ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿಯ ಐಪಿಎಲ್‌ನಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಗಳಿವು

IPL in time of Coronavirus: No fans, 4 tests in two weeks for players

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಹೊತ್ತಿನಲ್ಲಿ ನಗದು ಶ್ರೀಮಂತ ಟೂರ್ನಿ ಆರಂಭವಾಗುವುದರಲ್ಲಿದೆ. ಐಪಿಎಲ್ ಎಂದಲ್ಲ; ಇಡೀ ಜಗತ್ತಿನ ಜನಜೀವನವೇ ಕೊರೊನಾದಿಂದಾಗಿ ಬದಲಾಗಿದೆ. ಆದರೆ ಈ ಕೋವಿಡ್-19 ಭೀತಿಯ ನಡುವೆಯೇ 13ನೇ ಆವೃತ್ತಿಯ ಐಪಿಎಲ್‌ಗೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಕ್ಷಣಗಣನೆ ಶುರುವಾಗಿದೆ. ಈ ಬಾರಿ ಐಪಿಎಲ್‌ನಲ್ಲಿ ಬಹಳಷ್ಟು ಬದಲಾವಣೆಗಳು ಕಾಣಸಿಗಲಿವೆ.

'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ

ಮಾರ್ಚ್ 29ರಿಂದಲೇ ಐಪಿಎಲ್ ಆರಂಭವಾಗುವುದರಲ್ಲಿತ್ತು. ಆದರೆ ಬಹು ನಿರೀಕ್ಷಿಯ ಟೂರ್ನಿಗೆ ಕೊರೊನಾವೈರಸ್ ಅಡ್ಡಗಾಲು ಹಾಕಿತ್ತು. ಹೀಗಾಗಿ ಟೂರ್ನಿಯನ್ನು ಮುಂದೂಡಲಾಗಿತ್ತು. ಈಗ ಸೆಪ್ಟೆಂಬರ್-ನವೆಂಬರ್‌ನಲ್ಲಿ ಟೂರ್ನಿ ನಡೆಸಲು ಬಿಸಿಸಿಐ ತಯಾರಿ ನಡೆಸುತ್ತಿದೆ.

ಮನಮುಟ್ಟುವ ಹಾಗೆ ಸ್ಟುವರ್ಟ್ ಬ್ರಾಡ್‌ಗೆ ಸಂದೇಶ ಬರೆದ ಯುವರಾಜ್ ಸಿಂಗ್!ಮನಮುಟ್ಟುವ ಹಾಗೆ ಸ್ಟುವರ್ಟ್ ಬ್ರಾಡ್‌ಗೆ ಸಂದೇಶ ಬರೆದ ಯುವರಾಜ್ ಸಿಂಗ್!

ಕೊರೊನಾ ಭೀತಿಯ ನಡುವೆಯೇ ಆರಂಭವಾಗಲಿರುವ 2020ರ ಐಪಿಎಲ್ ವೇಳೆ ಕಾಣ ಸಿಗಲಿರುವ ಪ್ರಮುಖ ಬದಲಾವಣೆಗಳು ಇಲ್ಲಿವೆ

