ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಫೈನಲ್ ಬಳಿಕ ಐಪಿಎಲ್ ಫೈನಲ್ ಅತಿದೊಡ್ಡ ಸಂಗತಿ: ಕಿರಾನ್ ಪೊಲಾರ್ಡ್

IPL Final Is The Biggest Thing After World Cup Final: Kieron Pollard

ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ಐಪಿಎಲ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೊಲಾರ್ಡ್ ವಿಶ್ವಕಪ್ ಫೈನಲ್ ಬಳಿಕ ಐಪಿಎಲ್ ಪೈನಲ್ ಮಹತ್ವದ ವಿಚಾರಾಗಿದೆ ಎಂದಿದ್ದಾರೆ.

"ಪೈನಲ್ ಎಂಬ ಹೆಸರೇ ಒತ್ತಡವನ್ನು ತರುತ್ತದೆ. ಪ್ರತಿಯೊಬ್ಬರು ಕೂಡ ಈ ಒತ್ತಡವನ್ನು ಸ್ವೀಕರಿಸುತ್ತಾರೆ. ನೀವು ಗೆಲುವನ್ನು ಸಾಧಿಸಬೇಕಿದ್ದರೆ ನೀವು ತಪ್ಪುಗಳನ್ನು ಮಾಡಬಾರದು. ಆದರೆ ಅಂತಿಮವಾಗಿ ಫೈನಲ್ ಪಂದ್ಯವನ್ನು ನೀವು ಸಾಧಾರಣ ಪಂದ್ಯವನ್ನಾಗಿಯೇ ಆಡಬೇಕು. ಅಲ್ಲಿಗೆ ತೆರಳಬೇಕು, ನಿಮ್ಮಷ್ಟಕ್ಕೇ ನೀವು ಹಾಗೂ ಆಡುವ ವಾತಾವರಣವನ್ನು ಅನುಭವಿಸಬೇಕು" ಎಂದಿದ್ದಾರೆ ಪೊಲಾರ್ಡ್.

ಫೈನಲ್ ಪ್ರವೇಶ ನಮ್ಮ ಸಂಪಾದನೆ, ಈಗ ನಮ್ಮ ಗುರಿ ಟ್ರೋಫಿ ಗೆಲ್ಲುವುದು: ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ಫೈನಲ್ ಪ್ರವೇಶ ನಮ್ಮ ಸಂಪಾದನೆ, ಈಗ ನಮ್ಮ ಗುರಿ ಟ್ರೋಫಿ ಗೆಲ್ಲುವುದು: ಡೆಲ್ಲಿ ಕೋಚ್ ರಿಕಿ ಪಾಂಟಿಂಗ್

"ಖಂಡಿತವಾಗಿಯೂ ಈ ಪೈನಲ್ ಪಂದ್ಯದಲ್ಲಿ ಪ್ರೇಕ್ಷಕರು ಇರುವುದಿಲ್ಲ. ಆದರೆ ಅದರ ಪ್ರಮಾಣವನ್ನು ನಾವು ಅನುಭವಿಸುತ್ತೇವೆ. ವಿಶ್ವಕಪ್ ಫೈನಲ್‌ನ ಬಳಿಕ ಅತ್ಯಂತ ಮಹತ್ವದ ವಿಚಾರ ಅಂದರೆ ಅದು ಐಪಿಎಲ್ ಫೈನಲ್" ಎಂದು ಕಿರಾನ್ ಪೊಲಾರ್ಡ್ ಐಪಿಎಲ್ ಫೈನಲ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ನಮ್ಮ ತಂಡದ ಸದಸ್ಯರಿಗೂ ನಾನು ಇದನ್ನೇ ಹೇಳಲು ಬಯಸುತ್ತೇನೆ. ಅಂಗಳಕ್ಕಿಳಿದು ಆ ಕ್ಷಣವನ್ನು ಅನುಭವಿಸಿ. ತಂಡದಲ್ಲಿ ಕೆಲ ಆಟಗಾರರು ಈ ಹಿಂದೆಯೂ ಇದ್ದು ಇದನ್ನು ಎದುರಿಸಿದ್ದರು. ಹಾಗಾಗಿ ಯಾವ ರೀತಿಯಲ್ಲಿ ಫೈನಲ್ ಪಂದ್ಯಕ್ಕೆ ಸಿದ್ದರಾಗಬೆಕು ಹಾಗೂ ಎದುರಿಸಬೇಕು ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ" ಎಂದು ಪೊಲಾರ್ಡ್ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ಮುಂಬೈ vs ಡೆಲ್ಲಿ ಫೈನಲ್‌ ಹಣಾಹಣಿ: 5 ಅಚ್ಚರಿಯ ಸತ್ಯ ಸಂಗತಿಗಳು!ಮುಂಬೈ vs ಡೆಲ್ಲಿ ಫೈನಲ್‌ ಹಣಾಹಣಿ: 5 ಅಚ್ಚರಿಯ ಸತ್ಯ ಸಂಗತಿಗಳು!

ಮುಂಬೈ ಇಂಡಿಯನ್ಸ್ ಈವರೆಗೆ ಐದು ಫೈನಲ್ ಪಂದ್ಯಗಳನ್ನು ಎದುರಿಸಿದ್ದು ಅದರಕ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ. 2013, 2015, 2017 ಹಾಗೂ 2019ರಲ್ಲಿ ಮುಂಬೈ ಚಾಂಪಿಯನ್ ಆಗಿ ಮಿಂಚಿದೆ. ಈಗ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಅವಕಾಶ ಮುಂಬೈ ಮುಂದಿದೆ.

Story first published: Tuesday, November 10, 2020, 11:09 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X