಯ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ಯಾವ ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಳ್ಳಲಿದೆ ಎಂಬ ವರದಿಯನ್ನು ನವೆಂಬರ್ 30ರೊಳಗೆ ಸಲ್ಲಿಸಬೇಕೆಂದು ಬಿಸಿಸಿಐ ಸೂಚನೆ ನೀಡಿತ್ತು. ಹೀಗಾಗಿ ಯಾವ ಫ್ರಾಂಚೈಸಿಗಳು ಯಾವ ಯಾವ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಿವೆ ಎಂಬ ಕುತೂಹಲ ಹೆಚ್ಚಾಗಿತ್ತು.

ಹೀಗಾಗಿ ಸದ್ಯ ಅಸ್ತಿತ್ವದಲ್ಲಿರುವ ಎಲ್ಲ 8 ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿದ್ದೇವೆ ಎಂಬುದರ ಮಾಹಿತಿಯನ್ನು ಇಂದು ( ನವೆಂಬರ್‌ 30 ) ಬಿಸಿಸಿಐಗೆ ಸಲ್ಲಿಸುತ್ತಿದ್ದು ಯಾವ ಆಟಗಾರರು ರಿಟೇನ್ ಆಗಲಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ. ಹಾಗೂ ರಿಟೈನ್ ಆಗದೇ ಫ್ರಾಂಚೈಸಿಗಳಿಂದ ಕೈಬಿಡಲಾಗುವ ಆಟಗಾರರು ಡಿಸೆಂಬರ್ ಅಂತಿಮ ವಾರ ಅಥವಾ ಜನವರಿ ಮೊದಲ ವಾರದಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಹರಾಜಾಗಲಿದ್ದಾರೆ.

ಜೀವನದುದ್ದಕ್ಕೂ ವರ್ಣಭೇದ ತಾರತಮ್ಯಕ್ಕೆ ಒಳಗಾಗಿದ್ದೇನೆ: ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ಜೀವನದುದ್ದಕ್ಕೂ ವರ್ಣಭೇದ ತಾರತಮ್ಯಕ್ಕೆ ಒಳಗಾಗಿದ್ದೇನೆ: ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್

ಹೀಗೆ ಮೆಗಾ ಹರಾಜಿನ ದಿನಗಳು ಸನಿಹ ಬರುತ್ತಿದ್ದಂತೆಯೇ ಈ ಕುರಿತಾಗಿ ಭಾರೀ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿದ್ದು, ಇದೀಗ ಈ ಮೆಗಾ ಹರಾಜಿನ ಕುರಿತಾಗಿ ದೊಡ್ಡದೊಂದು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆ ಮುಗಿದ ನಂತರ ಮುಂಬರುವ ಯಾವುದೇ ವರ್ಷಗಳಲ್ಲಿಯೂ ಮೆಗಾ ಹರಾಜು ನಡೆಯುವುದಿಲ್ಲ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ.

ಈ ಕುರಿತಾಗಿ ಖ್ಯಾತ ಕ್ರಿಕೆಟ್ ಚಿಂತಕ ಕೆ ಶ್ರೀನಿವಾಸ್ ರಾವ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಒಂದು ಟ್ವೀಟ್ ಮಾಡಿದ್ದು, ಅದು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಂಪರ್ ಘೋಷಣೆ: ಈ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಬಹುಶಃ ಕೊನೆಯ ಮೆಗಾ ಹರಾಜು ಆಗಲಿದೆ. ಇನ್ನೂ ಕೆಲವೊಂದಿಷ್ಟು ವರ್ಷಗಳ ಕಾಲ, ಬಹುಶಃ ಶಾಶ್ವತವಾಗಿ ಮತ್ತೆ ಐಪಿಎಲ್ ಮೆಗಾ ಹರಾಜು ನಡೆಯುವುದಿಲ್ಲ ಎಂದು ಎನಿಸುತ್ತದೆ. ಫ್ರಾಂಚೈಸಿಗಳು ಸ್ವಂತವಾಗಿ ಆಟಗಾರರ ಖರೀದಿ ಮಾಡುವ ಸಮಯ ಹತ್ತಿರವಿದೆ. ಮೆಗಾ ಹರಾಜು ಸದ್ಯ ತೀರಾ ಹಳೆಯ ವಿಷಯವಾಗಿದೆ ಎಂದು ಕೆ ಶ್ರೀನಿವಾಸ್ ರಾವ್ ಟ್ವೀಟ್ ಮಾಡಿದ್ದಾರೆ.

ಕಾನ್ಪುರ ಟೆಸ್ಟ್: ಗೆದ್ದೇಬಿಟ್ಟೆವು ಎಂಬ ಉತ್ಸಾಹದಲ್ಲಿದ್ದ ಟೀಮ್ ಇಂಡಿಯಾಗೆ ಉಲ್ಟಾ ಹೊಡೆದಿದ್ದು ಈ 3 ಅಂಶಗಳು!ಕಾನ್ಪುರ ಟೆಸ್ಟ್: ಗೆದ್ದೇಬಿಟ್ಟೆವು ಎಂಬ ಉತ್ಸಾಹದಲ್ಲಿದ್ದ ಟೀಮ್ ಇಂಡಿಯಾಗೆ ಉಲ್ಟಾ ಹೊಡೆದಿದ್ದು ಈ 3 ಅಂಶಗಳು!

ಹೀಗೆ ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ದೊಡ್ಡ ಮಟ್ಟಿಗೆ ಚರ್ಚೆಗಳು ನಡೆಯುತ್ತಿದ್ದು, ಈ ಸುದ್ದಿಗಳ ಪ್ರಕಾರ ಈ ಬಾರಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಕೊನೆಯ ಮೆಗಾ ಹರಾಜು ಆಗಲಿದೆಯಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿಯೂ ಮೂಡಿದೆ. ಅಷ್ಟೇ ಅಲ್ಲದೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಫ್ರಾಂಚೈಸಿಗಳಿಗೆ ನೀಡಿ ಮೆಗಾ ಹರಾಜು ನಡೆಸದೇ ಹೋದರೆ ಹೆಚ್ಚು ಹಣ ಇರುವ ಪ್ರಬಲ ಫ್ರಾಂಚೈಸಿಗಳು ಸಾಮಾನ್ಯ ಫ್ರಾಂಚೈಸಿಗಳ ಮೇಲೆ ಹಿಡಿತ ಸಾಧಿಸುವ ಸಾಧ್ಯತೆಗಳು ಹೆಚ್ಚಿವೆ ಎಂಬ ಅನನುಕೂಲವನ್ನು ಕೂಡ ನೆಟ್ಟಿಗರು ಬಿಚ್ಚಿಟ್ಟಿದ್ದಾರೆ.

KL Rahul ಹಾಗು Rashid Khanಗೆ ಎದುರಾಯಿತು ಭಾರೀ ಕಂಟಕ | Oneindia Kannada

Story first published: Tuesday, November 30, 2021, 12:41 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X