ಜೈವಿಕ ಸುರಕ್ಷಾ ಪರದೆ

ಜೈವಿಕ ಸುರಕ್ಷಾ ಪರದೆ

ಐಪಿಎಲ್ ಅನ್ನು ಆಯೋಜಿಸಲು ಒಪ್ಪಿಕೊಂಡಿರುವ ಯುಎಇ, ಭಾರತದಿಂದ ಯುಎಇಗೆ ಐಪಿಎಲ್ ಸ್ಥಳಾಂತರಿಸುವ ಕುರಿತು, ಭಾರತ ಸರ್ಕಾರದಿಂದ ಅನುಮತಿಗಾಗಿ ಕಾಯುತ್ತಿದೆ. 'ಆಟಗಾರರು, ಸಿಬ್ಬಂದಿಗಳು ಜೈವಿಕ ಸುರಕ್ಷಾ ತಾಣದೊಳಗೆ (ಬಯೋ ಬಬಲ್) ಇರಲಿದ್ದಾರೆ. ಒಮ್ಮೆ ಟೂರ್ನಿ ಶುರುವಾದ ಬಳಿಕ ಅಲ್ಲಿಂದ ಒಬ್ಬರೂ ಹೊರ ಬರುವಂತಿಲ್ಲ, ಯಾರೂ ಒಳ ಹೋಗುವಂತಿಲ್ಲ,' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾವೈರಸ್ ಪರೀಕ್ಷೆ

ಕೊರೊನಾವೈರಸ್ ಪರೀಕ್ಷೆ

ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ 13ನೇ ಆವೃತ್ತಿಯ ಐಪಿಎಲ್ ವೀಕ್ಷಕರಿಲ್ಲದ ಖಾಲಿ ಮೈದಾನದಲ್ಲಿ ನಡೆಯಲಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲಿಗೆ ಇಂಥ ಪರಿಸ್ಥಿತಿ ಬಂದೊದಗಿದೆ. ಇನ್ನು ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರಿಗೆ 2 ವಾರದಲ್ಲಿ 4 ಬಾರಿ ಕೊರೊನಾವೈರಸ್ ಪರೀಕ್ಷೆ ನಡೆಯಲಿದೆ.

ಸ್ಟುಡಿಯೋದೊಳಗೆ 6 ಅಡಿ ಅಂತರ

ಸ್ಟುಡಿಯೋದೊಳಗೆ 6 ಅಡಿ ಅಂತರ

ಐಪಿಎಲ್ ನಡೆಯುವಾಗ ಕಾಮೆಂಟೇಟರ್‌ಗಳು ಸ್ಟುಡಿಯೋದೊಳಗೆ 6 ಅಡಿ ಅಂತರ ಕಾಯ್ದುಕೊಳ್ಳಲಿದ್ದಾರೆ. ಡಗ್‌ಔಟ್‌ನಲ್ಲೂ ಕಡಿಮೆ ಜನಸಂದಣಿ ಇರಲಿದೆ. ಅಷ್ಟೇ ಅಲ್ಲ ಡ್ರೆಸ್ಸಿಂಗ್ ರೂಮ್‌ನಲ್ಲೂ 15 ಜನಕ್ಕಿಂತ ಹೆಚ್ಚು ಆಟಗಾರರು ಒಂದೇ ಹೊತ್ತಿನಲ್ಲಿ ಇರುವಂತಿಲ್ಲ. ಬಹುಮಾನ ವಿತರಣೆ ವೇಳೆಯೂ ಆಟಗಾರರಿಂದ ಆಟಗಾರರಿಗೆ ಅಂತರ ಕಾಯ್ದುಕೊಳ್ಳಲಾಗುತ್ತದೆ.

ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ

ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ

ಐಪಿಎಲ್ ವೇಳೆ ಪಾಲಿಸಬೇಕಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ರೂಪಿಸಿದೆ. ಇದನ್ನು ಎಲ್ಲಾ ಆಟಗಾರರು, ಬೆಂಬಲ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಪಾಲಿಸಬೇಕಾಗಿದೆ.ಅಂದ್ಹಾಗೆ, ಗಲ್ಫ್‌ ನ್ಯೂಸ್ ಪ್ರಕಾರ ಯುಎಇಯಲ್ಲಿ ಸುಮಾರು 59,921 ಕೊರೊನಾ ಕೇಸ್‌ಗಳಿವೆ. 53,202 ಮಂದಿ ಸುಧಾರಿಸಿದ್ದಾಗಿ ದಾಖಲಾಗಿದೆ.

Story first published: Thursday, July 30, 2020, 13:48 [IST]
Other articles published on Jul 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X