ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಬೆಟ್ಟಿಂಗ್,ಲಲಿತ್ ಮೋದಿಗೆ 'ಇಡಿ' ಕಟಂಕ

By ವಿಕಾಸ್ ನಂಜಪ್ಪ

ನವದೆಹಲಿ, ಜೂ.19: ಲಲಿತ್ ಮೋದಿ ಚೇರ್ಮನ್ ಆಗಿದ್ದ ಕಾಲದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್, ಆರ್ಥಿಕ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ತೀವ್ರಗೊಳಿಸಿದೆ. ಐಪಿಎಲ್ ಬೆಟ್ಟಿಂಗ್ ಹಗರಣ ಈಗ ಯುನೈಟೆಡ್ ಕಿಂಗ್ ಡಮ್ ಕೋರ್ಟ್ ಮೆಟ್ಟಿಲೇರಿದೆ.

ಬೆಟ್ಟಿಂಗ್ ಜಾಲ ನಡೆಸುವ ಬೆಟ್ ಫೇರ್.ಕಾಂ ವೆಬ್ ಸೈಟ್ ನಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಭಾರತೀಯರ ಖಾತೆಗಳಿರುವುದು ಕಂಡು ಬಂದಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ. [ಬೆಟ್ಟಿಂಗ್ ಕಿಂಗ್ ಪಿನ್ ಮುಖೇಶ್ ಶರ್ಮಾ ಬಂಧನ]

ಈ ವೆಬ್ ಸೈಟ್ ಗೆ ಭಾರತದಿಂದ ನಿರಂತರವಾಗಿ ವ್ಯವಹಾರ ನಡೆದಿರುವುದು ಹವಾಲ ದುಡ್ಡು ಹರಿದಾಡುತ್ತಿರುವುದು ಪತ್ತೆಯಾಗಿದೆ.

Enforcement Directorate to move UK court

betfair.ಕಾಂ ತನಿಖೆ
ಬೆಟ್ ಫೇರ್.ಕಾಂ ತನಿಖೆಗೆ ಒಳಪಡಿಸುವುದಕ್ಕೂ ಮುನ್ನ ಯುಕೆ ಸರ್ಕಾರದ ಅನುಮತಿಯನ್ನು ಜಾರಿ ನಿರ್ದೇಶನಾಲಯ ಪಡೆದುಕೊಳ್ಳಬೇಕಿದೆ. ಯುನೈಟೆ ಕಿಂಗ್ ಡಮ್ ನಲ್ಲಿ ಬೆಟ್ಟಿಂಗ್ ಗೆ ಅಧಿಕೃತ ಮಾನ್ಯತೆ ಇದೆ. ಅದರೆ, ಭಾರತದಲ್ಲಿ ಬೆಟ್ಟಿಂಗ್ ಗೆ ನಿಷೇಧವಿದೆ. [ಐಪಿಎಲ್ ಕಳ್ಳಾಟ: ಶ್ರೀನಿವಾಸನ್‌ಗೆ ಕ್ಲೀನ್ ಚಿಟ್]

ಸರಿ ಸುಮಾರು 8000 ಕೋಟಿ ರು ಗೂ ಅಧಿಕ ಮೌಲ್ಯದ ವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ಅಂದಾಜಿಸಿದೆ. ಜಾರಿ ನಿರ್ದೇಶನಾಲಯ ಇತ್ತೀಚೆಗೆ 14ಕ್ಕೂ ಅಧಿಕ ಬುಕ್ಕಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಎಲ್ಲರೂ ಈ ವೆಬ್ ಸೈಟ್ ಮೂಲಕ ವ್ಯವಹರಿಸುತ್ತಿರುವುದು ಕಂಡು ಬಂದಿದೆ.

ಬೆಟ್ ಫೇರ್.ಕಾಂ ಈಗ ಭಾರತದಿಂದ ಬೆಟ್ಟಿಂಗ್ ಮಾಡುವುದನ್ನು ನಿಲ್ಲಿಸಿದ್ದರೂ ಜಾರಿ ನಿರ್ದೇಶನಾಲಯ ಈ ವೆಬ ಸೈಟ್ ನ ಪ್ರಾಕ್ಸಿ ಸರ್ವರ್ ಗಳ ಮೂಲದ ತನಕ ಕೈ ಹಾಕಲು ಯತ್ನಿಸುತ್ತಿದೆ. ಮುಖ್ಯ ವೆಬ್ ಸೈಟ್ ಮೂಲಕ ಹಾದಿ ಬಂದ್ ಮಾಡಿ ಕಳ್ಳ ಮಾರ್ಗದಲ್ಲಿ ಬೆಟ್ಟಿಂಗ್ ನಡೆಸಲಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

Lalit Modi

ಟಾಮಿ ಪಟೇಲ್ ಹಾಗೂ ಕಿರಣ್ ಮಾಲಾ ಎಂಬ ಇಬ್ಬರು ಬುಕ್ಕಿಗಳನ್ನು ಇತ್ತೀಚಿಗೆ ಪ್ರಶ್ನಿಸಿದಾಗ ಈ ಸತ್ಯ ಹೊರ ಬಿದ್ದಿದೆ. ಹಣವೆಲ್ಲ ದುಬೈ ಮೂಲಕ ಹವಾಲ ಜಾಲಕ್ಕೆ ಸೇರುತ್ತದೆ. ಪ್ರಾಕ್ಸಿ ಲಿಂಕ್ ಬಳಸಿ ಬೆಟ್ಟಿಂಗ್ ಜಾರಿಯಲ್ಲಿಡಲಾಗುತ್ತದೆ. 10 ಕೋಟಿ ರು ನಿಂದ 20 ಕೋಟಿ ರು ತನಕ ಈ ರೀತಿ ಬೆಟ್ಟಿಂಗ್ ನಡೆಯುತ್ತದೆ. [ಸ್ಪಾಟ್ ಫಿಕ್ಸಿಂಗ್ : ವಿಜಯ್ ಮಲ್ಯ, ಪವಾರ್ ಕೂಡಾ ಭಾಗಿ]

ಲಲಿತ್ ಮೋದಿಗೆ ಕಟಂಕ
2010ರಲ್ಲಿ ಆದಾಯ ತೆರಿಗೆ ಇಲಾಖೆ ನೀಡಿದ ವರದಿ ಆಧಾರಿಸಿ ಜಾರಿ ನಿರ್ದೇಶನಾಲಯ ಮಾಜಿ ಚೇರ್ಮನ್ ಲಲಿತ್ ಮೋದಿಯನ್ನು ಪ್ರಶ್ನಿಸಲು ಬಯಸಿದೆ. ಗೌರವ್ ಬರ್ಮನ್ ಎಂಬ ವ್ಯಕ್ತಿಯ ಮೂಲಕ ಈ ವೆಬ್ ಸೈಟ್ ಜೊತೆ ಲಲಿತ್ ಸಂಪರ್ಕ ಹೊಂದಿದ್ದ ಗುಮಾನಿ ವ್ಯಕ್ತವಾಗಿದೆ.

ಈ ಕುರಿತ ಅಗತ್ಯ ದಾಖಲೆಗಳನ್ನು ಯುಕೆ ಕೋರ್ಟಿಗೆ ಸಲ್ಲಿಸಿ ಲಲಿತ್ ಮೋದಿ ಹಾಗೂ ಬೆಟ್ ಫೇರ್.ಕಾಂ ಅಧಿಕಾರಿಗಳನ್ನು ಪ್ರಶ್ನಿಸಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ. ( ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X