ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು!

IPL bubble: Bluetooth bands with warning alarm to enforce social distancing between the players

ಬೆಂಗಳೂರು: ಒಂದು ವೇಳೆ ಹೇರ್ ಕಟ್ ಮಾಡಬೇಕಾದರೆ ಏನು ಮಾಡಬೇಕು? ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದರೂ ಯಾಕೆ ನಾನು ಮತ್ತೊಬ್ಬನ ರೂಮ್‌ಗೆ ಹೋಗಬಾರದು? ಫೋಟೋ ಶೂಟ್‌ ವೇಳೆ ನಾನು ಮತ್ತೊಬ್ಬ ಆಟಗಾರನನ್ನು ಅಪ್ಪಿಕೊಳ್ಳೋದು ಮತ್ತು ಹೈ-ಫೈವ್ಸ್ ಮಾಡಬಹುದೆ? ಮೇಕಪ್ ಮಾಡುವಾತನಿಗೆ ಮುನ್ನೆಚ್ಚರಿಕಾ ಕ್ರಮಗಳೇನು? ನೋಸ್-ಸ್ವ್ಯಾಬ್ ಪರೀಕ್ಷೆಯನ್ನು ನಾವು ತಪ್ಪಿಸಬಹುದೇ ಮತ್ತು ಕೋವಿಡ್ 19 ಅನ್ನು ಕಂಡು ಹಿಡಿಯಲು ಲಾಲಾರಸ ಪರೀಕ್ಷೆಯನ್ನು ಆರಿಸಬಹುದೇ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಸಂಭಾವ್ಯ XI ಹೀಗಿದೆ ನೋಡಿ!ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಸಂಭಾವ್ಯ XI ಹೀಗಿದೆ ನೋಡಿ!

ನಮ್ಮ ತಂಡದ ಕ್ಷೌರಿಕ ಪಿಪಿಇ ಕಿಟ್ ಧರಿಸಿರುತ್ತಾನೆಯೇ? ನಾನು ಇಡೀ ದಿನ ಬ್ಲೂಟೂಟ್ ರಿಸ್ಟ್ ಬ್ಯಾಂಡ್ ಕಟ್ಟಿರಬೇಕಾ? ಇವೆಲ್ಲ ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕಾರಿಗಳು ನಡೆಸಿದ ವೆಬಿನಾರ್ ವೇಳೆ ಆಟಗಾರರಿಂದ ಕೇಳಿಬಂದ ಪ್ರಶ್ನೆಗಳು.

ಟಿ20ಐ ರ್‍ಯಾಂಕಿಂಗ್ಸ್: ಬಾಬರ್ ಬೆನ್ನ ಹಿಂದಿದ್ದಾರೆ ಕನ್ನಡಿಗ ಕೆಎಲ್ ರಾಹುಲ್ಟಿ20ಐ ರ್‍ಯಾಂಕಿಂಗ್ಸ್: ಬಾಬರ್ ಬೆನ್ನ ಹಿಂದಿದ್ದಾರೆ ಕನ್ನಡಿಗ ಕೆಎಲ್ ರಾಹುಲ್

ವೆಬಿನಾರ್‌ನಲ್ಲಿ ಐಪಿಎಲ್ ಅಧಿಕಾರಿಗಳು ಆಟಗಾರರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಟೂರ್ನಿಯ ವೇಳೆ ಆಟಗಾರರು ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ್ದಾರೆ. ಇದರಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳೂ ಇವೆ.

ದೂರ ದೂರ ಇರುವ ಶಿಕ್ಷೆ

ದೂರ ದೂರ ಇರುವ ಶಿಕ್ಷೆ

ಕ್ರೀಡಾಪಟುಗಳು ಹೆಚ್ಚಾಗಿ ಸ್ನೇಹಿತರೊಂದಿಗಿರಲು ಬಯಸುತ್ತಾರೆ. ಆದರೆ ಐಪಿಎಲ್ ಟೂರ್ನಿಯ ವೇಳೆ ಜೈವಿಕ ಸುರಕ್ಷಾ ಪರದೆಯೊಳಗಿದ್ದರೂ ಆಟಗಾರರು ತಮ್ಮ ಸ್ನೇಹಿತರಿಂದ ದೂರ ದೂರವೇ ಇರಬೇಕಾಗಿದೆ. ಈ ನಿಯಮ ಬರೀ ಕ್ವಾರಂಟೈನ್ ವೇಳೆಯಷ್ಟೇ ಅಲ್ಲ, ಟೂರ್ನಿ ಆರಂಭದಿಂದ ಅಂತ್ಯವಾಗುವವರೆಗೂ ಒಬ್ಬ ಆಟಗಾರ ಮತ್ತೊಬ್ಬನ ರೂಮಿಗೆ ಹೋಗುವಂತಿಲ್ಲ.

