ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ರಾಜೀನಾಮೆ ನೀಡಲಿ: ಆದಿತ್ಯ ವರ್ಮಾ

IPL petitioner Aditya Verma leads BCCI chorus for Rahul Johri’s resignation

ನವದೆಹಲಿ, ಅಕ್ಟೋಬರ್ 15: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಸಿಇಒ ರಾಹುಲ್ ಜೋಹ್ರಿ ಅವರು ರಾಜೀನಾಮೆ ನೀಡಬೇಕು ಎನ್ನುವ ಕೂಗಿಗೆ ಐಪಿಎಲ್ ಅರ್ಜಿದಾರ ಆದಿತ್ಯ ವರ್ಮಾ ಅವರೂ ದನಿ ಸೇರಿಸಿದ್ದಾರೆ. ಜೋಹ್ರಿ ವಿರುದ್ಧ ಶನಿವಾರ (ಅಕ್ಟೋಬರ್ 13) ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. (ಚಿತ್ರ ಕೃಪೆ: ಎಎನ್‌ಐ)

ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೂ ತಟ್ಟಿದ '#ಮೀಟೂ' ಅಭಿಯಾನದ ಬಿಸಿಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೂ ತಟ್ಟಿದ '#ಮೀಟೂ' ಅಭಿಯಾನದ ಬಿಸಿ

ರಾಹುಲ್ ಜೋಹ್ರಿ ವಿರುದ್ಧ ಲೇಖಕಿ ಹರ್ನಿಧ್ ಕೌರ್ ಅವರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಜೋಹ್ರಿ ನಡೆಸಿದ ಲೈಂಗಿಕ ದೌರ್ಜನ್ಯವನ್ನು ಮಹಿಳೆಯೊಬ್ಬರು ವಿವರಿಸಿ ಬರೆದಿದ್ದನ್ನು ಸ್ಕ್ರೀನ್ ಶಾಟ್ ತೆಗೆದಿದ್ದ ಕೌರ್ ತನ್ನ ಟ್ವಿಟರ್ ಖಾತೆಯಲ್ಲಿ ಅದನ್ನು ಹಾಕಿಕೊಂಡಿದ್ದರು. ಈ ವಿಚಾರದ ಕುರಿತು ಸುಪ್ರೀಮ್ ಕೋರ್ಟ್ ನಿಂದ ಆರಿಸಲ್ಪಟ್ಟ ಆಡಳಿತ ಸಮಿತಿ (ಸಿಒಎ) ಒಂದು ವಾರದ ಒಳಗೆ ಸ್ಪಪ್ಟನೆ ನೀಡುವಂತೆ ಜೋಹ್ರಿಗೆ ಸೂಚಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆದಿತ್ಯ, 'ಪ್ರಕರಣ ಕುರಿತು ಪಾರ್ದರ್ಶಕತೆ ಬೇಕು ಎಂದು ನಾನು ಸಿಒಎಗೆ ಹೇಳಿದ್ದೇನೆ. ಸಿಎಒ ಕೂಡ ಅದೇ ನಿಲುವನ್ನು ಹೊಂದಿದೆ. ನನಗನ್ನಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ದೂರು ಕೇಳಿ ಬಂದಾಗಲೇ ಜೋಹ್ರಿ ರಾಜೀನಾಮೆ ನೀಡಬೇಕಿತ್ತು. ಇನ್ನಾದರೂ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ದೇಶದ ಕ್ರಿಕೆಟ್ ಮಂಡಳಿಗೆ ಕೆಟ್ಟ ಹೆಸರು ಬರಲಿದೆ' ಎಂದಿದ್ದಾರೆ.

ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ವಿರುದ್ಧ ಐಸಿಸಿ ಪ್ರಕರಣಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ವಿರುದ್ಧ ಐಸಿಸಿ ಪ್ರಕರಣ

ಸಿಕ್ಕಿರುವ ಮಾಹಿತಿಯ ಪ್ರಕಾರ, ಸಿಒಎಗೆ ಪತ್ರ ಬರೆದಿರುವ ವರ್ಮಾ, ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜೋಹ್ರಿ ರಾಜೀನಾಮೆ ನೀಡುವುದೇ ಸೂಕ್ತ ಎಂದು ಬರೆದಿದ್ದಾರೆ ಎನ್ನಲಾಗಿದೆ.

ಮಹಿಳಾ ಪತ್ರಕರ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಇದೇ ಆರೋಪಕ್ಕೆ ಸಂಬಂಧಿಸಿ ಸಿಂಗಾಪುರ್ ನಲ್ಲಿ ಮುಂದೆ ನಡೆಯಲಿದ್ದ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರ ಸಭೆಯಿಂದ ರಾಹುಲ್ ಜೋಹ್ರಿ ಹೊರಗುಳಿದಿದ್ದಾರೆ.

Story first published: Monday, October 15, 2018, 17:52 [IST]
Other articles published on Oct 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X