ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲಿಷ್ ಪ್ರೀಮಿಯರ್ ಲೀಗ್‌ಗಿಂತ ಐಪಿಎಲ್ ಹೆಚ್ಚಿನ ಆದಾಯ ಗಳಿಸುತ್ತದೆ: ಸೌರವ್ ಗಂಗೂಲಿ

IPL Earns More Revenue Than the English Premier League Says Sourav Ganguly

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡಾ ಪಂದ್ಯಾವಳಿಗಳಲ್ಲಿ ಒಂದಾಗಿದೆ ಮತ್ತು ಇದು ಅಪಾರ ಅಭಿಮಾನಿಗಳನ್ನು ಹೊಂದಿದೆ. ವಿಶ್ವದ ಪ್ರತಿಯೊಬ್ಬ ಕ್ರಿಕೆಟಿಗರು ಈ ಪಂದ್ಯಾವಳಿಯಲ್ಲಿ ಆಡಲು ನೋಡುತ್ತಾರೆ ಮತ್ತು ಪಂದ್ಯಗಳು ಇದ್ದಾಗಲೆಲ್ಲಾ ಅಭಿಮಾನಿಗಳು ಕ್ರೀಡಾಂಗಣಗಳಿಗೆ ಬರುತ್ತಾರೆ.

IND vs SA 2ನೇ ಟಿ20: ಗೆಲುವಿನೊಂದಿಗೆ ಕಮ್ ಬ್ಯಾಕ್ ಮಾಡಲು ಭಾರತ ಸ್ಟ್ರಾಟಜಿ ಏನು?IND vs SA 2ನೇ ಟಿ20: ಗೆಲುವಿನೊಂದಿಗೆ ಕಮ್ ಬ್ಯಾಕ್ ಮಾಡಲು ಭಾರತ ಸ್ಟ್ರಾಟಜಿ ಏನು?

ಮಾಜಿ ಭಾರತದ ಆಟಗಾರ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ತಾವು ಪ್ರೀತಿಸುವ ಕ್ರೀಡೆಯು ತುಂಬಾ ವಿಕಸನಗೊಳ್ಳುವುದನ್ನು ನೋಡಲು ನಿಜವಾಗಿಯೂ ಸಂತೋಷವಾಗಿದೆ ಎಂದು ಹೇಳಿದ್ದಾರೆ ಮತ್ತು ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಗಿಂತ ಐಪಿಎಲ್ ಹೆಚ್ಚಿನ ಆದಾಯವನ್ನು ಗಳಿಸುತ್ತದೆ ಎಂದು ಹೇಳಿದ್ದಾರೆ.

ಕೋಟ್ಯಂತರ ರೂಪಾಯಿ ಗಳಿಸುವ ಸಾಮರ್ಥ್ಯ

ಕೋಟ್ಯಂತರ ರೂಪಾಯಿ ಗಳಿಸುವ ಸಾಮರ್ಥ್ಯ

"ನನ್ನಂತಹ ಕ್ರಿಕೆಟ್ ಆಟಗಾರರು ಕೆಲವು ಶತಕಗಳನ್ನು ಗಳಿಸಿದ ನಂತರ ಈಗ ಕೋಟ್ಯಂತರ ರೂಪಾಯಿ ಗಳಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಕ್ರಿಕೆಟ್ ಆಟವು ವಿಕಸನಗೊಳ್ಳುವುದನ್ನು ನಾನು ನೋಡುತ್ತಿದ್ದೇನೆ. ಈ ಐಪಿಎಲ್ ಪಂದ್ಯಾವಳಿಯನ್ನು ಕ್ರಿಕೆಟ್ ಅಭಿಮಾನಿಗಳು, ಈ ದೇಶದ ಜನರು ಮತ್ತು ಬಿಸಿಸಿಐ ನಡೆಸುತ್ತಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಂದ ಈ ಕ್ರೀಡೆಯು ಪ್ರಬಲವಾಗಿದೆ ಮತ್ತು ವಿಕಸನಗೊಳ್ಳುತ್ತಲೇ ಇರುತ್ತದೆ," ಎಂದು ತಿಳಿಸಿದರು.

ನನಗೆ ಸಂತೋಷ ಮತ್ತು ಹೆಮ್ಮೆಯನ್ನುಂಟು ಮಾಡಿದೆ

ನನಗೆ ಸಂತೋಷ ಮತ್ತು ಹೆಮ್ಮೆಯನ್ನುಂಟು ಮಾಡಿದೆ

"ಇಂಗ್ಲೀಷ್ ಪ್ರೀಮಿಯರ್ ಲೀಗ್‌ಗಿಂತ ಭಾರತದ ಐಪಿಎಲ್ ಹೆಚ್ಚಿನ ಆದಾಯವನ್ನು ಗಳಿಸುತ್ತದೆ. ನಾನು ಪ್ರೀತಿಸುವ ಕ್ರೀಡೆಯು ಇಷ್ಟು ಬಲಿಷ್ಠವಾಗಿ ವಿಕಸನಗೊಂಡಿರುವುದು ನನಗೆ ಸಂತೋಷ ಮತ್ತು ಹೆಮ್ಮೆಯನ್ನುಂಟು ಮಾಡುತ್ತದೆ," ಎಂದು ಇಂಡಿಯಾ ಲೀಡರ್‌ಶಿಪ್ ಕೌನ್ಸಿಲ್ ಈವೆಂಟ್‌ನಲ್ಲಿ ಸೌರವ್ ಗಂಗೂಲಿ ವರ್ಲ್ಡ್‌ವೈಡ್ ಮೀಡಿಯಾದ ಸಿಇಒ, ಟೈಮ್ಸ್ ಸ್ಟ್ರಾಟೆಜಿಕ್ ಸೊಲ್ಯೂಷನ್ಸ್ ಲಿಮಿಟೆಡ್‌ನ ಅಧ್ಯಕ್ಷ ದೀಪಕ್ ಲಂಬಾ ಅವರೊಂದಿಗೆ ಮಾತನಾಡುತ್ತಾ ಹೇಳಿದರು.

