ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ರಸೆಲ್ ಆರ್ಭಟ, ಸನ್ ರೈಸರ್ಸ್ ಹೆಡೆಮುರಿ ಕಟ್ಟಿದ ನೈಟ್ ರೈಡರ್ಸ್!

IPL: Kolkata vs Hyderabad, 2nd Match - Live Cricket Score

ಕೋಲ್ಕತ್ತಾ, ಮಾರ್ಚ್ 24: ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಭಾನುವಾರ (ಮಾರ್ಚ್ 24) ನಡೆದ ಐಪಿಎಲ್ 12ನೇ ಆವೃತ್ತಿಯ ದ್ವಿತೀಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್ ಗೆಲುವನ್ನಾಚರಿಸಿತು. ಆ್ಯಂಡ್ರೆ ರಸೆಲ್ ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಕೋಲ್ಕತ್ತ ರೋಚಕ ಗೆಲುವು ಪಡೆಯಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45758

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್‌ ಪರ ನಿಷೇಧಕ್ಕೀಡಾಗಿದ್ದ ಆಸೀಸ್ ದಾಂಡಿಗ ಡೇವಿಡ್ ವಾರ್ನರ್ ಭರ್ಜರಿ ರನ್ ಸೇರಿಸಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ 85 (53 ಎಸೆತ), ಜಾನಿ ಬೇರ್ಸ್ಟೊವ್ 39, ವಿಜಯ್ ಶಂಕರ್ ಅಜೇಯ 40 ರನ್‌ನೊಂದಿಗೆ ಹೈದರಾಬಾದ್ 20 ಓವರ್‌ಗೆ 3 ವಿಕೆಟ್ ಕಳೆದು 181 ರನ್ ಪೇರಿಸಿತು.

ಐಪಿಎಲ್: ಚೆನ್ನೈ ವಿರುದ್ಧ ಬೆಂಗಳೂರು ಸೋತಿದ್ದಕ್ಕೆ ಅಸಲಿ ಕಾರಣ ಇದು!ಐಪಿಎಲ್: ಚೆನ್ನೈ ವಿರುದ್ಧ ಬೆಂಗಳೂರು ಸೋತಿದ್ದಕ್ಕೆ ಅಸಲಿ ಕಾರಣ ಇದು!

ಹೈದರಾಬಾದ್ ನೀಡಿದ 182 ರನ್ ಗುರಿ ಬೆನ್ನಟ್ಟಿದ ಕೋಲ್ಕತ್ತಾ ಎಚ್ಚರಿಕೆ ಆಟ ಪ್ರದರ್ಶಿಸಿತು. ನಿತೀಶ್ ರಾಣ 68, ಕನ್ನಡಿಗ ರಾಬಿನ್ ಉತ್ತಪ್ಪ 35, ಕ್ರಿಸ್ ಲಿನ್ 7 ರನ್‌ನೊಂದಿಗೆ ನಿರ್ಗಮಿಸಿದ್ದರು. ಆರಂಭದಲ್ಲಿ ಕೋಲ್ಕತ್ತಾ ಕೊಂಚ ನಿಧಾನಗತಿಯ ಆಟ ಪ್ರದರ್ಶಿಸಿದ್ದರಿಂದ ಪಂದ್ಯದ ಕೊನೆಗೆ ಆಟ ರೋಚಕ ಹಂತಕ್ಕೆ ತಿರುಗಿತ್ತು.

ಐಪಿಎಲ್‌ನಲ್ಲಿ 5,000 ರನ್ ಬಾರಿಸಿದ ಮೊದಲ ಬ್ಯಾಟ್ಸ್ಮನ್‌ ಸುರೇಶ್ ರೈನಾ!ಐಪಿಎಲ್‌ನಲ್ಲಿ 5,000 ರನ್ ಬಾರಿಸಿದ ಮೊದಲ ಬ್ಯಾಟ್ಸ್ಮನ್‌ ಸುರೇಶ್ ರೈನಾ!

ಆದರೆ ಕೋಲ್ಕತ್ತಾ ಗೆಲುವಿನ ಹೊರೆ ಹೊತ್ತುಕೊಂಡ ರಸೆಲ್ ಬ್ಯಾಟ್ ಬೀಸಲಾರಂಭಿಸಿರು. ಕೇವಲ 19 ಎಸೆತಗಳಿಗೆ ರಸೆಲ್ ಅಜೇಯ 49 ರನ್ ಚಚ್ಚಿದರು. ಜೊತೆಗೆ ಶುಭ್‌ಮಾನ್‌ ಗಿಲ್ ಅಜೇಯ 18 ರನ್‌ನೊಂದಿಗೆ ತಂಡವನ್ನು ಗೆಲುವಿನ ಗೆರೆ ದಾಟಿಸಿದರು. ಕೋಲ್ಕತ್ತಾ 19.4 ಓವರ್‌ಗೆ 4 ವಿಕೆಟ್ ಕಳೆದು 183 ರನ್ ಬಾರಿಸಿತು.

ಕೋಲ್ಕತ್ತಾ ತಂಡ: ಕ್ರಿಸ್ ಲಿನ್, ಸುನಿಲ್ ನರೇನ್, ರಾಬಿನ್ ಉತ್ತಪ್ಪ, ಶುಭ್‌ಮಾನ್ ಗಿಲ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿ / ಸಿ), ಆಂಡ್ರೆ ರಸ್ಸೆಲ್, ಪಿಯುಶ್ ಚಾವ್ಲಾ, ಕುಲದೀಪ್ ಯಾದವ್, ಲಾಕೀ ಫರ್ಗುಸನ್, ಪ್ರಶಿಶ್ ಕೃಷ್ಣ.

ಹೈದರಾಬಾದ್ ತಂಡ: ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೊ (ವಿಕೆ), ಮನೀಶ್ ಪಾಂಡೆ, ದೀಪಕ್ ಹೂಡಾ, ಶಕೀಬ್ ಅಲ್ ಹಸನ್, ವಿಜಯ್ ಶಂಕರ್, ಯೂಸುಫ್ ಪಠಾಣ್, ರಶೀದ್ ಖಾನ್, ಭುವನೇಶ್ವರ್ ಕುಮಾರ್ (ಸಿ), ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್.

Story first published: Sunday, March 24, 2019, 20:23 [IST]
Other articles published on Mar 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X