ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

48,390 ಕೋಟಿಗೆ ಹರಾಜು: ವಿಶ್ವದ 2ನೇ ಶ್ರೀಮಂತ ಲೀಗ್ ಆಗಿ ಹೊರಹೊಮ್ಮಿದ ಐಪಿಎಲ್

IPL Tv and Digital rights

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ವಿಶ್ವದ ಎರಡನೇ ಶ್ರೀಮಂತ ಲೀಗ್ ಆಗಿ ಹೊರಹೊಮ್ಮಿದ್ದು, ಇಡೀ ಕ್ರಿಕೆಟ್ ಲೋಕವನ್ನೇ ಅಚ್ಚರಿಗೊಳಿಸಿದೆ. ಐಪಿಎಲ್ 2023-27ರವರೆಗಿನ ಟಿವಿ ಪ್ರಸಾರ ಹಕ್ಕು ಮತ್ತು ಡಿಜಿಟಲ್ ಹಕ್ಕು ಬರೋಬ್ಬರಿ 48,390 ಕೋಟಿ ರೂಪಾಯಿಗೆ ಹರಾಜಾದ ಬಳಿಕ ಐಪಿಎಲ್ ಎರಡನೇ ಶ್ರೀಮಂತ ಲೀಗ್ ಆಗಿ ಹೊರಹೊಮ್ಮಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜೇ ಶಾ '' ಆರಂಭದಿಂದಲೂ, ಐಪಿಎಲ್ ಬೆಳವಣಿಗೆಗೆ ಸಮಾನಾರ್ಥಕವಾಗಿದೆ. ಇಂದು ಭಾರತ ಕ್ರಿಕೆಟ್‌ಗೆ ಸುವರ್ಣ ಅಕ್ಷರದ ದಿನವಾಗಿದೆ. ಇ-ಹರಾಜಿನ ಮೂಲಕ ಐಪಿಎಲ್ ಬ್ರಾಂಡ್ ಹೊಸ ಎತ್ತರವನ್ನು ಮುಟ್ಟಿದೆ. ಇದರ ಪರಿಣಾಮವಾಗಿ 48,390 ಕೋಟಿ ಮೌಲ್ಯವನ್ನು ಪಡೆದುಕೊಂಡಿದೆ. ಐಪಿಎಲ್ ಈಗ 2ನೇ ಅತ್ಯಂತ ಮೌಲ್ಯಯುತವಾದ ಕ್ರೀಡಾ ಲೀಗ್ ಆಗಿದೆ'' ಎಂದು ಶಾ ಹೇಳಿದ್ದಾರೆ.

ಟಿವಿ ಪ್ರಸಾರದ ಹಕ್ಕು ಬಿಡ್ ಗೆದ್ದ ಸ್ಟಾರ್ ಇಂಡಿಯಾ

ಸ್ಟಾರ್ ಇಂಡಿಯಾ 23,575 ಕೋಟಿ ರೂಪಾಯಿಗೆ ಟಿವಿ ಪ್ರಸಾರದ ಹಕ್ಕುಗಳನ್ನ (ಪ್ಯಾಕೇಜ್ A) ಪಡೆದುಕೊಂಡಿದೆ. ಈ ಮೂಲಕ ಪ್ರತಿ ಐಪಿಎಲ್ ಪಂದ್ಯದ ಮೌಲ್ಯವು 57.5 ಕೋಟಿ ರೂಪಾಯಿಗೆ ತಲುಪಿದೆ.

ಇನ್ನು viacom18 ಐಪಿಎಲ್ ಡಿಜಿಟಲ್ ಹಕ್ಕು (ಪ್ಯಾಕೇಜ್ B,C) ಪಡೆದಿದ್ದು 23,758 ಕೋಟಿ ಬಿಡ್ ಮಾಡಿ ತನ್ನದಾಗಿಸಿಕೊಂಡಿದೆ. ಈ ಮೂಲಕ ಪ್ರತಿ ಪಂದ್ಯದ ಮೊತ್ತವು 57.9 ಕೋಟಿ ರೂಪಾಯಿ ದಾಟಿದೆ. ಭಾರತದ ಡಿಜಿಟಲ್ ಹಕ್ಕುಗಳ ಒಪ್ಪಂದವನ್ನು ರಿಲಯನ್ಸ್ ಬೆಂಬಲಿತ viacom18 20,500 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿದೆ. 2991 ಕೋಟಿ ರೂ.ಗಳನ್ನು ಪಾವತಿಸುವ ಮೂಲಕ ಮಹತ್ವದಲ್ಲದ-ಪ್ಯಾಕೇಜ್ ಸಿ ಅನ್ನು ಪಡೆದುಕೊಂಡಿದೆ.

ಒಟ್ಟು 48,390 ಕೋಟಿ ರೂಪಾಯಿ ಬಿಡ್‌ನಿಂದಾಗಿ ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯವು ಹೆಚ್ಚಾಗಿದ್ದು, ಐಪಿಎಲ್‌ ಬೆಳೆದು ನಿಂತಿರುವ ರೀತಿಯನ್ನ ಬಿಸಿಸಿಐ ಕಾರ್ಯದರ್ಶಿ ಈ ಕುರಿತು ಜೈ ಶಾ ಶ್ಲಾಘಿಸಿದ್ದಾರೆ.

