ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಜರುದ್ದೀನ್‌ಗೆ ನಿಷೇಧ ತೆರವಾಗಿದೆ, ನನಗೇಕಿಲ್ಲ?: ಶ್ರೀಶಾಂತ್ ಅಳಲು

ನವದೆಹಲಿ, ಡಿಸೆಂಬರ್ 8: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಆಜೀವ ನಿಷೇಧ ಅನುಭವಿಸುತ್ತಿರುವ ಕೇರಳದ ವೇಗಿ ಎಸ್. ಶ್ರೀಶಾಂತ್, ತಮ್ಮ ವಿರುದ್ಧದ ಶಿಕ್ಷೆ ಅತ್ಯಂತ ಕಠಿಣವಾಗಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಅಲವತ್ತುಕೊಂಡಿದ್ದಾರೆ.

ಶ್ರೀಶಾಂತ್ ಪರ ಹಾಜರಾದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಶ್ರೀಶಾಂತ್ ಅವರನ್ನು ಖುಲಾಸೆ ಮಾಡಲಾಗಿದೆ. ಹೀಗಾಗಿ ಅವರ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸಿ ಅವರಿಗೆ ಕ್ರಿಕೆಟ್ ಆಡಲು ಮತ್ತೆ ಅವಕಾಶ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಅಜಯ್ ರಸ್ತೋಗಿ ಅವರ ನೇತೃತ್ವದ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಕೌಂಟಿ ಕ್ರಿಕೆಟ್ ಆಡುವ ಶ್ರೀಶಾಂತ್ ಕೋರಿಕೆಗೆ ಸುಪ್ರೀಮ್ ಕೋರ್ಟ್ ನಕಾರಕೌಂಟಿ ಕ್ರಿಕೆಟ್ ಆಡುವ ಶ್ರೀಶಾಂತ್ ಕೋರಿಕೆಗೆ ಸುಪ್ರೀಮ್ ಕೋರ್ಟ್ ನಕಾರ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ಇತರೆ ಆಟಗಾರರಿಗೆ ಕೇವಲ 3-5 ವರ್ಷಗಳ ನಿಷೇಧ ಹೇರಲಾಗಿದೆ. ಆದರೆ, ಶ್ರೀಶಾಂತ್‌ಗೆ ಆಜೀವ ನಿಷೇಧ ಹೇರಿರುವುದು ನ್ಯಾಯೋಚಿತವಲ್ಲ ಎಂದು ಹೇಳಿದರು.

ಅವಕಾಶಗಳು ಬಂದಿವೆ, ಅನುಮತಿ ನೀಡಿ

ಅವಕಾಶಗಳು ಬಂದಿವೆ, ಅನುಮತಿ ನೀಡಿ

'ಆಜೀವ ನಿಷೇಧ ಅತ್ಯಂತ ಕಠಿಣವಾಗಿದೆ. ಅವರಿಗೆ ಈಗಾಗಲೇ 36 ವರ್ಷ. ನಿಷೇಧದ ಕಾರಣ ಅವರಿಗೆ ಸ್ಥಳೀಯ ಕ್ಲಬ್ ಕ್ರಿಕೆಟ್ ಆಡಲೂ ಸಾಧ್ಯವಾಗುತ್ತಿಲ್ಲ. ಅವರಿಗೆ ಆಡಲು ಆಸಕ್ತಿ ಇದೆ. ಇಂಗ್ಲೆಂಡ್‌ನಿಂದ ಕೆಲವು ಆಹ್ವಾನವೂ ಬಂದಿವೆ. ಆದರೆ, ಅವರಿಗೆ ಆಡಲು ಅನುಮತಿ ನೀಡದೆ ಇದ್ದರೆ ಈ ಅವಕಾಶಗಳು ಕೈತಪ್ಪಲಿವೆ' ಎಂದು ಖುರ್ಷಿದ್, ಅವರಿಗೆ ಈ ಆಫರ್‌ಗಳನ್ನು ಒಪ್ಪಿಕೊಳ್ಳಲು ಅನುಕೂಲವಾಗುವಂತೆ ಮಧ್ಯಂತರ ಆದೇಶ ನೀಡಿ ಎಂದು ಕೋರಿದರು.

