ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಇತಿಹಾಸದ "ಚೂಸಿ" ಭಾರತೀಯ ಬೌಲರ್‌ಗಳು ಇವರು!

Ipl: Indian Bowlers With the Most Economical Spells

ಟಿ20 ಕ್ರಿಕೆಟ್ ಯಾವಾಗಲೂ ಬ್ಯಾಟ್ಸ್‌ಮನ್‌ಗಳ ಆಟ ಎಂಬ ಮಾತಿದೆ. ಬೌಲರ್‌ಗಳು ಇಲ್ಲಿ ದಂಡನೆಗೆ ಒಳಗಾಗಬೇಕಾಗುತ್ತದೆ ಎಂಬ ನಂಬಿಕೆಯೂ ಇದೆ. ಅದಕ್ಕೆ ಕಾರಣ ಈ ಆಟದಲ್ಲಿನ ನಿಯಮಗಳು. ಬೌಲರ್‌ಗಳಿಗಿಂತ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಹೆಚ್ಚು ಅನುಕೂಲಕರವಾಗಿದೆ ಎಂಬುದು ಕೂಡ ಒಪ್ಪಿಕೊಳ್ಳಬೇಕಾದ ಸತ್ಯ.

ಹಾಗಿದ್ದರೂ ಇದು ಪ್ರತಿ ಪಂದ್ಯಗಳೂ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸ್ವರ್ಗದಂತಿಲ್ಲ ಎಂಬುದು ಕೂಡ ಅಷ್ಟೇ ನಿಜ. ಅದೆಷ್ಟೋ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗಿಂತಲೂ ಬೌಲರ್‌ಗಳೇ ಮಿಂಚಿದ್ದಾರೆ. ಮ್ಯಾಚ್‌ವಿನ್ನರ್‌ಗಳು ಎನಿಸಿದ್ದಾರೆ. ಅದರಲ್ಲೂ ಹೊಡಿಬಡಿ ಆಟಗಾರರನ್ನು ಸಂಪೂರ್ಣ ಕಟ್ಟಿ ಹಾಕಿದ ಸಾಕಷ್ಟು ದೃಷ್ಟಾಂತಗಳಿವೆ.

ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!

ಐಪಿಎಲ್ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾಗಿ ಅತಿ ಕಡಿಮೆ ರನ್ ನೀಡಿ ಎಕಾನಮಿ ಸ್ಪೆಲ್ ಮಾಡಿದ ಭಾರತೀಯ ಆಟಗಾರರನ್ನು ಯಾರು ಎಂಬುದನ್ನು ಈ ವರದಿಯಲ್ಲಿ ನೋಡೋಣ..

ಪ್ರವೀಣ್ ಕುಮಾರ್: 4-0-8-0

ಪ್ರವೀಣ್ ಕುಮಾರ್: 4-0-8-0

ಎಕಾನಮಿ ವಿಚಾರದಲ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮೂವರು ಭಾರತೀಯ ಬೌಲರ್‌ಗಳು ಇದ್ದಾರೆ. ಅದರಲ್ಲಿ ಒಬ್ಬರು ಟೀಮ್ ಇಂಡಿಯಾದ ಮಾಜಿ ಆಟಗಾರ ಪ್ರವೀಣ್ ಕುಮಾರ್. ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಿದ ಪ್ರವೀಣ್ ಕಿಂಗ್ಸ್‌ ಇಲವೆನ್ ಪಂಜಾಬ್ ತಂಡದ ಪರವಾಗಿ 2012ರಲ್ಲಿ ಅತ್ಯಂತ ಎಕಾನಮಿ ಬೌಲಿಂಗ್ ಮಾಡಿ ಗಮನಸೆಳೆದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ಗಳನ್ನು ಎಸೆತ ಪ್ರವೀಣ್ ಕುಮಾರ್ ಕೇವಲ 8 ರನ್ ಮಾತ್ರವೇ ನೀಡಿದ್ದರು. ಆದರೆ ಇದರಲ್ಲಿ ಒಂದೂ ವಿಕೆಟ್ ಪಡೆದಿರಲಿಲ್ಲ.

ಕರ್ಣ್ ಶರ್ಮಾ

ಕರ್ಣ್ ಶರ್ಮಾ

ಐಪಿಎಲ್‌ನಲ್ಲಿ ಮತ್ತೊಂದು ಎಕಾನಮಿ ಸ್ಪೆಲ್ ಮಾಡಿದ ಆಟಗಾರ ರೈಲ್ವೇಸ್‌ನ ಕ್ರಿಕೆಟಿಗ ಕರ್ಣ್ ಶರ್ಮಾ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಂಚಿದ ಕರ್ಣ್ ಶರ್ಮಾ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ ಪರವಾಗಿ ಈ ದಾಖಲೆಯನ್ನು ಮಾಡಿದ್ದಾರೆ. 2013ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೂಪರ್ ಸ್ಪೆಲ್ ಎಸೆದಿದ್ದರು ಈ ಲೆಗ್‌ ಸ್ಪಿನ್ನರ್. 4 ಓವರ್‌ಗಳನ್ನು ಎಸೆದಿದ್ದ ಕರ್ಣ್ ಶರ್ಮಾ ಒಂದು ಮೇಡನ್ ಓವರ್ ಎಸೆದು 8 ರನ್ ನೀಡಿದ್ದರು. ಈ ಮೂಲಕ ಪ್ರವೀಣ್ ಕುಮಾರ್ ಜೊತೆಗೆ ನಾಲ್ಕನೇ ಸ್ಥಾನವನ್ನು ಕರ್ಣ್ ಶರ್ಮಾ ಹಂಚಿಕೊಂಡಿದ್ದಾರೆ.

