ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಇನ್ನೆರಡು ತಂಡಗಳು ಸೇರ್ಪಡೆ?!

IPL franchises discuss new teams, BCCI wants stability first

ನವದೆಹಲಿ, ಜುಲೈ 14: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್‌)ನಲ್ಲಿ ಅಹ್ಮದಾಬಾದ್ ಪರ ಅದಾನಿ ಗ್ರೂಪ್, ಪುಣೆ ಪರ ಆರ್‌ಪಿಜಿ-ಸಂಜೀವ್ ಗೋಯೆಂಕಾ ಗ್ರೂಪ್, ರಾಂಚಿ ಮತ್ತು ಜೆಮ್ಶೆಡ್ಪುರ್ ಪರ ಟಾಟಾಸ್ ಟಾಪ್ ಬಿಡ್ಡರ್‌ಗಳ ಸಾಲಿನಲ್ಲಿ ಕಾಣಿಸಿಕೊಳ್ಳುವುದರಲ್ಲಿದೆ. ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆ 8ರಿಂದ 10ಕ್ಕೆ ಏರುವ ಸಾಧ್ಯತೆಗಳಿವೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಸುಮಾರು 8 ವರ್ಷಗಳಿಗೆ ಹಿಂದೆ ಅಂದರೆ 2011ರಲ್ಲೂ ಬಿಸಿಸಿಐಯು ಐಪಿಎಲ್‌ ತಂಡಗಳನ್ನು 8ರಿಂದ 10ಕ್ಕೆ ಏರಿಸಲು ಯತ್ನಿಸಿತ್ತು. ಬೇರೆ ಬೇರೆ ವಿವಾದಗಳ ಕಾರಣ ಇದಕ್ಕೆ ಹಿನ್ನಡೆಯಾಗಿತ್ತು. ಆದರೆ ತಂಡಗಳನ್ನು ಹೆಚ್ಚಿಸುವಲ್ಲಿ ಮತ್ತೀಗ ಸ್ಟೇಕ್ ಹೋಲ್ಡರ್ಸ್ (ಮಧ್ಯಸ್ಥಗಾರರು) ಒಲವು ತೋರಿದ್ದಾರೆ.

ತಂಡಗಳ ಹೆಚ್ಚಳಕ್ಕೆ ಬಿಸಿಸಿಐ ಹಿರಿಯ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ಅತ್ತ ಮುಂದುವರೆಯುವುದಕ್ಕೂ ಮುನ್ನ ವಾಸ್ತವತೆಯನ್ನು ಪರಿಶೀಲಿಸುವ ಅಗತ್ಯವಿದೆ. ನಿಲುವಿನಲ್ಲಿ ಗೊಂದಲಗಳಿರದೆ, ಸ್ಥಿರತೆ ಇರುವುದನ್ನು ಬಿಸಿಸಿಐ ಬಯಸಿದೆ ಎನ್ನಲಾಗಿದೆ. ಯಾಕೆಂದರೆ 2011ರ ಘಟನೆ ಮರುಕಳಿಸೋದು ಬಿಸಿಸಿಐಗೆ ಇಷ್ಟವಿಲ್ಲ.

ಎಂಎಸ್ ಧೋನಿ ನಿವೃತ್ತಿ ಘೋಷಿಸಿದರೆ ಮುಂದಿನ ಐಪಿಎಲ್‌ನಲ್ಲಿ ಆಡ್ತಾರ?!ಎಂಎಸ್ ಧೋನಿ ನಿವೃತ್ತಿ ಘೋಷಿಸಿದರೆ ಮುಂದಿನ ಐಪಿಎಲ್‌ನಲ್ಲಿ ಆಡ್ತಾರ?!

ಐಪಿಎಲ್ ಟೂರ್ನಿಗೆ ಸಂಬಂಧಿಸಿ ಮಾಲಕರು ಮತ್ತು ಅಧಿಕಾರಿಗಳು ಲಂಡನ್‌ನಲ್ಲಿ ಈ ವಾರ ಸಭೆ ನಡೆಸಿ 2020ರ ಐಪಿಎಲ್‌ನಲ್ಲಿ ಹೊಸ ಫ್ರಾಂಚೈಸಿಗಳನ್ನು ಪರಿಚಯಿಸುವ ಬಗ್ಗೆ ಮತ್ತು ಅದರಿಂದಾಗುವ ಲಾಭಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಪ್ರಾಸ್ತಾಪಕ್ಕೆ ಎಲ್ಲೆಡೆ ಒಪ್ಪಿಗೆ ಲಭಿಸಿದರೆ 2020 ಅಥವಾ 2021ರ ಆವೃತ್ತಿಯಲ್ಲಿ 10 ತಂಡಗಳು ಕಣಕ್ಕಿಳಿಯುವ ಸಾಧ್ಯತೆಗಳಿವೆ.

Story first published: Sunday, July 14, 2019, 18:15 [IST]
Other articles published on Jul 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X