ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೆಹ್ವಾಗ್, ಬಟ್ಲರ್ ಅಪರೂಪದ ದಾಖಲೆ ಸರಿಗಟ್ಟಲಿದ್ದಾರೆ ಡೇವಿಡ್ ವಾರ್ನರ್!

IPL: David Warner on verge of breaking Virender Sehwag’s big record

ಜೈಪುರ್‌, ಏಪ್ರಿಲ್ 27: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅಪ್ಪಟ ಪ್ರತಿಭಾವಂತ ಅನ್ನೋದರಲ್ಲಿ ಎರಡು ಮಾತಿಲ್ಲ. ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್‌ ಅಂಗಳಕ್ಕಿಳಿದವರೇ ಭರ್ಜರಿ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಿದ್ದಾರೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಒಟ್ಟು 124 ಐಪಿಎಲ್ ಇನ್ನಿಂಗ್ಸ್‌ಗಳನ್ನು ಆಡಿರುವ ವಾರ್ನರ್ ಖಾತೆಯಲ್ಲಿ 4,588 ರನ್‌ಗಳಿವೆ. ಅಷ್ಟೇ ಅಲ್ಲ, ಐಪಿಎಲ್‌ನಲ್ಲಿ ಅತ್ಯಧಿಕ ರನ್‌ಗಾಗಿ ಹೆಚ್ಚಿನ ಸಾರಿ ಆರೆಂಜ್ ಕ್ಯಾಪ್ ಧರಿಸಿದ ಹೆಗ್ಗಳಿಕೆಯೂ ವಾರ್ನರ್ ಅವರದ್ದು. 2019ರ ಐಪಿಎಲ್‌ನಲ್ಲೂ ಡೇವಿಡ್, ಆರೆಂಜೆ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.

ರಾಜಸ್ಥಾನ್ vs ಹೈದರಾಬಾದ್, ಶನಿವಾರ (ಏಪ್ರಿಲ್ 27), Live ಸ್ಕೋರ್‌

1
45921

ಅರ್ಜುನ ಪ್ರಶಸ್ತಿಗೆ ಬಿಸಿಸಿಐನಿಂದ ನಾಲ್ವರು ಕ್ರಿಕೆಟಿಗರ ಹೆಸರು ಶಿಫಾರಸುಅರ್ಜುನ ಪ್ರಶಸ್ತಿಗೆ ಬಿಸಿಸಿಐನಿಂದ ನಾಲ್ವರು ಕ್ರಿಕೆಟಿಗರ ಹೆಸರು ಶಿಫಾರಸು

ಶನಿವಾರ (ಏಪ್ರಿಲ್ 27) ರಾಜಸ್ಥಾನ್‌ನ ಜೈಪುರ್‌ನಲ್ಲಿ ನಡೆಯಲಿರುವ ಐಪಿಎಲ್ 45ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅಪರೂಪದ ದಾಖಲೆಯೊಂದನ್ನು ಬರೆಯುವುದರಲ್ಲಿದ್ದಾರೆ. ಒಂದು ವೇಳೆ ವಾರ್ನರ್ ಈ ದಾಖಲೆ ಮಾಡಿದರೆ ಭಾರತ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಮತ್ತು ಇಂಗ್ಲೆಂಡ್ ಕ್ರಿಕೆಟಿಗ ಜೋಸ್ ಬಲ್ಲರ್ ಹೆಸರಿನಲ್ಲಿರುವ ಐಪಿಎಲ್ ದಾಖಲೆ ಮುರಿದು ಹೋಗಲಿದೆ.

ಸೆಹ್ವಾಗ್-ಬಟ್ಲರ್ ದಾಖಲೆ ಬದಿಗೆ

ಸೆಹ್ವಾಗ್-ಬಟ್ಲರ್ ದಾಖಲೆ ಬದಿಗೆ

ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಶನಿವಾರ ನಡೆಯುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಏನಾದರೂ ಅರ್ಧಶತಕ ಬಾರಿಸಿದರೆ, ಐಪಿಎಲ್‌ನಲ್ಲಿ ಸತತ ಐದು ಬಾರಿ ಅರ್ಧಶತಕ ಬಾರಿಸಿರುವ ವಿರೇಂದ್ರ ಸೆಹ್ವಾಗ್ ಮತ್ತು ಜೋಸ್ ಬಟ್ಲರ್ ದಾಖಲೆ ಮುರಿದು ಬೀಳಲಿದೆ.