ಐಪಿಎಲ್ 2022 ಈ ವರ್ಷ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ದೊಡ್ಡ ಪ್ರಮಾಣದಲ್ಲಿ ನಡೆಯಿತು. 74 ಪಂದ್ಯಗಳ ಐಪಿಎಲ್ ಋತುವಿನ ಫೈನಲ್ ಘರ್ಷಣೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿದ ನಂತರ ಹೊಸ ತಂಡವಾದ ಗುಜರಾತ್ ಟೈಟನ್ಸ್ ಚೊಚ್ಚಲ ಪ್ರಶಸ್ತಿಯೊಂದಿಗೆ ಚಾಂಪಿಯನ್ ಆದರು.

ನಾಯಕತ್ವವು ನನಗೆ ತಂಡವನ್ನು ನಿರ್ಮಿಸುವ ಕೆಲಸ

ನಾಯಕತ್ವವು ನನಗೆ ತಂಡವನ್ನು ನಿರ್ಮಿಸುವ ಕೆಲಸ

ಈ ಸಂದರ್ಭದಲ್ಲಿ ಸೌರವ್ ಗಂಗೂಲಿ ಅವರ ನಾಯಕತ್ವದ ಶೈಲಿಯ ಬಗ್ಗೆಯೂ ಕೇಳಲಾಯಿತು. ಇದೇ ವೇಳೆ ಮಾತನಾಡಿದ ಗಂಗೂಲಿ, "ನಾಯಕತ್ವವು ನನಗೆ ಮೈದಾನದಲ್ಲಿ ತಂಡವನ್ನು ಮುನ್ನಡೆಸುವುದು ಮತ್ತು ನಾಯಕತ್ವವು ನನಗೆ ತಂಡವನ್ನು ನಿರ್ಮಿಸುವ ಕೆಲಸವಾಗಿದೆ. ಹಾಗಾಗಿ, ನಾನು ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರಉದ್ದೀನ್ ಅಥವಾ ರಾಹುಲ್ ದ್ರಾವಿಡ್ ಅವರೊಂದಿಗೆ ಕೆಲಸ ಮಾಡಿದ್ದರೂ, ನಾನು ಅವರೊಂದಿಗೆ ಸ್ಪರ್ಧಿಸಲಿಲ್ಲ. ಬದಲಾಗಿ, ನಾನು ಅವರೊಂದಿಗೆ ನಾಯಕನಾಗಿ ಸಹಕರಿಸಿದೆ ಮತ್ತು ಜವಾಬ್ದಾರಿಯನ್ನು ಹಂಚಿಕೊಂಡಿದ್ದೇನೆ," ಎಂದು ಮೆಲುಕು ಹಾಕಿದರು.

ನನ್ನ ಸಹೋದ್ಯೋಗಿಗಳು ಉತ್ತಮ ಆಟಗಾರರಾಗಬೇಕು

ನನ್ನ ಸಹೋದ್ಯೋಗಿಗಳು ಉತ್ತಮ ಆಟಗಾರರಾಗಬೇಕು

ತಂಡದಲ್ಲಿ ನಾಯಕನಾಗುವುದು ಮತ್ತು ಬಿಸಿಸಿಐನ ನಿರ್ವಹಣೆಯ ನಡುವೆ ಏನು ಸಾಮಾನ್ಯವಾಗಿದೆ ಎಂದು ಕೇಳಿದಾಗ, "ಸಾಮಾನ್ಯ ವಿಷಯವೆಂದರೆ ವ್ಯಕ್ತಿಗಳನ್ನು ನಿರ್ವಹಿಸುವುದು ಎಂದು ನಾನು ನಂಬುತ್ತೇನೆ. ಈ ದೇಶವು ಯುವ ಆಟಗಾರರಿಂದ ಹಿಡಿದು ಯುವ ಕಾರ್ಪೊರೇಟ್ ಉದ್ಯೋಗಿಗಳವರೆಗೆ ಅಸಾಧಾರಣ ಪ್ರತಿಭೆಯನ್ನು ಹೊಂದಿದೆ. ನಾನು ಅದನ್ನು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ. ಯಶಸ್ವಿ ತಂಡದ ನಾಯಕನಾಗಿ, ನನ್ನ ಸಹೋದ್ಯೋಗಿಗಳು ಉತ್ತಮ ಆಟಗಾರರಾಗಲು ನಾನು ಅವರನ್ನು ಗೌರವಿಸಬೇಕು," ಎಂದು ಸೌರವ್ ಗಂಗೂಲಿ ಉತ್ತರಿಸಿದರು

ಸೌರವ್ ಗಂಗೂಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 2003ರ ವಿಶ್ವಕಪ್ ಫೈನಲ್‌ಗೆ ಭಾರತವನ್ನು ಮುನ್ನಡೆಸಿದ್ದರು, ಅಲ್ಲಿ ತಂಡವು ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋತಿತು.

Story first published: Sunday, June 12, 2022, 12:44 [IST]
Other articles published on Jun 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X