ಶ್ರೀಶಾಂತ್ ಮೇಲಿನ ನಿಷೇಧ: ಬಿಸಿಸಿಐಗೆ ಸುಪ್ರೀಂನಿಂದ ನೋಟಿಸ್

ಅಜರ್‌ಗೆ ಅವಕಾಶ ನೀಡಲಾಗಿದೆ

ಅಜರ್‌ಗೆ ಅವಕಾಶ ನೀಡಲಾಗಿದೆ

ಇತರೆ ಯಾವ ಕ್ರಿಕೆಟಿಗರನ್ನೂ ಇಷ್ಟು ಕಠಿಣವಾಗಿ ನಡೆಸಿಕೊಂಡಿಲ್ಲ ಎಂದ ಖುರ್ಷಿದ್, ಮ್ಯಾಚ್ ಫಿಕ್ಸಿಂಗ್‌ ಆರೋಪದಲ್ಲಿ ಇದೇ ರೀತಿ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಅವರ ಪ್ರಕರಣವನ್ನು ಉಲ್ಲೇಖಿಸಿದರು.

ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅಜರುದ್ದೀನ್ ಅವರಿಗೆ ಬಿಸಿಸಿಐ ಅವಕಾಶ ನೀಡಿದೆ ಎಂದು ವಿವರಿಸಿದರು.

ಎಸ್ ಶ್ರೀಶಾಂತ್ ಕ್ರಿಕೆಟ್ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಬಿಸಿಸಿಐ

ಕಠಿಣ ಸಂದೇಶ ರವಾನೆ

ಕಠಿಣ ಸಂದೇಶ ರವಾನೆ

ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ಪರವಾಗಿ ಹಾಜರಾದ ಹಿರಿಯ ವಕೀಲ ಪರಾಗ್ ತ್ಯಾಗಿ, ಕ್ರಿಕೆಟ್‌ನಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಮತ್ತು ಅವ್ಯವಹಾರಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇತರೆ ಆಟಗಾರರಿಗೆ ಕಠಿಣ ಸಂದೇಶ ರವಾನಿಸುವ ಸಲುವಾಗಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದರು.

ವಿಚಾರಣೆ ಮುಂದೂಡಿಕೆ

ವಿಚಾರಣೆ ಮುಂದೂಡಿಕೆ

ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಅವರನ್ನು ಖುಲಾಸೆಗೊಳಿಸಿದ ತೀರ್ಪನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಮೊದಲು ಬಗೆಹರಿಯಲಿ ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಜನವರಿ ಮೂರವೇ ವಾರಕ್ಕೆ ಮುಂದೂಡಿತು.

2013ರ ಐಪಿಎಲ್ ಪ್ರಕರಣ

2013ರ ಐಪಿಎಲ್ ಪ್ರಕರಣ

2013ರ ಐಪಿಎಲ್ ಆವೃತ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಶ್ರೀಶಾಂತ್‌ ಮೇಲೆ ಆಜೀವ ನಿಷೇಧ ವಿಧಿಸಲಾಗಿದೆ.

ಕ್ರಿಕೆಟಿಗರಾದ ಅಜಿಂತ್ ಚಾಂಡಿಲ ಮತ್ತು ಅಂಕೀತ್ ಚವಾಣ್ ಹಾಗೂ ಇತರರೊಂದಿಗೆ ಶ್ರೀಶಾಂತ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ನಿಷೇಧ ತೆರವಿಗೆ ಬಿಸಿಸಿಐ ನಕಾರ

ನಿಷೇಧ ತೆರವಿಗೆ ಬಿಸಿಸಿಐ ನಕಾರ

ಚಾಂಡಿಲ, ಚವಾಣ್ ಮತ್ತು ಶ್ರೀಶಾಂತ್ ಅವರೊಂದಿಗೆ ಎಲ್ಲ 36 ಆರೋಪಿಗಳ ವಿರುದ್ಧದ ಪ್ರಕರಣವನ್ನು ವಿಚಾರಣಾ ನ್ಯಾಯಾಲಯ 2015ರ ಜುಲೈನಲ್ಲಿ ಖುಲಾಸೆಗೊಳಿಸಿತ್ತು. ಇದನ್ನು ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆರೋಪ ಮುಕ್ತ ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದ್ದರೂ, ಶ್ರೀಶಾಂತ್ ವಿರುದ್ಧದ ಆಜೀವ ನಿಷೇಧವನ್ನು ತೆರವುಗೊಳಿಸಲು ಬಿಸಿಸಿಐ ನಿರಾಕರಿಸಿತ್ತು.

ಕೇರಳ ಹೈಕೋರ್ಟ್‌ನ ಏಕ ವ್ಯಕ್ತಿ ನ್ಯಾಯಪೀಠ ಕಳೆದ ವರ್ಷದ ಆಗಸ್ಟ್ 7ರಂದು ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸಿತ್ತು. ಆದರೆ, ಬಿಸಿಸಿಐ ಅರ್ಜಿಯ ಆಧಾರದಲ್ಲಿ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಮತ್ತೆ ನಿಷೇಧವನ್ನು ಹೇರಿತ್ತು.

Story first published: Saturday, December 8, 2018, 11:18 [IST]
Other articles published on Dec 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X