ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು; ಈ ಪ್ರಮುಖ ಆಟಗಾರರು ಅಂದು ಹರಾಜಾಗದೆ ಉಳಿದುಕೊಂಡಿದ್ದರು!

IPL auction: 3 famous IPL players you might not know once went unsold

ಐಪಿಎಲ್‌ ಅಂದರೆ ಅದೊಂದು ಜಾತ್ರೆ. ಕ್ರಿಕೆಟ್‌ ಪ್ರಿಯರಿಗೆ ಅದು ಅಕ್ಷರಶಃ ಹಬ್ಬ. ಈ ಹಬ್ಬದಲ್ಲಿ ಪಾಲ್ಗೊಳ್ಳ ಬೇಕೆಂಬುದು ಎಲ್ಲಾ ಘಟಾನುಘಟಿ ಆಟಗಾರರು ಕೂಡ ಕಾಯುತ್ತಿರುತ್ತಾರೆ. ಅದ್ಬುತ ಪ್ರದರ್ಶನವನ್ನು ನೀಡಿ ಗಮನಸೆಳೆಯುವ ಮೂಲಕ ಅಭಿಮಾನಿಗಲನ್ನು ಹೆಚ್ಚಿಸಿಕೊಂಡು ತಮ್ಮ ಬೇಡಿಯಯನ್ನೂ ಹೆಚ್ಚಿಸಿಕೊಳ್ಳು ಇದೊಂದು ಅತ್ಯುತ್ತಮ ವೇದಿಕೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಇದೇ 19ರಂದು ಐಪಿ ಎಲ್‌ನ ಮತ್ತೊಂದು ಹರಾಜಿಗೆ ವೇದಿಕೆ ಸಿದ್ದವಾಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲಾ ತಂಡಗಳಲ್ಲಿ ಒಟ್ಟಾರೆ 73 ಸ್ಥಾನಗಳು ಭರ್ತಿಯಾಗಬೇಕಿದೆ. ಆದರೆ ಆರಂಭಿಕ ಪಟ್ಟಿಯಲ್ಲಿ ಹರಾಜಿಗಾಗಿ 900ಕ್ಕೂ ಅಧಿಕ ಆಟಗಾರರು ನೊಂದಾಯಿಸಿದ್ದರು. ಸದ್ಯ ಪಟ್ಟುಯಲ್ಲಿ ಪರಿಷ್ಕರಣೆಯಾಗಿದ್ದು ಅಂತಿಮವಾಗಿ ಬರೊಬ್ಬರಿ 332 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ.

ಪ್ರತೀ ಬಾರಿಯು ಇದೇ ರೀತಿ ನೂರಾರು ಆಟಗಾರರು ಪಟ್ಟಿಯಲ್ಲಿರುವ ಕಾರಣ ಹರಾಜಾಗುವ ಆಟಗಾರರ ಸಂಖ್ಯೆಗಿಂತ ಹರಾಜಾಗದೇ ಉಳಿಯುವ ಆಟಗಾರರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಆದರೆ ಈ ಹರಾಜಾಗದೇ ಉಳಿದ ಆಟಗಾರರಲ್ಲಿ ಅನೇಕ ದಿಗ್ಗಜ ಆಟಗಾರರೂ ಸೇರಿದ್ದಾರೆ. ಅವರೆಲ್ಲಾ ಇಂದು ತಮ್ ರಾಷ್ಟ್ರೀಯ ತಂಡಗಳಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. ಅಂತಾ ಮೂರು ಆಟಗಾರರು ಯಾರು ಅನ್ನೋದನ್ನು ಬನ್ನಿ ನೋಡೋಣ;

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ಅದ್ಭುತ ಆಟಗಾರ. ಪ್ರಸಕ್ತ ಆಸ್ಟ್ರೇಲಿಯಾ ತಂಡದ ಅತ್ಯುತ್ತಮ ಆಟಗಾರ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೂರೂ ಫಾರ್ಮ್ಯಾಟ್‌ಗಳಲ್ಲೂ ಆಯಾ ಮಾದರಿಗೆ ತಕ್ಕಂತೆ ಆಟವಾಡಿ ತಂಡವನ್ನು ಗೆಲ್ಲಿಸುವ ಚಾಕಚಕ್ಯತೆ ಸ್ಟೀವ್ ಸ್ಮಿತ್‌ಗಿದೆ. ಆದರೆ 2012 ರ ಹರಾಜು ಪ್ರಕ್ರಿಯೆಯಲ್ಲಿ ಸ್ಮಿತ್ ಹರಾಜಾಗದೆ ಉಳಿದಿದ್ದರು. ಹರಾಜು ಸಂದರ್ಭದಲ್ಲಿ ಸ್ಮಿತ್ ಆವರನ್ನು ಯಾವ ತಂಡವೂ ಕೊಳ್ಳಲು ಬಯಸಿರಲಿಲ್ಲ. ಬಳಿಕ ಪುಣೆ ವಾರಿಯರ್ಸ್ ತಂಡದಲ್ಲಿದ್ದ ಆಟಗಾರ ಮಿಚೆಲ್ ಮಾರ್ಶ್ ಗಾಯಗೊಂಡ ಕಾರಣ ಟೂರ್ನಿಯಿಂದ ಹೊರಬಿದ್ದರು. ಈ ಸ್ಥಾನಕ್ಕೆ ಪುಣೆ ತಂಡ ಸ್ಮಿತ್ ಅವರನ್ನು ಬದಲಿ ಆಟಗಾರನನ್ನಾಗಿ ಸೇರ್ಪಡೆಗೊಳಿಸಿಕೊಂಡಿತು.