ಅಮಿತ್ ಮಿಶ್ರಾ

ಅಮಿತ್ ಮಿಶ್ರಾ

ನಾಲ್ಕನೇ ಸ್ಥಾನದಲ್ಲಿ ಮೂರು ಬೌಲರ್‌ಗಳಿದ್ದಾರೆ. ಅದರಲ್ಲಿ ಮತ್ತೋರ್ವ ಸ್ಪಿನ್ನರ್ ಅಮಿತ್ ಮಿಶ್ರಾ. ಮಿಶ್ರಾ ಕೂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಈ ದಾಖಲೆಯನ್ನು ಮಾಡಿದ್ದಾರೆ. 2013ರಲ್ಲಿ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ಈ ಸಾಧನೆಯನ್ನು ಮಾಡಿದ್ದಾರೆ. ಈ ಪಂದ್ಯದಲ್ಲಿ ಅಮಿತ್ ಮಿಶ್ರಾ 4 ಓವರ್‌ಗಳ ತಮ್ಮ ಸ್ಪೆಲ್‌ನಲ್ಲಿ ಮಿಶ್ರಾ 8 ರನ್‌ ನೀಡಿ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ರಾಹುಲ್ ಶರ್ಮಾ

ರಾಹುಲ್ ಶರ್ಮಾ

ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆಟಗಾರ ಅಂದರೆ ಅದು ರಾಹುಲ್ ಶರ್ಮಾ. ಪುಣೆ ವಾರಿಯರ್ಸ್ ತಂಡದ ಸದಸ್ಯನಾಗಿ ರಾಹುಲ್ ಶರ್ಮಾ ಈ ಸಾಧನೆಯನ್ನು ಮಾಡಿದ್ದಾರೆ. 2011ರ ಐಪಿಎಲ್‌ನಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ರಾಹುಲ್ ಶರ್ಮಾ ನಾಲ್ಕು ಓವರ್‌ಗಳ ತಮ್ಮ ಸ್ಪೆಲ್‌ನಲ್ಲಿ ಕೇವಲ 7 ರನ್ ನೀಡಿ ಎರಡು ವಿಕೆಟ್ ಕಿತ್ತಿದ್ದರು. 1.7ರ ಎಕಾನಮಿಯಲ್ಲಿ ರನ್ ನೀಡಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ ರಾಹುಲ್ ಶರ್ಮಾ.

ಯುಜುವೇಂದ್ರ ಚಾಹಲ್

ಯುಜುವೇಂದ್ರ ಚಾಹಲ್

ಐಪಿಎಲ್‌ನ ಅತ್ಯಂತ ಎಕಾನಮಿ ಬೌಲರ್‌ಗಳ ಪಟ್ಟಿಯಲ್ಲಿ ಯುಜುವೇಂದ್ರ ಚಾಹಲ್ ಜಂಟಿಯಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚಾಹಲ್ ಅವರ ಈ ಅತ್ಯುತ್ತಮ ಸ್ಪೆಲ್ ಮೂಡಿಬಂದಿದದು ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ. ಆರ್‌ಸಿಬಿ ತಂಡದ ಪ್ರಮುಖ ಬೌಲರ್ ಆದ ಚಾಹಲ್ ಬಲಿಷ್ಠ ಚೆನ್ನೈ ತಂಡದ ವಿರುದ್ಧ ಈ ಸಾಧನೆಯನ್ನು ಮಾಡಿದ್ದಾರೆ. ನಾಲ್ಕು ಓವರ್‌ಗಳಲ್ಲಿ ಚಾಹಲ್ ಒಂದು ಮೇಡನ್ ಸಹಿತ ಆರು ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಭಾರತೀಯ ಬೌಲರ್‌ಗಳ ಪೈಕಿ ಅತ್ಯಂತ ಎಕಾನಮಿ ಸ್ಪೆಲ್ ಇದಾಗಿದೆ. ಇದರಲ್ಲಿ ಚಾಹಲ್ ಅವರ ಎಕಾನಮಿ ರೇಟ್ 1.50 ಮಾತ್ರ!

ಆಶಿಶ್ ನೆಹ್ರಾ

ಆಶಿಶ್ ನೆಹ್ರಾ

ಮೊದಲ ಸ್ಥಾನದಲ್ಲಿರುವ ಮತ್ತೋರ್ವ ಭಾರತೀಯ ಬೌಲರ್ ಟೀಮ್ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ. ಆಶಿಶ್ ನೆಹ್ರಾ 2009ರ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರವಾಗಿ ಈ ಸಾಧನೆಯನ್ನು ಮಾಡಿದ್ದಾರೆ. ಕಿಂಗ್ಸ್‌ ಇಲವೆನ್ ಪಂಜಾಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ನೆಹ್ರಾ 4 ಓವರ್‌ಗಳಲ್ಲಿ 1 ಮೇಡನ್ ಓವರ್‌ ಸಹಿತ 6 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ. 1.5ರ ಎಕಾನಮಿಯಲ್ಲಿ ನೆಹ್ರಾ ಬೌಲಿಂಗ್ ಮಾಡಿ ಎಕಾನಮಿ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಜಂಟಿಯಾಗಿ ಅಲಂಕರಿಸಿದ್ದಾರೆ.

Story first published: Monday, May 18, 2020, 15:50 [IST]
Other articles published on May 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X