ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಈ ಬಾರಿಯ ಐಪಿಎಲ್‌ನಲ್ಲಿ 'ವರ್ಕ್ ಫ್ರಮ್ ಹೋಮ್'!?

Ipl Likely To Introduce Commentary From Home For Upcoming Season

ವಿಶ್ವಕಪ್ ಮುಂದೂಡುವ ನಿರ್ಧಾರವನ್ನು ಪ್ರಕಟಿಸಿದಂತೆಯೇ ಬಿಸಿಸಿಐ ಕಡೆಯಿಂದ ಐಪಿಎಲ್ ಚಟುವಟಿಕೆಗಳು ಚುರುಕಾಗಿದೆ. ಇನ್ನು ಐಪಿಎಲ್ ಪ್ರಸಾರಕರಾಗಿರುವ ಸ್ಟಾರ್ ಇಂಡಿಯಾ ಕೂಡ ಈ ಮೆಗಾ ಟೂರ್ನಿಗೆ ಸಜ್ಜಾಗುತ್ತಿದೆ. ಈ ಮಧ್ಯೆ ಈ ಬಾರಿಯ ಪ್ರಸಾರದಲ್ಲಿ ವರ್ಕ್ ಫ್ರಮ್ ಹೋಮ್ ಅಳವಡಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹೌದು ಪೂರ್ಣ ಪ್ರಮಾಣದಲ್ಲಿ ಇದು ಅಸಾಧ್ಯವೇ ಆಗಿರುವುದರಿಂದ ಕಾಮೆಂಟರಿ ವಿಭಾಗವನ್ನು ವರ್ಕ್ ಫ್ರಮ್ ಹೋಮ್ ಮಾಡುವ ಚಿಂತನೆಗಳು ನಡೆಯುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಒಂದು ಹಂತದ ಪೂರ್ವಪರೀಕ್ಷೆಯನ್ನು ಕೂಡ ನಡೆಸಲಾಗಿದ್ದು ಇದು ಯಶಸ್ವಿಯಾಗಿದೆ.

ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!

ಕೆಲ ದಿನಗಳ ಹಿಂದೆಯಷ್ಟೇ ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ಕ್ರೀಡಾಂಗಣದಲ್ಲಿ ಮೂರು ತಂಡಗಳ ಕ್ರಿಕೆಟ್ ಪಂದ್ಯಾಟವನ್ನು ನಡೆಸಲಾಗಿತ್ತು. ಪ್ರದರ್ಶನ ಪಂದ್ಯವಾಗಿದ್ದು ಇದರ ಪ್ರಸಾರದಲ್ಲಿ ಸ್ಟಾರ್ ಸ್ಪೋರ್ಟ್ ಇದೇ ಮೊದಲ ಬಾರಿಗೆ ವರ್ಕ್ ಫ್ರಮ್ ಹೋಮ್ ಅಳವಡಿಸಿಕೊಂಡು ಕಾಮೆಂಟರಿ ನಡೆಸಲಾಗಿತ್ತು.

ಬರೋಡಾದ ತನ್ನ ನಿವಾಸದಿಂದ ಇರ್ಫಾನ್ ಪಠಾಣ್, ಕೊಲ್ಕತ್ತಾ ದಿಂದ ದೀಪ್‌ದಾಸ್ ಗುಪ್ತಾ, ಮುಂಬೈನ ನಿವಾಸಿದಿಂದ ಸಂಜಯ್ ಮಂಜ್ರೇಕರ್ ಕಾಮೆಂಟರಿಯನ್ನು ನಡೆಸಿದ್ದರು. ಈ ವಿಶೇಷ ಪ್ರಯೋಗ ಸಾಧ್ಯವಾಗಿದ್ದಕ್ಕೆ ಇರ್ಫಾನ್ ಪಠಾಣ್ ಇದೊಂದು ಮಾಂತ್ರಿಕತೆ ಎಂದು ಉದ್ಘರಿಸಿದ್ದರು.

ಟೆಸ್ಟ್‌ನಲ್ಲಿ 800 ವಿಕೆಟ್: ಮುತ್ತಯ್ಯ ಮುರಳೀಧರನ್ ವಿಶ್ವದಾಖಲೆಗೆ 10 ವರ್ಷಟೆಸ್ಟ್‌ನಲ್ಲಿ 800 ವಿಕೆಟ್: ಮುತ್ತಯ್ಯ ಮುರಳೀಧರನ್ ವಿಶ್ವದಾಖಲೆಗೆ 10 ವರ್ಷ

ಈ ಪ್ರಯೋಗ ಕೆಲ ಸಣ್ಣಪುಟ್ಟ ಲೋಪಗಳಿದ್ದರೂ ಯಶಸ್ವಿಯಾಗಿತ್ತು. ಹೀಗಾಗಿ ಇದನ್ನು ಮುಂದಿನ ದಿನಗಳಲ್ಲಿ ಸಾಮಾನ್ಯ ರೀತಿಯಲ್ಲೇ ಅಳವಡಿಸಿಕೊಳ್ಳುವ ಚಿಂತನೆಯನ್ನಿ ಸ್ಟಾರ್ ಸ್ಪೋರ್ಟ್ಸ್ ನಡೆಸುತ್ತಿದೆ. ಮುಖ್ಯವಾಗಿ ಹಿಂದಿ ಹಾಗೂ ಇಂಗ್ಲೀಷ್ ಹೊರತುಪಡಿಸಿ ಸ್ಥಳೀಯ ಭಾಷೆಗಳಾದ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳ ಕಾಮೆಂಟರಿಯನ್ನು ವರ್ಕ್ ಫ್ರಮ್ ಹೋಮ್ ಮಾದರಿಯಲ್ಲಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

Story first published: Thursday, July 23, 2020, 10:54 [IST]
Other articles published on Jul 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X