ಇಂಡಿಯನ್ ಪ್ರೀಮಿಯರ್ ಲೀಗ್ 2020 ಫೈನಲ್ ಮುಂದೂಡುವ ಸಾಧ್ಯತೆ

ಮುಂಬೈ: ಕೊರೊನಾವೈರಸ್ ಭೀತಿಯ ಮಧ್ಯೆಯೇ 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಈ ಬಾರಿಯ ಐಪಿಎಲ್, ಭಾರತಕ್ಕೆ ಬದಲಾಗಿದೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ನಗದು ಶ್ರೀಮಂತ ಟಿ20 ಟೂರ್ನಿ ಸೆಪ್ಟೆಂಬರ್‌ 19ರಿಂದ ನವೆಂಬರ್ 8ರ ವರೆಗೆ ನಡೆಯಲಿದೆ ಎಂದು ಬಿಸಿಸಿಐ ಮೂಲ ಈ ಮೊದಲು ತಿಳಿಸಿತ್ತು. ಆದರೆ ಈಗ ಐಪಿಎಲ್‌ ಫೈನಲ್‌ ಪಂದ್ಯದ ದಿನಾಂಕ ಬದಲಾಗಲಿದೆ ಎನ್ನಲಾಗುತ್ತಿದೆ.

ಮನಮುಟ್ಟುವ ಹಾಗೆ ಸ್ಟುವರ್ಟ್ ಬ್ರಾಡ್‌ಗೆ ಸಂದೇಶ ಬರೆದ ಯುವರಾಜ್ ಸಿಂಗ್!

ನವೆಂಬರ್ 8ರಿಂದ ನವೆಂಬರ್ 10ಕ್ಕೆ ಪ್ರಶಸ್ತಿ ಸುತ್ತಿನ ಕಾದಾಟವನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಟೂರ್ನಿ ಪ್ರಸಾರಕರು ಮುಖ್ಯವಾಗಿ ಸ್ಟಾರ್ ಇಂಡಿಯಾವು ದೀಪಾವಳಿ ವಾರವನ್ನು ಇನ್ನಷ್ಟು ಬಳಸಿಕೊಳ್ಳಲು ಯೋಚಿಸಿದೆ ಎಂದು ಹೇಳಲಾಗುತ್ತಿದೆ.

ICC ODI Rankings: ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಫೈನಲ್ ದಿನಾಂಕದಲ್ಲಿ ಯಾಕೀ ಬದಲಾವಣೆ? ದಿನಾಂಕ ಬದಲಾದರೆ ಏನಾಗಲಿದೆ? ಇಲ್ಲಿದೆ ವಿವರಣೆ.

ವೀಕ್ಷಕರನ್ನು ಸೆಳೆಯಲು ಯೋಚನೆ

ವೀಕ್ಷಕರನ್ನು ಸೆಳೆಯಲು ಯೋಚನೆ

ಸದ್ಯದ ಮಾಹಿತಿ ಪ್ರಕಾರ 13ನೇ ಆವೃತ್ತಿಯ ಐಪಿಎಲ್, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್‌ 19ರಂದು ಆರಂಭಗೊಂಡು ನವೆಂಬರ್ 8ರಂದು ಫೈನಲ್‌ನೊಂದಿಗೆ ಮುಗಿಯಲಿದೆ. ಆದರೆ ನವೆಂಬರ್‌ನಲ್ಲಿ ದೀಪಾವಳಿ ಹಬ್ಬದ ಸಂಭ್ರಮವಾದ್ದರಿಂದ ಐಪಿಎಲ್ ಫೈನಲ್ ಕಾತರತೆಯನ್ನು ಇನ್ನೆರಡು ದಿನ ಮುಂದೂಡಿ ದೊಡ್ಡ ಸಂಖ್ಯೆಯ ವೀಕ್ಷಕರನ್ನು ಸೆಳೆಯಲು ಪ್ರಸಾರಕರು ಯೋಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಟೀಮ್ ಇಂಡಿಯಾ ಭಾರತಕ್ಕೆ ಬರಲ್ಲ