Eng vs NZ 2nd Test: ಟೆಸ್ಟ್‌ ಕ್ರಿಕೆಟ್‌ನಲ್ಲಿ 2ನೇ ವೇಗದ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್

ಐಪಿಎಲ್ ಟಿವಿ ಮತ್ತು ಡಿಜಿಟಲ್ ಮಾಧ್ಯಮ ಹಕ್ಕು , ಬಿಡ್ ಮೊತ್ತ ಹಾಗೂ ಪಂದ್ಯಗಳು

ಐಪಿಎಲ್ ಟಿವಿ ಮತ್ತು ಡಿಜಿಟಲ್ ಮಾಧ್ಯಮ ಹಕ್ಕು , ಬಿಡ್ ಮೊತ್ತ ಹಾಗೂ ಪಂದ್ಯಗಳು

ಪ್ಯಾಕೇಜ್ A: ಸ್ಟಾರ್ ಇಂಡಿಯಾ 23,575 ಕೋಟಿ (410 ಪಂದ್ಯಗಳು)
ಪ್ಯಾಕೇಜ್ B: ವಯಾಕಾಮ್18 20,500 ಕೋಟಿ (410 ಪಂದ್ಯಗಳು)
ಪ್ಯಾಕೇಜ್ C: ವಯಾಕಾಮ್ 18 3,257.52 ಕೋಟಿ (098 ಪಂದ್ಯಗಳು)
ಪ್ಯಾಕೇಜ್ D: Viacom 18+ಟೈಮ್ಸ್ ಇಂಟರ್ನೆಟ್ 1058 ಕೋಟಿ (410 ಪಂದ್ಯಗಳು)

ಸ್ಥಿರತೆಯ ವಿಚಾರದಲ್ಲಿ ದಿನೇಶ್ ಕಾರ್ತಿಕ್, ಟೀಂ ಇಂಡಿಯಾದ ಎಲ್ಲಾ ಬ್ಯಾಟರ್‌ಗಿಂತ ಮುಂದಿದ್ದಾರೆ: ಕಪಿಲ್ ದೇವ್

ಕಳೆದ ಐದು ವರ್ಷಗಳ ಐಪಿಎಲ್ ಸೀಸನ್‌ ಬಿಡ್ ಗೆದ್ದಿದ್ದ ಸ್ಟಾರ್ ಸ್ಪೋರ್ಟ್ಸ್

ಕಳೆದ ಐದು ವರ್ಷಗಳ ಐಪಿಎಲ್ ಸೀಸನ್‌ ಬಿಡ್ ಗೆದ್ದಿದ್ದ ಸ್ಟಾರ್ ಸ್ಪೋರ್ಟ್ಸ್

ಈ ಹಿಂದೆ ಸ್ಟಾರ್ ಇಂಡಿಯಾ ಸೆಪ್ಟೆಂಬರ್ 2017 ರಿಂದ 2022 ರ ಅವಧಿಯ ಐಪಿಎಲ್ ಮಾಧ್ಯಮ ಹಕ್ಕುಗಳನ್ನು 16,347.50 ಕೋಟಿ ಬಿಡ್‌ನಲ್ಲಿ ಖರೀದಿಸಿತು. ಇದು ಟಿವಿ ಪ್ರಸಾರ ಮತ್ತು ಡಿಜಿಟಲ್ ಮಾಧ್ಯಮ ಹಕ್ಕು ಎರಡನ್ನೂ ಒಳಗೊಂಡಿತ್ತು. ಈ ಮೂಲಕ ಬಿಡ್ಡಿಂಗ್ ನಲ್ಲಿ ಸೋನಿ ಪಿಕ್ಚರ್ಸ್ ಅನ್ನು ಸೋಲಿಸಿತ್ತು.

2008 ರಲ್ಲಿ, ಸೋನಿ ಪಿಕ್ಚರ್ಸ್ ನೆಟ್‌ವರ್ಕ್ 10 ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಹಕ್ಕುಗಳನ್ನು 8200 ಕೋಟಿ ರೂಪಾಯಿ ಬಿಡ್‌ನೊಂದಿಗೆ ಗೆದ್ದುಕೊಂಡಿತ್ತು. ಮೂರು ವರ್ಷಗಳ ಅವಧಿಗೆ ಐಪಿಎಲ್‌ನ ಜಾಗತಿಕ ಡಿಜಿಟಲ್ ಹಕ್ಕುಗಳನ್ನು ನೋವಿ ಡಿಜಿಟಲ್‌ಗೆ 2015 ರಲ್ಲಿ 302.2 ಕೋಟಿಗೆ ನೀಡಲಾಯಿತು.

Story first published: Wednesday, June 15, 2022, 9:54 [IST]
Other articles published on Jun 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X