ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು: ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಫುಲ್ ಡಿಮ್ಯಾಂಡ್, ಭಾರೀ ಬೆಲೆಗೆ ಬಿಕರಿಯಾಗುವ ಸಾಧ್ಯತೆ

Prasidh Krishna

ಐಪಿಎಲ್ ಮೆಗಾ ಹರಾಜಿಗೆ ಸರಿಯಾಗಿ ಒಂದು ದಿನ ಇರುವಂತೆ ಕನ್ನಡಿಗ ಪ್ರಸಿದ್ಧ ಕೃಷ್ಣ ಬೊಂಬಾಟ್ ಪ್ರದರ್ಶನ ನೀಡುವ ಮೂಲಕ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾದ ಯುವ ಬೌಲರ್, ಕನ್ನಡಿಗ ಪ್ರಸಿದ್ಧ ಕೃಷ್ಣ ನಿನ್ನೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಮೂರು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಅದ್ರಲ್ಲೂ ಪ್ರತಿ ಪಂದ್ಯದಲ್ಲೂ ಮಿಂಚಿದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಅವರು ಮೆಗಾ ಹರಾಜಿನಲ್ಲಿ ಮತ್ತಷ್ಟು ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.

ಏಕದಿನ ಸರಣಿಯುದ್ದಕ್ಕೂ ಪ್ರಭಾವ ಬೀರಿದ ಕನ್ನಡಿಗ ಪ್ರಮುಖ ವಿಕೆಟ್‌ಗಳನ್ನ ಪಡೆಯುವಲ್ಲಿ ಯಶಸ್ವಿಯಾದ್ರು. ಮೊದಲ ಏಕದಿನ ಪಂದ್ಯದಲ್ಲಿ ಎರಡು, ಎರಡನೇ ಏಕದಿನದಲ್ಲಿ ನಾಲ್ಕು ಹಾಗೂ ಮೂರನೇ ಏಕದಿನದಲ್ಲಿ ಮೂರು ವಿಕೆಟ್ ಪಡೆದು ಒಟ್ಟು 9 ವಿಕೆಟ್ ಕಬಳಿಸಿದ್ದು, ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ಸಹ ಬಾಚಿಕೊಂಡಿದ್ದಾರೆ.

1 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿರುವ ಕೃಷ್ಣ

1 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿರುವ ಕೃಷ್ಣ

ಮೆಗಾ ಹರಾಜಿನಲ್ಲಿ 1 ಕೋಟಿ ಮೂಲ ಬಹುಮಾನ ಹೊಂದಿರುವ ಪ್ರದೀಪ್ ಕೃಷ್ಣ ಅವರಿಗೆ ಫ್ರಾಂಚೈಸಿಗಳು ಕೋಟ್ಯಂತರ ರೂಪಾಯಿ ಸುರಿಯುವುದು ಖಚಿತ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ಫ್ರಾಂಚೈಸಿಗಳು ಪ್ರಸಿದ್ಧ್ ಕೃಷ್ಣಗಾಗಿ ಹರಾಜಿನಲ್ಲಿ ಸ್ಪರ್ಧಿಸಬಹುದೆಂದು ಅವರು ನಿರೀಕ್ಷಿಸುತ್ತಾರೆ. ಅಲ್ಲದೆ, ಹರಾಜಿನಲ್ಲಿ ಪ್ರದೀಪ್ 8 ರಿಂದ 10 ಕೋಟಿ ರೂ.ವರೆಗೂ ಬಿಕರಿಯಾಗುವ ಸಾಧ್ಯತೆಯಿದೆ.

ಏಕೆಂದರೆ ಪ್ರಸಿದ್ಧ ಕೃಷ್ಣ ಭಾರತದ ಪರ ಮೊದಲ 7 ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಭಾರತದ ಬೌಲರ್ ಎಂಬ ಸಾಧನೆಯನ್ನು ಸಹ ಮಾಡಿದ್ದಾರೆ. ಈ ಮೊದಲು ಜಸ್ಪ್ರೀತ್ ಬುಮ್ರಾ ಮತ್ತು ಮಾಜಿ ಬೌಲರ್ ಅಜಿತ್ ಅಗರ್ಕರ್ 16 ವಿಕೆಟ್ ಕಬಳಿಸಿದ್ರು. ಆದ್ರೆ ಪ್ರಸಿದ್ಧ ಕೃಷ್ಣ 18 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ.