ಸಾಮಾಜಿಕ ಅಂತರ ಕಟ್ಟುನಿಟ್ಟು

ಸಾಮಾಜಿಕ ಅಂತರ ಕಟ್ಟುನಿಟ್ಟು

ಯುಎಇಯಲ್ಲಿ ಈ ಬಾರಿ ನಡೆಯುವ ಐಪಿಎಲ್‌ ವೇಳೆ ಆಟಗಾರರು ಮತ್ತೊಬ್ಬರ ರೂಮಿಗೆ ಹೋಗುವಂತಿಲ್ಲ. ಆದರೆ ಇಬ್ಬರೂ ತಮ್ಮ ಕೋಣೆಯ ಬಾಗಿಲುಗಳ ಹತ್ತಿರ ಸಾಮಾಜಿಕ ಅಂತರದೊಂದಿಗೆ ಒಬ್ಬರನ್ನೊಬ್ಬರು ಭೇಟಿಯಾಗಬಹುದು. ಇಲ್ಲವೆ ಭೇಟಿಗೆ ನಿಗದಿ ಪಡಿಸಿದ ಜಾಗದಲ್ಲಿ ಭೇಟಿಯಾಗಬಹುದು. ಆದರೆ ಭೇಟಿಯ ವೇಳೆ ಇಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುವ ನಿಯಮಕ್ಕೆ ಬದ್ಧರಾಗಿರಬೇಕು.

ಹತ್ರ ಬಂದ್ರೆ ಅಲರಾಮು!

ಹತ್ರ ಬಂದ್ರೆ ಅಲರಾಮು!

ಐಪಿಎಲ್‌ಗಾಗಿ ಯುಎಇಯಲ್ಲಿ ಬಯೋ ಬಬಲ್ ಒಳಗಿರುವ ಆಟಗಾರರು ಕೈಗೆ ವಿಶೇಷ ಬ್ಲೂಟೂಟ್ ರಿಸ್ಟ್ ಬ್ಯಾಂಡ್ ಕಟ್ಟಿಕೊಳ್ಳಬೇಕು. ಆಟಗಾರರು ಒಂದು ವೇಳೆ ಎರಡು ಮೀಟರ್ ದೂರ ಸಾಮಾಜಿಕ ಅಂತರ ನಿಯಮವನ್ನು ಮೀರಿದರೆ ಈ ಬ್ಯಾಂಡ್ ಬಡಿದುಕೊಳ್ಳುತ್ತದೆ. ಆಟಗಾರರು ಮಲಗುವಾಗ ಹೊರತುಪಡಿಸಿ ಬೇರೆಲ್ಲಾ ಸಮಯದಲ್ಲಿ ಬ್ಯಾಂಡ್ ಧರಿಸಿರಬೇಕು (ಆಟಗಾರರ ಜೊತೆಗೆ ಉಳಿದುಕೊಳ್ಳುವ ಕುಟುಂಬದ ಸದಸ್ಯರೂ ಬ್ಯಾಂಡ್ ಧರಿಸಬೇಕೆ ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ).

ರೂಮೊಳಗೇ ಹೇರ್ ಸ್ಟೈಲಿಶ್

ರೂಮೊಳಗೇ ಹೇರ್ ಸ್ಟೈಲಿಶ್

ಐಪಿಎಲ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಯುಎಇಗೆ ಹೋಗುವಾಗ ಭಾರತದಿಂದ ಹೇರ್ ಸ್ಟೈಲಿಶ್ ಒಬ್ಬರನ್ನು ಕರೆದೊಯ್ದಿದೆ. ರಾಜಸ್ಥಾನ್ ರಾಯಲ್ಸ್ ಕೂಡ ಅಲ್ಲೇ ಬೀಚೊಂದರ ಪಕ್ಕ ಬರೀ ತಮ್ಮ ತಂಡದವರಿಗೋಸ್ಕರ ಮಾತ್ರ ಹೇರ್ ಸ್ಟೈಲ್‌ಗೆ ವ್ಯವಸ್ಥೆ ಮಾಡಿಕೊಂಡಿದೆ. ಅಂತೂ ಎಲ್ಲಾ ತಂಡಗಳಿಗೂ ಈ ಬಾರಿಯ ಐಪಿಎಲ್ ವಿಭಿನ್ನ ಅನುಭವ ನೀಡಲಿದೆ.

Story first published: Friday, August 28, 2020, 10:02 [IST]
Other articles published on Aug 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X