ಟೀಮ್ ಇಂಡಿಯಾ ಭಾರತಕ್ಕೆ ಬರಲ್ಲ

ಫೈನಲ್ ಪಂದ್ಯವನ್ನು ಎರಡು ದಿನಗಳ ಕಾಲ ಮುಂದೂಡಿರುವುದು ಖಾತರಿಯಾದಲ್ಲಿ, ಐಪಿಎಲ್ ಮುಗಿಯುತ್ತಲೇ ಟೀಮ್ ಇಂಡಿಯಾ, ಭಾರತಕ್ಕೆ ಬಂದು ಹೋಗುವುದರ ಬದಲು ಯುಎಇಯಿಂದಲೇ ಆಸ್ಟ್ರೇಲಿಯಾಕ್ಕೆ ಹೊರಡಲಿದೆ. ಯಾಕೆಂದರೆ ಭಾರತ-ಆಸ್ಟ್ರೇಲಿಯಾ ಸರಣಿ ಅಕ್ಟೋಬರ್ 11ರಿಂದ ಆರಂಭಗೊಳ್ಳಲಿದೆ. ಅಂದರೆ ಬಹುಶಃ, ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗದ ಆಟಗಾರರು ಐಪಿಎಲ್‌ ಫೈನಲ್‌ವರೆಗೂ ಆಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟಿ20ಐ ಮತ್ತು ಟೆಸ್ಟ್‌ನಲ್ಲಿ ಆಡುವ ತಂಡ ಐಪಿಎಲ್ ಫೈನಲ್‌ಗೂ ಮುನ್ನ ಯುಎಇ ತೊರೆಯುವ ಸಾಧ್ಯತೆಯಿದೆ. ಈ ಬಗ್ಗೆ ಬಿಸಿಸಿಐ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸಲಿದೆ.

ಕೌನ್ಸಿಲ್ ಸಭೆಯಲ್ಲಿ ಅಂತಿಮ ನಿರ್ಧಾರ

ಕೌನ್ಸಿಲ್ ಸಭೆಯಲ್ಲಿ ಅಂತಿಮ ನಿರ್ಧಾರ

ಭಾರತ vs ಆಸ್ಟ್ರೇಲಿಯಾ ಸರಣಿಗೂ ಮುನ್ನ ಎರಡೂ ತಂಡಗಳಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗಿರುವುದರಿಂದ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಮುಂಚಿತವಾಗಿ ತಲುಪಬೇಕಾಗಿದೆ. ಐಪಿಎಲ್ ಫೈನಲ್ ಪಂದ್ಯವನ್ನು ಮುಂದೂಡುವ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ (ಆಗಸ್ಟ್ 2ರ ಭಾನುವಾರ) ನಡೆಯಲಿರುವ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ.

ಐಪಿಎಲ್‌ನಲ್ಲಿ ಬದಲಾವಣೆಗಳು

ಐಪಿಎಲ್‌ನಲ್ಲಿ ಬದಲಾವಣೆಗಳು

ಈ ಬಾರಿಯ ಐಪಿಎಲ್‌ನಲ್ಲಿ ಬದಲಾವಣೆಗಳು ಕಾಣಸಿಗಲಿವೆ. 3ನೇ ಆವೃತ್ತಿಯ ಐಪಿಎಲ್ ವೀಕ್ಷಕರಿಲ್ಲದ ಖಾಲಿ ಮೈದಾನದಲ್ಲಿ ನಡೆಯಲಿದೆ. ಇನ್ನು ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರಿಗೆ 2 ವಾರದಲ್ಲಿ 4 ಬಾರಿ ಕೊರೊನಾವೈರಸ್ ಪರೀಕ್ಷೆ ನಡೆಯಲಿದೆ. ಅಲ್ಲದೆ, 'ಆಟಗಾರರು, ಸಿಬ್ಬಂದಿಗಳು ಜೈವಿಕ ಸುರಕ್ಷಾ ತಾಣದೊಳಗೆ (ಬಯೋ ಬಬಲ್) ಇರಲಿದ್ದಾರೆ. ಒಮ್ಮೆ ಟೂರ್ನಿ ಶುರುವಾದ ಬಳಿಕ ಅಲ್ಲಿಂದ ಒಬ್ಬರೂ ಹೊರ ಬರುವಂತಿಲ್ಲ, ಯಾರೂ ಒಳ ಹೋಗುವಂತಿಲ್ಲ,' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, July 30, 2020, 8:46 [IST]
Other articles published on Jul 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X