ಕ್ರಿಸ್ ಗೇಲ್

ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಟಿ20 ಆದರಿಗೆ ಹೇಳಿ ಮಾಡಿಸಿದ ಆಟಗಾರ. ಸ್ಪೋಟಕ ಆಟದಿಂದಾಗಿ ಅಭಿಮಾನಿಗಳ ಮನಗೆಲ್ಲುವಲ್ಲಿ ಕ್ರಿಸ್ ಗೇಲ್ ಯಶಸ್ವಿಯಾಗಿದ್ದಾರೆ. ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ಪೈಕಿ ಡೇವಿಡ್ ವಾರ್ನರ್ ಮಾತ್ರ ರನ್ ಗಳಿಕೆಯಲ್ಲಿ ಕ್ರಿಸ್ ಗೇಲ್‌ಗಿಂತ ಮುಂದಿದ್ದಾರೆ. ಇಂತಾ ಆಟಗಾರ ಕೂಡ ಐಪಿಎಲ್‌ನಲ್ಲಿ ಹರಾಜಾಗದೆ ಉಳಿದುಕೊಂಡಿದ್ದರು ಅನ್ನುವ ವಿಚಾರ ನೆನಪಿದ್ಯಾ! 2011ರ ಹರಾಜು ಪ್ರಕ್ರಿಯೆಯಲ್ಲಿ ಗೇಲ್ ಭಾಗಿಯಾಗಿದ್ದರಾದರೂ ಅನ್ ಸೋಲ್ಡ್ ಆಗಿ ಉಳಿದುಕೊಂಡಿದ್ದರು. ವೆಸ್ಟ್‌ ಇಂಡೀಸ್‌ಅನ್ನು ಪ್ರತಿನಿಧಿಸುವ ಗೇಲ್ ರಾಷ್ಟ್ರೀಯ ತಂಡದ ಪರವಾಗಿ ನಿರಂತರ ಕಳಪೆ ಪ್ರದರ್ಶನ ನೀಡುತ್ತಿದ್ದರು.ಹೀಗಾಗಿ ಐಪಿಎಲ್ ಪ್ರಾಂಚೈಸಿಗಳು ಗೇಲ್ ಅವರನ್ನು ನಿರ್ಲಕ್ಷಿಸಿದ್ದವು. ಆದರೆ 2011ರ ಟೂರ್ನಿಯ ಮಧ್ಯದಲ್ಲಿ ಗಾಯಗೊಂಡ ಆಟಗಾರನ ಬದಲಿಗೆ ಗೇಲ್ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಂಡು ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ.

ಕಿರಾನ್ ಪೊಲಾರ್ಡ್

ಕಿರಾನ್ ಪೊಲಾರ್ಡ್

ಕಿರಾನ್ ಪೊಲಾರ್ಡ್ ಸದ್ಯ ವೆಸ್ಟ್‌ ಇಂಡೀಸ್ ತಂಡದ ನಿಗದಿತ ಓವರ್‌ಗಳ ಫಾರ್ಮ್ಯಾಟ್‌ನ ನಾಯಕರಾಗಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಬಲ್ಲ ಸಾಮರ್ಥ್ಯ ಹೊಂದಿರುವ ಪೊಲಾರ್ಡ್ ಟಿ20ಗೆ ಸೂಕ್ತವಾದ ಆಟಗಾರ ಎನಿಸಿದ್ದಾರೆ. ಇಂತಾ ಆಟಗಾರ ಹರಾಜಾಗದೆ ಉಳಿದುಕೊಂಡಿದ್ದು 2009ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ. ಆ ಸಂದರ್ಭದಲ್ಲಿ ಪೊಲಾರ್ಡ್‌ ಸಾಮರ್ಥ್ಯದ ಬಗ್ಗೆ ಯಾರಿಗೂ ಹೆಚ್ಚಿನ ಅರಿವಿರಲಿಲ್ಲ. ಹೀಗಾಗಿ ಪೊಲಾರ್ಡ್ ಅವರನ್ನು ಕೇಳುವವರೇ ಇರಲಿಲ್ಲ. ಆದರೆ ಅದೇ ವರ್ಷ ನಡೆದ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಮುಂದಿನ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪೊಲಾರ್ಡ್ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಹರಾಜು ಪ್ರಕ್ರಿಯೆಗೆ ಸಿದ್ದತೆ

ಹರಾಜು ಪ್ರಕ್ರಿಯೆಗೆ ಸಿದ್ದತೆ

ಈ ಬಾರಿಯ ಹರಾಜು ಪ್ರಕ್ರಿಯೆ ಕೊಲ್ಕತ್ತಾದಲ್ಲಿ ನಡೆಯಲಿದೆ. ಇದೇ 19ನೇ ತಾರೀಕಿನಂದು ಈ ಹರಾಜು ಪ್ರಕ್ರಿಯೆ ನಡೆಯಲಿದ್ದು 332 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಈ ಆಟಗಾರರಲ್ಲಿ ಯಾರು ಹರಾಜಾಗುತ್ತಾರೆ, ಹರಾಜಾಗದೆ ಉಳಿದುಕೊಳ್ಳುತ್ತಾರೆ ಎನ್ನುವುದು ಸದ್ಯ ಉಳಿದುಕೊಂಡಿರುವ ಪ್ರಶ್ನೆಯಾಗಿದೆ.

Story first published: Monday, December 16, 2019, 15:51 [IST]
Other articles published on Dec 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X