ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಳೆಗಾಲದ ಬಳಿಕ ಐಪಿಎಲ್ ನಡೆಸಲು ಸಾಧ್ಯ: ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ

IPL possible after rains says BCCI CEO Rahul Johri

ಮುಂಬೈ, ಮೇ 20: ಕೊರೊನಾವೈರಸ್ ಕಾರಣ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಯೋಜನೆಗಳನ್ನು ಹಿಡಿದಿಟ್ಟುಕೊಳ್ಳಲಾಗಿದೆ ಎಂದು ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಅಧ್ಯಕ್ಷ ರಾಹುಲ್ ಜೋಹ್ರಿ ಹೇಳಿದ್ದಾರೆ.

ಕೆಎಲ್ ರಾಹುಲ್ ಅಲ್ಪಾವಧಿಯ ಪರಿಹಾರ ಎಂದ ಪಾರ್ಥಿವ್ ಪಟೇಲ್ಕೆಎಲ್ ರಾಹುಲ್ ಅಲ್ಪಾವಧಿಯ ಪರಿಹಾರ ಎಂದ ಪಾರ್ಥಿವ್ ಪಟೇಲ್

ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಐಸಿಸಿ ಮುಂದೂಡಲಿದೆಯೋ ಎಂದು ಬಿಸಿಸಿಐ ಎದುರು ನೋಡುತ್ತಿದೆ. ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿ ಮುಂದೂಡಲ್ಪಟ್ಟರೆ ವಿಶ್ವಕಪ್ ವೇಳಾಪಟ್ಟಿಯ ಜಾಗದಲ್ಲಿ ಐಪಿಎಲ್ ನಡೆಸುವ ಆಲೋಚನೆಯಲ್ಲಿ ಬಿಸಿಸಿಐ ಇದೆ.

ಡಬ್ಲ್ಯೂಡಬ್ಲ್ಯೂಇ ಮಾಜಿ ತಾರೆ, ಅಮೆರಿಕಾದ ಶಾಡ್ ಗ್ಯಾಸ್‌ಪಾರ್ಡ್ ನಿಧನಡಬ್ಲ್ಯೂಡಬ್ಲ್ಯೂಇ ಮಾಜಿ ತಾರೆ, ಅಮೆರಿಕಾದ ಶಾಡ್ ಗ್ಯಾಸ್‌ಪಾರ್ಡ್ ನಿಧನ

'ಚುನಾವಣೆಯಲ್ಲಿ ಓಟ್ ಹಾಕಿದವರಿಗಿಂತ ಹೆಚ್ಚಿನ ಜನ ಕಳೆದ ಬಾರಿಯ ನಡೆದ ಐಪಿಎಲ್ ವೀಕ್ಷಿಸಿದ್ದಾರೆ. ಪ್ರಾಯೋಜಕರಿಗೆ, ಕ್ರಿಕೆಟ್ ಒಂದು ನಾಯಕ ಮತ್ತು ಅದು ಮುಂದುವರೆಯಲು ದಾರಿ ಮಾಡಿಕೊಡುತ್ತದೆ. ಕೊರೊನಾದಿಂದಾಗಿರುವ ಹೊಡೆತ ಬೇಗ ಸುಧಾರಿಸಲು ಸಾಧ್ಯವಿಲ್ಲ,' ಎಂದು ರಾಹುಲ್ ಜೋಹ್ರಿ ಹೇಳಿದ್ದಾರೆ.

ನಿಮಗೆ ಗೊತ್ತಿಲ್ಲದ ಸಚಿನ್: ಬೌಲಿಂಗ್‌ನಲ್ಲಿ ತೆಂಡೂಲ್ಕರ್ ಮಾಡಿದ 5 ವಿಶೇಷ ದಾಖಲೆಗಳುನಿಮಗೆ ಗೊತ್ತಿಲ್ಲದ ಸಚಿನ್: ಬೌಲಿಂಗ್‌ನಲ್ಲಿ ತೆಂಡೂಲ್ಕರ್ ಮಾಡಿದ 5 ವಿಶೇಷ ದಾಖಲೆಗಳು

'ವಿಮಾನ ಯಾನಗಳು ಪುನರಾರಂಭಗೊಂಡಾಗ ಬರುವ ಆಟಗಾರರು ಆಡೋದಕ್ಕೆ ಮುನ್ನ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಇದು ವೇಳಾಪಟ್ಟಿಯಲ್ಲಿ ಹೇಗೆ ಪ್ರಭಾವ ಬೀರಲಿದೆ ಎಂದು ನಾವು ನೋಡಬೇಕಾಗುತ್ತದೆ,' ಎಂದು ಜೋಹ್ರಿ ವಿವರಿಸಿದ್ದಾರೆ.

ಒಂದು ತಪ್ಪು ನಿರ್ಧಾರ ಕ್ರಿಕೆಟ್ ಕೆರಿಯರ್‌ಗೆ ಕಂಟಕವಾಯಿತು: ರಾಬಿನ್ ಉತ್ತಪ್ಪಒಂದು ತಪ್ಪು ನಿರ್ಧಾರ ಕ್ರಿಕೆಟ್ ಕೆರಿಯರ್‌ಗೆ ಕಂಟಕವಾಯಿತು: ರಾಬಿನ್ ಉತ್ತಪ್ಪ

ಮಾತು ಮುಂದುವರೆಸಿದ ಜೋಹ್ರಿ, 'ಆಡಲು ಬಂದ ಆಟಗಾರರು ಪ್ರ್ಯಾಕ್ಟೀಸ್ ಕೂಡ ಬದಿಗಿಟ್ಟು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಇಲ್ಲಿ ಬದಲಾವಣೆಗೆ ಸಾಕಷ್ಟು ಸಾಧ್ಯತೆಗಳಿರುತ್ತವೆ. ಆದರೆ ನಮಗಿನ್ನೂ ಆಶಾಭಾವನೆಯಿದೆ. ಮಳೆಗಾಲದ ಬಳಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬ ನಿರೀಕ್ಷೆ ನಮ್ಮದು,' ಎಂದು ಜೋಹ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Thursday, May 21, 2020, 14:53 [IST]
Other articles published on May 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X