ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ ಐಪಿಎಲ್ ಆಟಗಾರರ ಹರಾಜು ಮುಂದೂಡಲು ಸಿದ್ಧತೆ: ವರದಿ

IPL: BCCI likely to shelve mega auction for 2021 edition

ಬೆಂಗಳೂರು, ಆಗಸ್ಟ್ 10: 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರ ಹರಾಜು ನಡೆಯಲ್ಲ ಎಂದು ವರದಿಯೊಂದು ಹೇಳಿದೆ. 2021ರ ಐಪಿಎಲ್‌ಗಾಗಿ ಹರಾಜು ಪ್ರಕ್ರಿಯೆ ನಡೆಸಲು ವೇಳಾಪಟ್ಟಿ ರೂಪಿಸಲಾಗಿತ್ತು. ಆದರೆ ಈ ವೇಳಾಪಟ್ಟಿಯಂತೆ ಹರಾಜು ನಡೆಯುತ್ತಿಲ್ಲ, 2021ರ ಹರಾಜನ್ನು ಮುಂದೂಡಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗುತ್ತಿದೆ.

ಐಪಿಎಲ್ 2020: ಕಪ್‌ ಗೆಲ್ಲೋದಕ್ಕೆ ಯುಎಇಗೆ ಹಾರಲು ಸಜ್ಜಾಗಿದೆ ಆರ್‌ಸಿಬಿಐಪಿಎಲ್ 2020: ಕಪ್‌ ಗೆಲ್ಲೋದಕ್ಕೆ ಯುಎಇಗೆ ಹಾರಲು ಸಜ್ಜಾಗಿದೆ ಆರ್‌ಸಿಬಿ

ಕಳೆದ ವರ್ಷ ಐಪಿಎಲ್‌ಗಾಗಿ 'ಮಿನಿ ಹರಾಜು' ನಡೆದಿತ್ತು. 332 ಆಟಗಾರರಲ್ಲಿ 73 ಆಟಗಾರರನ್ನು ಹೆಕ್ಕುವುದಕ್ಕಾಗಿ 8 ಫ್ರಾಂಚೈಸಿಗಳುಗಳು ಪೈಪೋಟಿ ನಡೆಸಿದ್ದವು. ಒಂದು ದಿನ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೇವಲ 62 ಆಟಗಾರರು ಮಾರಾಟವಾಗಿದ್ದರು.

ಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳುಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳು

ಕಳೆದ ವರ್ಷ ಐಪಿಎಲ್ ಆಟಗಾರರ ಹರಾಜು ನಡೆದಿರುವುದರಿಂದ ಈ ಬಾರಿ ಫ್ರಾಂಚೈಸಿಗಳಿಗೆ ಹೆಚ್ಚು ಆಟಗಾರರ ಅಗತ್ಯ ಇದ್ದಂತಿಲ್ಲ. 2021ರ ಆವೃತ್ತಿಗಾಗಿ ತಂಡಗಳು ಕೆಲವೇ ಕೆಲವು ಆಟಗಾರರನ್ನು ಆರಿಸಲಿವೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಿಸಿಸಿಐಯು 2021ಕ್ಕೆ ಹರಾಜು ನಡೆಸದಿರಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!

ಫ್ರಾಂಚೈಸಿಗಳು ಬೇಕಾಗಿದ್ದ ಆಟಗಾರರನ್ನು ಹೆಕ್ಕಲು ನಡೆಸಲಾಗುತ್ತಿದ್ದ ಐಪಿಎಲ್ ಹರಾಜು ಮುಂದೆ ಯಾವಾಗ ನಡೆಯಬೇಕೆಂದು ಕೋವಿಡ್-19 ಖಾತರಿಪಡಿಸಲಿದೆ. ಕೊರೊನಾ ಪರಿಸ್ಥಿತಿ ಸುಧಾರಿಸುವ ವರೆಗೆ ಅನಿರ್ದಿಷ್ಟಾವಧಿಗೆ 2021ರ ಹರಾಜು ಮುಂದೂಡಲ್ಪಡುವುದರಲ್ಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.

Story first published: Monday, August 10, 2020, 12:53 [IST]
Other articles published on Aug 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X