ಸತತ ಐದು ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕ

ಸತತ ಐದು ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕ

ವಾರ್ನರ್ ಈಗ ಐಪಿಎಲ್‌ನಲ್ಲಿ ಸತತ ಐದು ಬಾರಿ ಅರ್ಧಶತಕದ ದಾಖಲೆಯೊಂದಿಗೆ ಸೆಹ್ವಾಗ್ ಮತ್ತು ಬಟ್ಲರ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ. 2019ರ ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧ 57, ಕೆಕೆಆರ್‌ ವಿರುದ್ಧ 67, ಸಿಎಸ್‌ಕೆ ವಿರುದ್ಧ 50, ಡಿಸಿ ವಿರುದ್ಧ 51 ಮತ್ತು ಕೆ‍XIಪಿ ವಿರುದ್ಧ ಅಜೇಯ 71 ರನ್‌ಗಳೊಂದಿಗೆ ಹಿಂದಿನ ಐದು ಇನ್ನಿಂಗ್ಸ್‌ಗಳಲ್ಲಿ ವಾರ್ನರ್ ಅರ್ಧಶತಕ ಬಾರಿಸಿದ್ದಾರೆ.

2018ರಲ್ಲಿ ಮಿಂಚಿದ್ದ ಬಟ್ಲರ್

2018ರಲ್ಲಿ ಮಿಂಚಿದ್ದ ಬಟ್ಲರ್

ಸ್ಫೋಟಕ ಬ್ಯಾಟಿಂಗ್‌ಗಾಗಿ ಭಾರತ ತಂಡದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಕ್ರಿಕೆಟಿಗ ಸೆಹ್ವಾಗ್ 2012ರ ಐಪಿಎಲ್‌ನಲ್ಲಿ ಸತತ ಐದು ಇನ್ನಿಂಗ್ಸ್‌ಗಳಲ್ಲಿ 50+ ರನ್‌ ಬಾರಿಸಿ ದಾಖಲೆ ನಿರ್ಮಿಸಿದ್ದರು. ಅದಾಗಿ 2018ರಲ್ಲಿ ಬಟ್ಲರ್ ಇದೇ ಸಾಧನೆ ಮಾಡಿದ್ದರು. ಈಗ ಡೇವಿಡ್ ವಾರ್ನರ್ ಒಂದು ಅರ್ಧ ಶತಕ ಬಾರಿಸಿದರೂ ಸತತ 6 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 50+ ರನ್ ಇತಿಹಾಸ ನಿರ್ಮಾಣವಾಗಲಿದೆ.

ಮೂರನೇ ಸಾರಿ ಆರೆಂಜ್ ಕ್ಯಾಪ್

ಮೂರನೇ ಸಾರಿ ಆರೆಂಜ್ ಕ್ಯಾಪ್

ಐಪಿಎಲ್‌ ಸೀಸನ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿದವರಿಗೆ ಗೌರವದ ಕುರುಹಾಗಿ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಫೈನಲ್ ಪಂದ್ಯ ಆರೆಂಜೆ ಕ್ಯಾಪ್ ಉಳಿಸಿಕೊಂಡ ಕಡೆಯ ಆಟಗಾರನನ್ನು ನಿರ್ಧರಿಸಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಸದ್ಯ ಆರೆಂಜ್ ಕ್ಯಾಚ್ ವಾರ್ನರ್ ತಲೆ ಮೇಲಿದೆ. ವಾರ್ನರ್ ಆರೆಂಜ್ ಕ್ಯಾಪ್ ಧರಿಸುತ್ತಿರುವುದು ಇದು ಮೂರನೇ ಸಾರಿ. ಒಟ್ಟು 10 ಇನ್ನಿಂಗ್ಸ್‌ಗಳಲ್ಲಿ ವಾರ್ನರ್ 574 ರನ್‌ ಗಳಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಹೈದರಾಬಾದ್‌ ಇನ್ನೊಬ್ಬ ಆಟಗಾರ ಜಾನಿ ಬೇರ್ಸ್ಟೋವ್ 445 ರನ್ ಗಳಿಸಿದ್ದಾರೆ.

Story first published: Saturday, April 27, 2019, 18:18 [IST]
Other articles published on Apr 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X