ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು 2018 : ಕ್ರಿಸ್ ಗೇಯ್ಲ್ ರನ್ನು ಕೇಳುವವರೇ ಇಲ್ಲ!

IPL Auction 2018: Chris Gayle goes unsold in 1st round

ಬೆಂಗಳೂರು, ಜನವರಿ 27: ಒಂದು ಕಾಲದಲ್ಲಿ ಐಪಿಎಲ್ ಎಂದರೆ ಗೇಯ್ಲ್ ಎಂಬಷ್ಟರ ಮಟ್ಟಿಗೆ ಮನರಂಜನೆ ನೀಡಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಯ್ಲ್ ಐಪಿಎಲ್ 11 ರಲ್ಲಿ ಕೇಳುವವರೇ ಇಲ್ಲದಂತಾಗಿದ್ದಾರೆ!

ಕಳೆದ ಇಂಡಿಯನ್ ಕ್ರೀಮಿಯರ್ ಲೀಗ್ 10 ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣಕ್ಕೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕೈಬಿಡಲಾಗಿತ್ತು. ಇಂದಿನಿಂದ (ಜ.27-28)ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ 11 ನೇ ಆವೃತ್ತಿಯ ಹರಾಜಿ ಪ್ರಕ್ರಿಯೆಯಲ್ಲಿ ಮೊದಲ ಹಂತದ ಹರಾಜು ಮುಗಿಯುತ್ತ ಬಂದರೂ ಯಾವ ಬಿಡ್ಡರ್ಸ್ ಗಳೂ ಗೇಯ್ಲ್ ಅವರತ್ತ ತಿರುಗಿ ನೋಡದಿರುವುದು ಅಚ್ಚರಿಯ ಸಂಗತಿ ಎನ್ನಿಸಿದೆ.

LIVE: ಐಪಿಎಲ್ 2018 ಹರಾಜು: ಕಿಂಗ್ಸ್ 11 ಪಂಜಾಬ್ ಗೆ 'ಯುವಿ'LIVE: ಐಪಿಎಲ್ 2018 ಹರಾಜು: ಕಿಂಗ್ಸ್ 11 ಪಂಜಾಬ್ ಗೆ 'ಯುವಿ'

ಆರ್ ಸಿಬಿ ಸಹ ರೈಟ್ ಟು ಮ್ಯಾಚ್ ಕಾರ್ಡ್ ಅನ್ನೂ ಬಳಸದಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ. ಅಂದರೆ ತಂಡಕ್ಕೂ ಗೇಯ್ಲ್ ಅವರನ್ನು ಉಳಿಸಿಕೊಳ್ಳುವ ಇರಾದೆ ಇದ್ದಂತಿಲ್ಲ!

ರಾಯಲ್ ಚಾಲೆಂಜರ್ಸ್ ಪರ ಆಡುತ್ತಿದ್ದ ಗೇಯ್ಲ್ ಹೆಸರಲ್ಲಿ ಐಪಿಎಲ್ ಆಟಗಾರನೊಬ್ಬನ ವೈಯಕ್ತಿಕ ಗರಿಷ್ಠ ಮೊತ್ತ(175*)ದ ದಾಖಲೆ ಇದೆ. 2013 ರ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಕೇವಲ 66 ಎಸೆತಗಳಿಗೆ ಅಜೇಯ 175 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲೇ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಬರೆದಿದ್ದರು. ಈ ಪಂದ್ಯದಲ್ಲಿ ಅವರು 17 ಸಿಕ್ಸ್ ಮತ್ತು 13 ಬೌಂಡರಿ ಬಾರಿಸಿದ್ದರು.

ಆರ್‌ಸಿಬಿ ಖರೀದಿಸಿದ ಮೊದಲ ಆಟಗಾರ ಮೆಕ್ಲಂಆರ್‌ಸಿಬಿ ಖರೀದಿಸಿದ ಮೊದಲ ಆಟಗಾರ ಮೆಕ್ಲಂ

ಅತೀ ಬೇಡಿಕೆಯ ಆಟಗಾರರಾಗಿದ್ದ ಕ್ರಿಸ್ ಗೇಯ್ಲ್ ಅವರ ಐಪಿಎಲ್ ಮೂಲ ಬೆಲೆಯೇ 2 ಕೋಟಿ ರೂ. ಆದರೆ ಅವರ ಕಳಪೆ ಪ್ರದರ್ಶನದಿಂದಾಗಿ ಹರಾಜಿನ ಮೊದಲ ಸುತ್ತಿನಲ್ಲಿ ಅವರನ್ನು ಯಾರೂ ಖರೀದಿಸಿಲ್ಲ.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

Story first published: Saturday, January 27, 2018, 16:56 [IST]
Other articles published on Jan 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X