ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವ ಕ್ರಿಕೆಟ್‌ನ ಚೊಚ್ಚಲ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್. 2007ರಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಯಶಸ್ವಿಯಾದ ಬೆನ್ನಲ್ಲೇ ಯಾರ ಪರಿಕಲ್ಪನೆಗೂ ಬಾರದ ರೀತಿಯ ಟೂರ್ನಿಯೊಂದನ್ನು ಬಿಸಿಸಿಐ 2008ರಲ್ಲಿ ಆರಂಭಿಸಿತ್ತು. ಅಂದು ಬಿಸಿಸಿಐ ಆರಂಭಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇಂದು ಬೃಹತ್ ಟೂರ್ನಿಯಾಗಿ ಬೆಳೆದು ನಿಂತಿದೆ. ಐಸಿಸಿ ಐಪಿಎಲ್ ಟೂರ್ನಿಗಾಗಿ ವರ್ಷದ ಕ್ಯಾಲೆಂಡರ್‌ನಲ್ಲಿ ವಿಶೇಷ ಸಮಯವನ್ನು ಮೀಸಲಿಡುವಷ್ಟರ ಮಟ್ಟಕ್ಕೆ ಐಪಿಎಲ್ ಯಶಸ್ವಿಯಾಗಿದೆ. ಹಣದ ಹೊಳೆಯೇ ಹರಿಯುವ ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿದೇಶಿ ಆಟಗಾರರು ಭಾಗವಹಿಸಲು ತುದಿಗಾಲಿನಲ್ಲಿ ನಿಂತಿದ್ದು, ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ವಿದೇಶಿ ಕ್ರಿಕೆಟಿಗರಾದ ರಿಕಿ ಪಾಂಟಿಂಗ್, ಕುಮಾರ್ ಸಂಗಕ್ಕಾರ, ಶೇನ್ ವಾರ್ನ್, ಆಡಂ ಗಿಲ್‌ಕ್ರಿಸ್ಟ್ ಹಾಗೂ ರಾಸ್ ಟೇಲರ್ ರೀತಿಯ ಹಲವರು ಈ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿದ್ದ ಉತ್ತಮ ಇತಿಹಾಸವಿದೆ.

ಫೋರ್, ಸಿಕ್ಸರ್‌ಗಳಿಂದ ಅತಿಹೆಚ್ಚು ಟಿ20 ರನ್ ಬಾರಿಸಿದ ಡೇಂಜರಸ್ ಬ್ಯಾಟ್ಸ್‌ಮನ್‌ಗಳಿವರುಫೋರ್, ಸಿಕ್ಸರ್‌ಗಳಿಂದ ಅತಿಹೆಚ್ಚು ಟಿ20 ರನ್ ಬಾರಿಸಿದ ಡೇಂಜರಸ್ ಬ್ಯಾಟ್ಸ್‌ಮನ್‌ಗಳಿವರು

ಹೀಗೆ ತನ್ನದೇ ಆದ ಬೃಹತ್ ಇತಿಹಾಸ ಹಾಗೂ ಒಳ್ಳೆಯ ಅಂಶಗಳನ್ನು ಹೊಂದಿರುವ ಈ ಇಂಡಿಯನ್ ಪ್ರೀಮಿಯರ್ ಲೀಗ್ ವಿವಾದಗಳನ್ನೂ ಸಹ ಹೊಂದಿದೆ. ಹೌದು, ಈ ಫ್ರಾಂಚೈಸಿ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸಿ ಸದ್ಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಆಟಗಾರರ ಪೈಕಿ ಕೆಲ ಆಟಗಾರರು ಆರೋಪ ಮಾಡಿ ತಾವು ಪ್ರತಿನಿಧಿಸಿದ್ದ ಫ್ರಾಂಚೈಸಿಗಳ ವಿರುದ್ಧವಾಗಿ ಹೇಳಿಕೆ ನೀಡಿರುವ ಹಲವು ಉದಾಹರಣೆಗಳಿವೆ. ಈ ಸಾಲಿಗೆ ಇದೀಗ ನ್ಯೂಜಿಲೆಂಡ್‌ನ ಖ್ಯಾತ ಕ್ರಿಕೆಟಿಗ ರಾಸ್ ಟೇಲರ್ ಕೂಡ ಸೇರಿಕೊಂಡಿದ್ದು ತಾವು ಪ್ರತಿನಿಧಿಸಿದ್ದ ಫ್ರಾಂಚೈಸಿಯೊಂದರ ಮಾಲೀಕರೊಬ್ಬರು ತನಗೆ ಕಪಾಳಮೋಕ್ಷ ಮಾಡಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

