ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು 2021: ಕೊನೆ ಕ್ಷಣದಲ್ಲಿ ಎಂಟ್ರಿ ಕೊಟ್ಟ ಬಾಂಗ್ಲಾದೇಶಿ ಕ್ರಿಕೆಟರ್

IPL auction 2021: Mushfiqur Rahim makes late entry

ಚೆನ್ನೈ, ಫೆಬ್ರವರಿ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ಫೆಬ್ರವರಿ 18ರಂದು ಮಧ್ಯಾಹ್ನ ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೆ ಸಿದ್ಧವಾಗಿರುವ ಆಟಗಾರರ ಅಂತಿಮ ಪಟ್ಟಿಯಿಂದ ಕೊನೆ ಕ್ಷಣದಲ್ಲಿ ಇಂಗ್ಲೆಂಡಿನ ಮಾರ್ಕ್ ವುಡ್ ಹೊರಬಿದ್ದಿದ್ದಾರೆ. ಅವರ ಬದಲಿಗೆ ಬಾಂಗ್ಲಾದೇಶದ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಟ್ರಿ ಕೊಟ್ಟಿದ್ದಾರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 8 ಫ್ರಾಂಚೈಸಿಗಳು ವಿವಿಧ ಸ್ಲಾಟ್ ಗಳಲ್ಲಿರುವ ಆಟಗಾರರನ್ನು ಆಯ್ಕೆ ಮಾಡಲಿವೆ. ಒಟ್ಟಾರೆ, 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು ಹಾಗೂ 3 ಅಸೋಸಿಯೇಟೆಡ್ ದೇಶಗಳ ಆಟಗಾರರು ಹರಾಜಿಗೆ ಸಿದ್ಧವಾಗಿದ್ದಾರೆ.

IPL 2021 Auction Live Updates‌: ಕ್ಷಣ ಕ್ಷಣದ ಮಾಹಿತಿIPL 2021 Auction Live Updates‌: ಕ್ಷಣ ಕ್ಷಣದ ಮಾಹಿತಿ

68 ವಿದೇಶಿ ಆಟಗಾರರು ಸೇರಿದಂತೆ ಸುಮಾರು 1114 ಆಟಗಾರರು ನೋಂದಾಯಿಸಿಕೊಂಡಿದ್ದರು. ಈ ಪಟ್ಟಿಯಲ್ಲಿರುವ ಆಟಗಾರರ ಸಂಖ್ಯೆಯಲ್ಲಿ ಕಡಿತಗೊಳಿಸಿ 292ಕ್ಕೆ ಇಳಿಸಲಾಗಿತ್ತು.

ಲೇಟ್ ಎಂಟ್ರಿ ಯಾರು?:
ಇಂಗ್ಲೆಂಡಿನ ಮಾರ್ಕ್ ವುಡ್ ಬದಲಿಗೆ ಬಾಂಗ್ಲಾದೇಶಿ ವಿಕೆಟ್ ಕೀಪರ್ ಮುಷ್ಫಿಕರ್ ರಹೀಂ ಎಂಟ್ರಿ ಕೊಟ್ಟಿದ್ದಾರೆ. ಕಳೆದ 13 ಬಾರಿ ಯಾವ ತಂಡವೂ ರಹೀಂರನ್ನು ಖರೀದಿಸಲು ಆಸಕ್ತಿ ತೋರಿರಲಿಲ್ಲ. 14ನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ರಹೀಂ ಇಳಿದಿದ್ದಾರೆ.

ಐಪಿಎಲ್ 2021: ಅತಿ ಹೆಚ್ಚು ಬೆಲೆಗೆ ಸೇಲ್ ಆಗಬಲ್ಲ 5 ಕ್ರಿಕೆಟರ್ಸ್ ಯಾರು? ಐಪಿಎಲ್ 2021: ಅತಿ ಹೆಚ್ಚು ಬೆಲೆಗೆ ಸೇಲ್ ಆಗಬಲ್ಲ 5 ಕ್ರಿಕೆಟರ್ಸ್ ಯಾರು?

33 ವರ್ಷ ವಯಸ್ಸಿನ ರಹೀಂ ಟಿ20ಯಲ್ಲಿ 4,288 ರನ್ ಗಳಿಸಿದ್ದು, 127.96 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 25 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್ ನಲ್ಲಿ ಮೊಹಮ್ಮದ್ ಅಶ್ರಪುಲ್, ಮಶ್ರಾಫೆ ಮೊರ್ತಾಜಾ, ಅಬ್ದುಲ್ ರಜಾಕ್, ಶಕೀಲ್ ಅಲ್ ಹಸನ್ ಆಡಿದ್ದಾರೆ. ಆದರೆ, ರಹೀಂಗೆ ಇನ್ನೂ ಲಕ್ ಒಲಿದಿಲ್ಲ. ಬಾಂಗ್ಲಾದೇಶ್ ಪ್ರೀಮಿಯಂ ಲೀಗ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರೆನಿಸಿದ್ದು, 85 ಪಂದ್ಯಗಳಿಂದ 2274ರನ್, 15 ಅರ್ಧ ಶತಕ ಬಾರಿಸಿದ್ದು 98 ಗರಿಷ್ಠ ಮೊತ್ತವಾಗಿದೆ.

ಐಪಿಎಲ್ 2021ರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗಾಗಿ ಹುಡುಕುತ್ತಿರುವ ತಂಡಗಳು ರಹೀಂ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದ್ದು, ಈ ಬಾರಿ ಅದೃಷ್ಟ ಹೇಗಿದೆ ಕಾದು ನೋಡಬೇಕಿದೆ.

Story first published: Thursday, February 18, 2021, 14:11 [IST]
Other articles published on Feb 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X