ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನತದೃಷ್ಟ ಕ್ರಿಕೆಟರ್ ಮುಷ್ಫಿಕರ್ ರಹೀಂಗೆ 2021ರಲ್ಲೂ ಒಲಿಯದ ಅದೃಷ್ಟ

IPL auction 2021: Mushfiqur Rahim unsold for the record 14th time

ಚೆನ್ನೈ, ಫೆಬ್ರವರಿ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ಫೆಬ್ರವರಿ 18ರಂದು ಹರಾಜು ಪ್ರಕ್ರಿಯೆ ನಡೆಯಿತು. ಹರಾಜಿಗೆ ಸಿದ್ಧವಾಗಿರುವ ಆಟಗಾರರ ಅಂತಿಮ ಪಟ್ಟಿಗೆ ಕೊನೆ ಕ್ಷಣದಲ್ಲಿ ಸೇರ್ಪಡೆಗೊಂಡ ಬಾಂಗ್ಲಾದೇಶದ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮುಷ್ಫಿಕರ್ ರಹೀಂಗೆ ಈ ಬಾರಿಯೂ ಅದೃಷ್ಟ ಕೈ ಕೊಟ್ಟಿದೆ.

ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 8 ಫ್ರಾಂಚೈಸಿಗಳು ವಿವಿಧ ಸ್ಲಾಟ್ ಗಳಲ್ಲಿರುವ ಆಟಗಾರರನ್ನು ಆಯ್ಕೆ ಮಾಡಿವೆ. ಒಟ್ಟಾರೆ, 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು ಹಾಗೂ 3 ಅಸೋಸಿಯೇಟೆಡ್ ದೇಶಗಳ ಆಟಗಾರರು ಹರಾಜಿಗೆ ಸಿದ್ಧವಾಗಿದ್ದರು.

ಐಪಿಎಲ್: ಅತಿ ಹೆಚ್ಚು ಬೆಲೆಗೆ ಮಾರಾಟವಾದ ವಿದೇಶಿ ಕ್ರಿಕೆಟರ್ ಮೊರಿಸ್ಐಪಿಎಲ್: ಅತಿ ಹೆಚ್ಚು ಬೆಲೆಗೆ ಮಾರಾಟವಾದ ವಿದೇಶಿ ಕ್ರಿಕೆಟರ್ ಮೊರಿಸ್

68 ವಿದೇಶಿ ಆಟಗಾರರು ಸೇರಿದಂತೆ ಸುಮಾರು 1114 ಆಟಗಾರರು ನೋಂದಾಯಿಸಿಕೊಂಡಿದ್ದರು. ಈ ಪಟ್ಟಿಯಲ್ಲಿರುವ ಆಟಗಾರರ ಸಂಖ್ಯೆಯಲ್ಲಿ ಕಡಿತಗೊಳಿಸಿ 292ಕ್ಕೆ ಇಳಿಸಲಾಗಿತ್ತು.

ಇಂಗ್ಲೆಂಡಿನ ಮಾರ್ಕ್ ವುಡ್ ಬದಲಿಗೆ ಬಾಂಗ್ಲಾದೇಶಿ ವಿಕೆಟ್ ಕೀಪರ್ ಮುಷ್ಫಿಕರ್ ರಹೀಂ ಎಂಟ್ರಿ ಕೊಟ್ಟಿದ್ದರು. ಕಳೆದ 13 ಬಾರಿ ಯಾವ ತಂಡವೂ ರಹೀಂರನ್ನು ಖರೀದಿಸಲು ಆಸಕ್ತಿ ತೋರಿರಲಿಲ್ಲ. 14ನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ರಹೀಂ ಇಳಿದಿದ್ದರು. ಈ ಬಾರಿ ಸುಲಭವಾಗಿ ಯಾವುದೇ ಹೆಚ್ಚಿನ ಪೈಪೋಟಿ ಇಲ್ಲದೆ ಅನ್ ಸೋಲ್ಡ್ ಆಗಿದ್ದಾರೆ.

ಐಪಿಎಲ್ 2021: ಹರಾಜಾದ, ಹರಾಜಾಗದ ಕ್ರಿಕೆಟರ್ಸ್ ಪೂರ್ಣ ಪಟ್ಟಿಐಪಿಎಲ್ 2021: ಹರಾಜಾದ, ಹರಾಜಾಗದ ಕ್ರಿಕೆಟರ್ಸ್ ಪೂರ್ಣ ಪಟ್ಟಿ

33 ವರ್ಷ ವಯಸ್ಸಿನ ರಹೀಂ ಟಿ20ಯಲ್ಲಿ 4,288 ರನ್ ಗಳಿಸಿದ್ದು, 127.96 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 25 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್ ನಲ್ಲಿ ಮೊಹಮ್ಮದ್ ಅಶ್ರಪುಲ್, ಮಶ್ರಾಫೆ ಮೊರ್ತಾಜಾ, ಅಬ್ದುಲ್ ರಜಾಕ್, ಶಕೀಲ್ ಅಲ್ ಹಸನ್ ಆಡಿದ್ದಾರೆ. ಆದರೆ, ರಹೀಂಗೆ ಇನ್ನೂ ಲಕ್ ಒಲಿದಿಲ್ಲ. ಬಾಂಗ್ಲಾದೇಶ್ ಪ್ರೀಮಿಯಂ ಲೀಗ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರೆನಿಸಿದ್ದು, 85 ಪಂದ್ಯಗಳಿಂದ 2274ರನ್, 15 ಅರ್ಧ ಶತಕ ಬಾರಿಸಿದ್ದು 98 ಗರಿಷ್ಠ ಮೊತ್ತವಾಗಿದೆ.

Story first published: Friday, February 19, 2021, 9:40 [IST]
Other articles published on Feb 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X