ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಈ ವರ್ಷವೇ ನಡೆಯುವ ಬಗ್ಗೆ ಆಸಿಸ್ ಕ್ರಿಕೆಟಿಗ ಭರವಸೆ

Ipl Great Way For Cricket To Return After Coronavirus-forced Break-pat Cummins

ಕೊರೊನಾ ವೈರಸ್ ಕಾರಣದಿಂದಾಗಿ ಐಪಿಎಲ್ ಬಗೆಗಿನ ಗೊಂದಲ ಇನ್ನೂ ಮುಂದುವರಿದಿದೆ. ಆಂತರಿಕವಾಗಿ ಐಪಿಎಲ್ ನಡೆಯುವ ಬಗ್ಗೆ ಸಾಕಷ್ಟು ಬೆಳವಣಿಗೆಗಳು ನಡಯುತ್ತಿವೆ ಎಂಬುದು ಮೂಲಗಳು ತಿಳಿಸುತ್ತಿದ್ದರೂ ಯಾವುದೂ ಅಧಿಕೃತವಾಗಿಲ್ಲ. ಈ ಮಧ್ಯೆ ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಐಪಿಎಲ್ ಈ ವರ್ಷ ನಡೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಡಿಸಿದ್ದಾರೆ.

ಸದ್ಯ ನಿಂತಿರುವ ಕ್ರಿಕೆಟ್‌ ಮತ್ತೆ ಆರಂಭವಾಗಲು ಐಪಿಎಲ್ ಹೆಬ್ಬಾಗಿಲಾಗಲಿದೆ ಎಂದು ಹೇಳಿರುವ ಪ್ಯಾಟ್ ಕಮ್ಮಿನ್ಸ್, ಈ ಮೆಗಾ ಟೂರ್ನಿ ಟಿ20 ವಿಶ್ವಕಪ್‌ನ ಸಿದ್ಧತೆಗೂ ಸಹಾಯಕವಾಗಲಿದೆ ಎಂದು ಪ್ಯಾಟ್ ಕಮ್ಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ನನ್ನ ಅಚ್ಚುಮೆಚ್ಚಿನ ಆಟಗಾರ: ಪ್ರಿಯಂ ಗರ್ಗ್ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ನನ್ನ ಅಚ್ಚುಮೆಚ್ಚಿನ ಆಟಗಾರ: ಪ್ರಿಯಂ ಗರ್ಗ್

ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್‌ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದರು. ಕೊಲ್ಕತ್ತಾ ನೈಟ್‌ ರೈಡರ್ಸ್ ಐಪಿಎಲ್ ತಂಡ ಪ್ಯಾಟ್ ಕಮ್ಮಿನ್ಸ್ ಅವರನ್ನು 15.5 ಕೋಟಿ ನೀಡಿ ಖರೀದಿಸಿತ್ತು. ಕೊಲ್ಕತ್ತಾ ತಂಡದ ಮ್ಯಾನೇಜ್‌ಮೆಂಟ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಈ ವರ್ಷ ಐಪಿಎಲ್ ಆಡಲು ಕಾತುರನಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಬೇರೆ ಬೇರೆ ಕಾರಣಗಳಿಗಾಗಿ ನಾನು ಐಪಿಎಲ್‌ನಲ್ಲಿ ಆಡುವುದನ್ನು ಬಯಸುತ್ತೇನೆ ಎಂದು ಕಮ್ಮಿನ್ಸ್ ಹೇಳಿದ್ದಾರೆ. ಕ್ರಿಕೆಟ್ ಮರು ಆರಂಭಕ್ಕೆ ಐಪಿಎಕ್ ಸೂಕ್ತವಾದ ವೇದಿಕೆಯಾಗಿದೆ. ಟಿ20 ಟೂರ್ನಿಯಾಗಿರುವ ಕಾರಣ ದೈಹಿಕವಾಗಿಯೂ ಇದರಿಂದ ತೊಡಕಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಿಮಗೆ ಗೊತ್ತಿಲ್ಲದ ಸಚಿನ್: ಬೌಲಿಂಗ್‌ನಲ್ಲಿ ತೆಂಡೂಲ್ಕರ್ ಮಾಡಿದ 5 ವಿಶೇಷ ದಾಖಲೆಗಳುನಿಮಗೆ ಗೊತ್ತಿಲ್ಲದ ಸಚಿನ್: ಬೌಲಿಂಗ್‌ನಲ್ಲಿ ತೆಂಡೂಲ್ಕರ್ ಮಾಡಿದ 5 ವಿಶೇಷ ದಾಖಲೆಗಳು

ವಿಶ್ವಕಪ್ ಈ ವರ್ಷ ನಡೆಯಲು ಸಾಧ್ಯವಾಗದಿದ್ದರೆ ಮುಂದಿನ ಅಕ್ಟೋಬರ್-ನವೆಂಬರ್‌ನಲ್ಲಿ ಐಪಿಎಲ್ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Story first published: Thursday, May 21, 2020, 13:48 [IST]
Other articles published on May 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X