2011ರಲ್ಲಿ ನಡೆದಿದ್ದ ಕಹಿ ಘಟನೆ ಬಿಚ್ಚಿಟ್ಟ ರಾಸ್ ಟೇಲರ್

2011ರಲ್ಲಿ ನಡೆದಿದ್ದ ಕಹಿ ಘಟನೆ ಬಿಚ್ಚಿಟ್ಟ ರಾಸ್ ಟೇಲರ್

2011ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ರಾಸ್ ಟೇಲರ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 195 ರನ್ ಚೇಸ್ ಮಾಡುವಾಗ ತಾನು ಡಕ್ ಔಟ್ ಆಗಿದ್ದನ್ನು ಬಿಚ್ಚಿಟ್ಟಿದ್ದಾರೆ. ಹೀಗೆ ಡಕ್ ಔಟ್ ಆಗಿ ಪೆವಿಲಿಯನ್‌ಗೆ ಬಂದ ತನಗೆ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರೊಬ್ಬರು 'ರಾಸ್ ನಿನಗೆ ಮಿಲಿಯನ್ ಡಾಲರ್ ನೀಡಿರುವುದು ಡಕ್ ಔಟ್ ಆಗುವುದಕ್ಕಲ್ಲ' ಎಂದು ಹೇಳಿ ಮೂರ್ನಾಲ್ಕು ಬಾರಿ ಕೆನ್ನೆಗೆ ಬಾರಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಅಂದು ಅದನ್ನು ನಾನು ದೊಡ್ಡ ವಿಷಯ ಮಾಡಲಿಲ್ಲ

ಅಂದು ಅದನ್ನು ನಾನು ದೊಡ್ಡ ವಿಷಯ ಮಾಡಲಿಲ್ಲ

ಇನ್ನೂ ಮುಂದುವರಿದು ಮಾತನಾಡಿರುವ ರಾಸ್ ಟೇಲರ್ ಆತ ಅಂದು ಕಪಾಳಕ್ಕೆ ಹೊಡೆದ ಹೊಡೆತಗಳು ಗಟ್ಟಿಯಾಗಿರಲಿಲ್ಲ ಹಾಗೂ ಆತ ಹೊಡೆದ ನಂತರ ನಗುತ್ತಿದ್ದ, ಅದು ನಾಟಕೀಯವೋ ಇಲ್ಲವೋ ತಿಳಿಯಲಿಲ್ಲ, ಅಂದು ನಾನು ಆ ವಿಷಯವನ್ನು ದೊಡ್ಡ ಸಮಸ್ಯೆ ಮಾಡಲು ಮುಂದಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗೂ ಅಂತಹ ದೊಡ್ಡ ಕ್ರಿಕೆಟ್ ಟೂರ್ನಿಯ ವಾತಾವರಣದಲ್ಲಿ ಈ ರೀತಿಯ ಘಟನೆ ನಡೆಯುತ್ತೆ ಎಂಬುದನ್ನು ಊಹಿಸುಕೊಳ್ಳುವುದೂ ಕೂಡ ಕಷ್ಟ ಎಂದು ರಾಸ್ ಟೇಲರ್ ಹೇಳಿದ್ದಾರೆ.

ರಾಸ್ ಟೇಲರ್ ಐಪಿಎಲ್ ಅಂಕಿಅಂಶ

ರಾಸ್ ಟೇಲರ್ ಐಪಿಎಲ್ ಅಂಕಿಅಂಶ

ರಾಸ್ ಟೇಲರ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿ 2008ರಿಂದ 2014ರವರೆಗೂ ಕಣಕ್ಕಿಳಿದಿದ್ದು ಒಟ್ಟು 55 ಪಂದ್ಯಗಳನ್ನಾಡಿದ್ದಾರೆ. ಒಟ್ಟು 54 ಐಪಿಎಲ್ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ರಾಸ್ ಟೇಲರ್ 1017 ರನ್ ಬಾರಿಸಿದ್ದು, ಗರಿಷ್ಠ 81 ರನ್ ಕಲೆಹಾಕಿದ್ದಾರೆ, 3 ಅರ್ಧಶತಕ ಬಾರಿಸಿರುವ ರಾಸ್ ಟೇಲರ್ 3 ಬಾರಿ ಐಪಿಎಲ್‌ನಲ್ಲಿ ಡಕ್ ಔಟ್ ಆಗಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Read more about: ipl ross taylor
Story first published: Saturday, August 13, 2022, 22:06 [IST]
Other articles published on Aug 13, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X