ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜಿನಲ್ಲಿ ದಾಖಲೆ ಬರೆದ ಕನ್ನಡಿಗ ಕೃಷ್ಣಪ್ಪ ಗೌತಮ್

IPL auction: krishnappa gowtham Sold To CSK For 9.25 Crore

ಕನ್ನಡಿಗ ಆಲ್‌ರೌಂಡರ್ ಆಟಗಾರ ಕೃಷ್ಣಪ್ಪ ಗೌತಮ್ ಐಪಿಎಲ್ ಹರಾಜಿನಲ್ಲಿ ಭರ್ಜರಿ ಮೊತ್ತಕ್ಕೆ ಹರಾಜಾಗಿದ್ದಾರೆ. 9.25 ಕೋಟಿ ರೂಪಾಯಿ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆ ಗೌತಮ್ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚಿನ ಮೊತ್ತಕ್ಕೆ ಹರಾಜಾದ ಅನ್‌ಕ್ಯಾಪ್‌ಡ್ ಆಟಗಾರ ಎನಿಸಿದ್ದಾರೆ ಕೆ ಗೌತಮ್.

ಕೆ ಗೌತಮ್ ಮೂಲ ಬೆಲೆ 20 ಲಕ್ಷ ರೂಪಾಯಿಯಾಗಿತ್ತು. ಆದರೆ ಗೌತಮ್ ಅವರನ್ನು ತೆಕ್ಕೆಗೆ ಹಾಕಿಕೊಳ್ಳಲು ಸಾಕಷ್ಟು ಸ್ಪರ್ಧೆ ಏರ್ಪಟ್ಟಿತು. ಕೊಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆರಂಭದಲ್ಲಿ ಪೈಪೋಟಿ ನಡೆಸಿದರೆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಪೈಪೋಟಿ ಒಡ್ಡಲು ಆರಂಭಿಸಿತ್ತು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಕನ್ನಡಿಗ ಕ್ರಿಕೆಟಿಗನನ್ನು 9.25 ಕೋಟಿಗೆ ತೆಕ್ಕೆಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

IPL 2021 Auction Live Updates‌: ಕ್ಷಣ ಕ್ಷಣದ ಮಾಹಿತಿIPL 2021 Auction Live Updates‌: ಕ್ಷಣ ಕ್ಷಣದ ಮಾಹಿತಿ

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ

ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಐಪಿಎಲ್‌ನಲ್ಲಿ ಆಡುತ್ತಾ ಬಂದಿದ್ದಾರೆ ಕೃಷ್ಣಪ್ಪ ಗೌತಮ್. ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಬಲ್ಲ ಸಾಮರ್ಥ್ಯವನ್ನು ಹೊಂದಿರುವ ಕೆ ಗೌತಮ್ ಆಫ್‌ಸ್ಪಿನ್ನರ್‌ ಆಗಿ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.

ಚೆನ್ನೈಗೆ ಲೈನ್‌ಅಪ್‌ಗೆ ಬಲ

ಚೆನ್ನೈಗೆ ಲೈನ್‌ಅಪ್‌ಗೆ ಬಲ

ಗೌತಮ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾಮರ್ಥ್ಯವನ್ನು ಹೆಚ್ಚಿಸಬಲ್ಲವರಾಗಿದ್ದಾರೆ. ಈಗ ತಂಡದಲ್ಲಿ ಗುಣಮಟ್ಟದ ಆಲ್‌ರೌಂಡರ್‌ಗಳನ್ನು ಸಿಎಸ್‌ಕೆ ಹೊಂದಿದೆ. ಇದಕ್ಕೂ ಮೊದಲು ಚೆನ್ನೈ ಫ್ರಾಂಚೈಸಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಭಾರೀ ಪೈಪೋಟಿಯನ್ನು ನಡೆಸಿತ್ತು. ಆದರೆ ಅಂತಿಮವಾಗಿ ಮ್ಯಾಕ್ಸ್‌ವೆಲ್ ಆರ್‌ಸಿಬಿಗೆ 14.75 ಕೊಟಿ ಮೊತ್ತಕ್ಕೆ ಹರಾಜಾದರು.

ಚೆನ್ನೈ ತಂಡದಲ್ಲಿ ಎರಡನೇ ಕನ್ನಡಿಗ

ಚೆನ್ನೈ ತಂಡದಲ್ಲಿ ಎರಡನೇ ಕನ್ನಡಿಗ

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ತಂಡಕ್ಕೆ ಕೆ ಗೌತಮ್ ಸೇರಿಕೊಳ್ಳುವ ಮೂಲಕ ಎರಡನೇ ಕನ್ನಡಿಗ ಆಟಗಾರನಾಗಿ ಸೇರಿಕೊಂಡಿದ್ದಾರೆ. ಇದಕ್ಕೂ ಮುನ್ನ ರಾಬಿನ್ ಉತ್ತಪ್ಪ ಅವರನ್ನು ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾರಾಟ ಮಾಡಿತ್ತು. ಆಲ್‌ ಕ್ಯಾಷ್ ಡೀಲ್ ಮೂಲಕ ಈ ಟ್ರೇಡ್ ನಡೆದಿತ್ತು.

50 ಲಕ್ಷಕ್ಕೆ ಕೆಕೆಆರ್ ಪಾಲಾದ ಕರುಣ್ ನಾಯರ್

50 ಲಕ್ಷಕ್ಕೆ ಕೆಕೆಆರ್ ಪಾಲಾದ ಕರುಣ್ ನಾಯರ್

ಇನ್ನು ಇದಕ್ಕೂ ಮುನ್ನ ಹರಾಜಿನಲ್ಲಿ ಕರುಣ್ ನಾಯರ್ ಹೆಸರು ಆರಂಭದಲ್ಲಿ ಹರಾಜಿಗೆ ಬಂದಿತ್ತು. ಆದರೆ ಕರುಣ್ ನಾಯರ್ ಅವರನ್ನು ಮೊದಲ ಹಂತದಲ್ಲಿ ಯಾವುದೇ ತಂಡ ಕೊಳ್ಳಲು ಬಯಸದ ಕಾರಣ ಹರಾಜಾಗದೆ ಉಳಿದಿದ್ದರು. ಆದರೆ ಎರಡನೇ ಹಂತದಲ್ಲಿ ಕರುಣ್ ನಾಯರ್ ಅವರನ್ನು ಕೆಕೆಆರ್ ಮೂಲ ಬೆಲೆ 50 ಲಕ್ಷಕ್ಕೆ ಖರೀದಿಸಿತು. ಕಳೆದ ಆವೃತ್ತಿಯಲ್ಲಿ ಕರುಣ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಕರುಣ್ ನಾಯರ್ ಪ್ರದರ್ಶನ ಕಳಪೆಯಾಗಿತ್ತು.

Story first published: Thursday, February 18, 2021, 20:10 [IST]
Other articles published on Feb 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X