ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಂಪೋ ಚಾಲಕರೊಬ್ಬರ ಮಗ ಚೇತನ್ ರಾಯಲ್ಸ್ ತಂಡಕ್ಕೆ ಸೇರ್ಪಡೆ

IPL Auction 2021: Who is Chetan Sakariya sold to RR for Rs 1.2 Crore

ಯುವ ಪ್ರತಿಭಾವಂತರಿಗೆ ವೇದಿಕೆ ಒದಗಿಸುವ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2021ರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಫೆ.18ರಂದು ಚೆನ್ನೈನಲ್ಲಿ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಗಮನ ಸೆಳೆದ ಖರೀದಿ ಪೈಕಿ ಚೇತನ್ ಸಕಾರಿಯಾ ಅವರಿಗಾಗಿ ಮಾಡಿದ ಬಿಡ್ಡಿಂಗ್ ಕೂಡಾ ಒಂದು. ರಾಜಸ್ಥಾನ ರಾಯಲ್ಸ್ ತಂಡ ಸೇರಿದ ಚೇತನ್ ಸಕಾರಿಯಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಒಂದು ಕಾಲದಲ್ಲಿ ಚೇತನ್ ಸಕಾರಿಯಾ ಅವರ ತಂದೆ ಟೆಂಪೋ ಚಾಲಕರಾಗಿದ್ದರು. ತಮ್ಮ ಮಗ ಕ್ರಿಕೆಟ್ ಸ್ಟಾರ್ ಆಗಬೇಕು ಎಂದು ಕನಸು ಕಂಡಿದ್ದರು. 22 ವರ್ಷ ವಯಸ್ಸಿನ ಚೇತನ್ ಭರ್ಜರಿ 1.2 ಕೋಟಿ ರು ಗಳಿಗೆ ಮಾರಾಟವಾಗಿದ್ದಾರೆ. ಸೌರಾಷ್ಟ್ರ ಮೂಲದ ಎಡಗೈ ವೇಗದ ಬೌಲರ್ ಗೆ ಭರ್ಜರಿ ಮೊತ್ತ ನೀಡಿ ರಾಯಲ್ಸ್ ಖರೀದಿಸಿದೆ.

ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡು ಅಗಲಿದ ತಮ್ಮನ ಅಗಲಿಕೆಯ ನೋವಿನಲ್ಲಿದ್ದ ಚೇತನ್ ಹಾಗೂ ಕುಟುಂಬಸ್ಥರಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಂತರ ಸಂತಸ ಮೂಡಿದೆ. ತಮ್ಮನ ಆಸೆಯಂತೆ ಐಪಿಎಲ್ ತಂಡ ಸೇರಿದ ಖುಷಿ ಚೇತನ್ ರಲ್ಲಿ ಮೂಡಿದೆ.

ಮನೆಯಲ್ಲಿ ಟಿವಿ ಕೂಡಾ ಇರದ ಬಡತನ ಪರಿಸ್ಥಿತಿಯಲ್ಲಿ ಚೇತನ್ ಅವರ ತಂದೆ ಗುಜರಾತಿನ ವರ್ತೇಜ್ ಎಂಬಲ್ಲಿ ಟೆಂಪೋ ಚಾಲನೆ ಮಾಡಿ ದುಡಿದು ಸಂಸಾರ ನಡೆಸಿದ್ದಾರೆ. ಸ್ನೇಹಿತರ ಮನೆಯಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಾ ಬೆಳೆದ ಚೇತನ್, ಜನವರಿಯಲ್ಲಿ ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ನಾನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿದ್ದೆ. ನನಗೆ ಸಾವಿನ ಸುದ್ದಿಯನ್ನು ಕುಟುಂಬಸ್ಥರು ಮುಟ್ಟಿಸಲೇ ಇಲ್ಲ, ರಾಹುಲ್ (ತಮ್ಮ) ಬಗ್ಗೆ ಕೇಳಿದಾಗ, ಹೊರಗಡೆ ಹೋಗಿದ್ದಾನೆ ಎಂದಷ್ಟೇ ಹೇಳುತ್ತಿದ್ದರು. ಅವನ ಅಗಲಿಕೆ ನಷ್ಟ ತುಂಬಲು ಸಾಧ್ಯವಿಲ್ಲ, ಇಂದು ಐಪಿಎಲ್ ತಂಡಕ್ಕೆ ಆಯ್ಕೆಯಾಗಿದ್ದು ತಿಳಿದಿದ್ದರೆ ಅವನು ತುಂಬಾ ಸಂತಸ ಪಡುತ್ತಿದ್ದ ಎಂದು ಚೇತನ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಆರ್ ಸಿಬಿ ನೆಟ್ ಬೌಲರ್
ಯುಎಇಯಲ್ಲಿ ನಡೆದ ಕಳೆದ ಐಪಿಎಲ್ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ಬೌಲರ್ ಆಗಿ ಚೇತನ್ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸೈಮನ್ ಕಾಟಿಚ್ ಹಾಗೂ ಮೈಕ್ ಹೆಸ್ಸನ್ ಮಾರ್ಗದರ್ಶನವನ್ನು ಸ್ಮರಿಸಿದ್ದಾರೆ. ಮೊಟ್ಟಮೊದಲು ರಾಜ್ ಕೋಟ್ ಶಿಫ್ಟ್ ಆಗಿ ಸ್ವಂತ ಮನೆ ಖರೀದಿಸುವುದು ನನ್ನ ಮೊದಲ ಆದ್ಯತೆ ಎಂದಿದ್ದಾರೆ.

Story first published: Friday, February 19, 2021, 16:32 [IST]
Other articles published on Feb 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X