ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಪ್ರೇಕ್ಷಕರೇ ಇಲ್ಲದೆ ನಡೆಯುತ್ತಾ ಐಪಿಎಲ್ ಸೀಸನ್ 13?

Ipl Behind Closed Doors? Bcci To Decide Amid Coronavirus Pandemic
IPL could go 'TV-only' over coronavirus..? | IPL2020 | Television | Oneindia Kannada

ಐಪಿಎಲ್ ಅಂದರೆ ಅದೊಂದು ಕ್ರಿಕೆಟ್ ಜಾತ್ರೆ. ಸಾವಿರಾರು ಜನರು ಕ್ರೀಡಾಂಗಣದಲ್ಲಿ ಕಿರುಚಾಡುತ್ತಾ, ಕುಣಿದಾಡುತ್ತಾ ಪಂದ್ಯಗಳನ್ನು ಎಂಜಾಯ್ ಮಾಡುತ್ತಾರೆ. ಇದು ಐಪಿಎಲ್‌ನ ಸಾಮಾನ್ಯ ದೃಶ್ಯ. ಆದರೆ ಈ ಬಾರಿಯ ಐಪಿಎಲ್ ಪ್ರೇಕ್ಷಕರ ಅಬ್ಬರವಿಲ್ಲದೆ ಸ್ಮಶಾನ ಮೌನದಲ್ಲಿ ನಡೆಯುತ್ತಾ ಅನ್ನುವ ಅನುಮಾನ ಮೂಡಿದೆ.

ಇದಕ್ಕೆ ಕಾರಣ ಇಂದು ನಡೆದಿರುವ ಬೆಳವಣಿಗೆ. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಐಪಿಎಲ್ ನಡೆಸಬೇಕೋ ಬೇಡವೋ ಎನ್ನುವ ನಿರ್ಧಾರ ಇನ್ನೂ ಅಂತಿಮವಾಗಿಲ್ಲ. ಈ ವಿಚಾರವಾಗಿ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದ್ದು ಕೊರ್ಟ್ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ದಿಗ್ಗಜರ ಟೂರ್ನಿ 'ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌'ಗೂ ಕೊರೊನಾ ಕಂಟಕ!ದಿಗ್ಗಜರ ಟೂರ್ನಿ 'ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌'ಗೂ ಕೊರೊನಾ ಕಂಟಕ!

ಈ ಮಧ್ಯೆ ಐಪಿಎಲ್‌ಅನ್ನು ಪ್ರೇಕ್ಷಕರಿಲ್ಲದೇ ಆಯೋಜನೆ ಮಾಡುವ ಕುರಿತು ಚರ್ಚೆಗಳು ಪ್ರಾರಂಭವಾಗಿದೆ. ಈ ಬಗ್ಗೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು ಖಾಲಿ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜನೆ ಮಾಡುವ ಬಗ್ಗೆ ಚರ್ಚೆ ಆರಂಭವಾಗಿದೆ ಎಂದಿದ್ದಾರೆ.

ಶನಿವಾರ ಐಪಿಎಲ್ ಪ್ರಮುಖರು ಸಭೆ ಸೇರಲಿದ್ದು ಬಹುನಿರೀಕ್ಷಿತ ಐಪಿಎಲ್ ಪೂರ್ವನಿಗದಿಯಂತೆ ನಡೆಸಬೇಕೋ ಇಲ್ಲವೋ ಎಂಬ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಐಪಿಎಲ್ ಇದೇ 29ರಂದು ನಡೆಸಲು ನಿಗದಿಯಾಗಿದೆ.

ಕೊರೊನಾ ವೈರಸ್ ಭೀತಿ : ವಿಶ್ವ XI vs ಏಷ್ಯಾ XI ಪಂದ್ಯ ಮುಂದೂಡಿಕೆಕೊರೊನಾ ವೈರಸ್ ಭೀತಿ : ವಿಶ್ವ XI vs ಏಷ್ಯಾ XI ಪಂದ್ಯ ಮುಂದೂಡಿಕೆ

ದೇಶದಲ್ಲಿ ಈಗಾಗಲೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ರದ್ದುಗೊಳಿಸಬೇಕು ಎಂಬ ಒತ್ತಡಗಳು ಹೆಚ್ಚುತ್ತಿದೆ, ಈ ಮಧ್ಯೆ ಐಪಿಎಲ್ ಅಧಿಕಾರಿಗಳು ಪ್ರೇಕ್ಷಕರೆ ಇಲ್ಲದೆ ನಡೆಸುವ ಬಗ್ಗೆ ಚರ್ಚೆ ಆರಂಭವಾಗಿದೆ. ಇದು ಆಗಿದ್ದೇ ಆದಲ್ಲಿ ಐಪಿಎಲ್‌ಅನ್ನು ಕೇವಲ ಟಿವಿಯಲ್ಲಿ ಮಾತ್ರವೇ ವೀಕ್ಷಿಸಬೇಕಾಗುತ್ತದೆ.

Story first published: Thursday, March 12, 2020, 16:52 [IST]
Other articles published on Mar 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X