IPL 2022 Auction Live Updates: ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭ

ಯುಜವೇಂದ್ರ ಚಹಾಲ್ ಮೇಲೂ ಕಣ್ಣಿಟ್ಟಿವೆ ಫ್ರಾಂಚೈಸಿ

ಯುಜವೇಂದ್ರ ಚಹಾಲ್ ಮೇಲೂ ಕಣ್ಣಿಟ್ಟಿವೆ ಫ್ರಾಂಚೈಸಿ

ಭಾರತ ಮತ್ತು ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ಪ್ರಸಿದ್ಧ ಕೃಷ್ಣ ಅಷ್ಟೇ ಅಲ್ಲದೆ ಮಿಂಚಿದ ಯುಜವೇಂದ್ರ ಚಹಾಲ್, ದೀಪಕ್ ಹೂಡಾ, ದೀಪಕ್ ಚಹಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರು ಹರಾಜಿನಲ್ಲಿ ಭಾರಿ ಬಿಡ್ ಪಡೆಯಲಿದ್ದಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ವಿಶೇಷವಾಗಿ ಚಹಾಲ್ ಅವರು ಸರಣಿಯಲ್ಲಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಬೇಗನೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ಇದರೊಂದಿಗೆ ಎಲ್ಲಾ ತಂಡಗಳು ಹರಾಜಿನಲ್ಲಿ ಚಹಾಲ್‌ಗೆ ಪೈಪೋಟಿ ನೀಡುವ ಸಾಧ್ಯತೆಯಿದೆ.

ವಿಂಡೀಸ್ ಆಟಗಾರರಿಗೆ ಹೆಚ್ಚಿನ ಡಿಮ್ಯಾಂಡ್

ವಿಂಡೀಸ್ ಆಟಗಾರರಿಗೆ ಹೆಚ್ಚಿನ ಡಿಮ್ಯಾಂಡ್

ಭಾರತದ ಆಟಗಾರರ ಜೊತೆಗೆ ಏಕದಿನ ಸರಣಿಯಲ್ಲಿ ಮಿಂಚಿದ್ದ ವೆಸ್ಟ್ ಇಂಡೀಸ್ ಆಟಗಾರರು ಕೂಡ ಮೆಗಾ ಹರಾಜಿನಲ್ಲಿ ಆಕರ್ಷಿಸಿದ್ದಾರೆ. ಆಲ್‌ರೌಂಡರ್ ಫರ್ಫಾಮೆನ್ಸ್ ನೀಡಿದ ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್ ಮತ್ತು ಅಲ್ಜಾರಿ ಜೋಸೆಫ್ ಮುಂದಿನ ಸಾಲಿನಲ್ಲಿದ್ದಾರೆ. ಸರಣಿಯಲ್ಲಿ ಹೋಲ್ಡರ್ ವಿಕೆಟ್ ಕಬಳಿಸಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಮೊದಲ ಏಕದಿನ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ದರು. ಒಡಿಯನ್ ಸ್ಮಿತ್ ಕೂಡ ಸರಣಿಯಲ್ಲಿ ಬ್ಯಾಟ್ ಮತ್ತು ಬಾಲ್‌ನಲ್ಲಿ ಮಿಂಚಿದ್ದರು. ಅಲ್ಜಾರಿ ಜೋಸೆಫ್ ಬೌಲಿಂಗ್ ನಲ್ಲಿ ಎಲ್ಲರನ್ನ ಆಕರ್ಷಿಸಿದ್ದಾರೆ.

Story first published: Saturday, February 12, 2022, 11:57 [IST]
Other articles published on Feb 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X