ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ಅನ್ನು ಎಲ್ಲಾ ಟಿ20 ಲೀಗ್‌ಗಳ ಶಿಖರ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ

Ipl Is Pinnacle Of All T20 Tournaments, Says Mitchell Santner

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಐಪಿಎಲ್ ಅನ್ನು ಎಲ್ಲಾ ಟಿ20 ಕ್ರಿಕೆಟ್ ಲೀಗ್‌ಗಳ ಕಿರೀಟ ಎಂದು ವ್ಯಾಖ್ಯಾನಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ಜೊತೆಗಿನ ತಮ್ಮ ಹಾದಿಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ಸ್ಯಾಂಟ್ನರ್ ಹೇಳಿದ್ದಾರೆ.

2018ರ ಐಪಿಎಲ್ ಆವೃತ್ತಿಯಲ್ಲಿ ಕಿವೀಸ್ ತಂಡದ ಈ ಸ್ಪಿನ್ನರ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹರಾಜಿನಲ್ಲಿ ಖರೀದಿಸಿತ್ತು. ಆದರೆ ಗಾಯಗೊಂಡಿದ್ದರಿಂದ ಸ್ಯಾಂಟ್ನರ್ ಆ ಟೂರ್ನಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಆದರೆ 2019ರಲ್ಲಿ ಕೆಲ ಪಂದ್ಯಗಳಲ್ಲಿ ಸ್ಯಾಂಟ್ನರ್ ಪ್ರತಿನಿಧಿಸಿದ್ದರು.

ಐಪಿಎಲ್ 2020: ತಾತ್ಕಾಲಿಕ ವೇಳಾಪಟ್ಟಿಗೆ 'ಸ್ಟಾರ್ ಇಂಡಿಯಾ' ಅಸಮಾದಾನಐಪಿಎಲ್ 2020: ತಾತ್ಕಾಲಿಕ ವೇಳಾಪಟ್ಟಿಗೆ 'ಸ್ಟಾರ್ ಇಂಡಿಯಾ' ಅಸಮಾದಾನ

"ನನಗನ್ನಿಸುತ್ತೆ ಐಪಿಎಲ್ ಎಲ್ಲಾ ಟಿ20 ಕ್ರಿಕೆಟ್ ಟೂರ್ನಿಗಳ ಶಿಖರದಂತಿದೆ. 2008ರಲ್ಲಿ ಚೆನ್ನೈ ತಂಡಕ್ಕೆ ಆಯ್ಕೆಯಾಗಿದ್ದಾಗ ನಾನು ಬಹಳಾ ಉತ್ಸುಕನಾಗಿದ್ದೆ. ಚೆನ್ನೈ ತಂಡದಲ್ಲಿ ವಿಶ್ವದರ್ಜೆಯ ಆಟಗಾರರು ಸ್ಪಿನ್ನರ್‌ಗಳು ಇದ್ದಾರೆ. ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್, ರವೀಂದ್ರ ಜಡೇಡಾ ಅವರಂತಾ ಆಟಗಾರರ ಜೊತೆಗೆ ಮಾತುಕತೆ ನಡೆಸುವುದು ಹಾಗೂ ಆಡುವುದು ಅತ್ಯುತ್ತಮ ಅನುಭವ ಎಂದಿದ್ದಾರೆ.

2018ರಲ್ಲಿ ನಾನು ಗಾಯಗೊಂಡಿದ್ದಾಗ ತುಂಬಾ ಅಸಮಾದಾನವಾಗಿತ್ತು. ಆದರೆ ಕಳೆದ ವರ್ಷ ನನಗೆ ಆಡುವ ಅವಕಾಶ ದೊರೆತಿತ್ತು. ಅದೊಂದು ಮರೆಯಲಾಗದ ಅನುಭವವನ್ನು ನೀಡಿದೆ. ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಕ್ರಿಕೆಟ್ ಕಾಣಬಹುದು ಎಂದಿದ್ದಾರೆ.

ಸಿಡ್ನಿ ಟೆಸ್ಟ್ 2008: ಆಸಿಸ್ ವಿರುದ್ಧ ಭಾರತದ ಸೋಲಿಗೆ ಕಾರಣವಾದ ತಪ್ಪು ತೀರ್ಪಿಗೆ ಸ್ಟೀವ್ ಬಕ್ನರ್ ಮರುಕ!ಸಿಡ್ನಿ ಟೆಸ್ಟ್ 2008: ಆಸಿಸ್ ವಿರುದ್ಧ ಭಾರತದ ಸೋಲಿಗೆ ಕಾರಣವಾದ ತಪ್ಪು ತೀರ್ಪಿಗೆ ಸ್ಟೀವ್ ಬಕ್ನರ್ ಮರುಕ!

ನ್ಯೂಜಿಲೆಂಡ್ ಪರವಾಗಿ ಸ್ಯಾಂಟ್ನರ್ 22 ಟೆಸ್ಟ್, 72 ಏಕದಿನ ಹಾಗೂ 44 ಟಿ20 ಪಂದ್ಯಗಳನ್ನಾಡಿದ್ದಾರೆ. ಎಲ್ಲಾ ಮಾದರಿಗಳಲ್ಲೂ ಒಟ್ಟಾರೆ 162 ವಿಕೆಟ್ ಪಡೆದಿದ್ದಾರೆ. ಈ ವರ್ಷ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

Story first published: Monday, July 20, 2020, 16:39 [IST]
Other articles published on Jul 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X