ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಸೀಸನ್‌ನಲ್ಲಿ ಡೆಲ್ಲಿಯ ಉತ್ತಮ ಪ್ರದರ್ಶನಕ್ಕೆ ಕಾರಣ ಹೇಳಿದ ಪಾಂಟಿಂಗ್

IPL 2019 : ಪ್ರತೀ ಬಾರಿ ಲಾಸ್ಟ್.. ಈ ಸಲ ಫಸ್ಟ್.. ಇಲ್ಲಿದೆ ಡೆಲ್ಲಿ ತಂಡದ ರೋಚಕ ಕಥೆ | Oneindia Kannada
IPL: Ricky Ponting reveals reason behind Delhi Capitals’ rise this season

ನವದೆಹಲಿ, ಏಪ್ರಿಲ್ 26: ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಪ್ರದರ್ಶನ ನೀಡುತ್ತಿದೆ. ಸದ್ಯದ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಬಳಿಕ ದ್ವಿತೀಯ ಸ್ಥಾನವನ್ನೂ ಅಲಂಕರಿಸಿದೆ. ಒಂದು ಸಾರಿಯೂ ಐಪಿಎಲ್ ಟ್ರೋಫಿ ಎತ್ತದ ಡೆಲ್ಲಿ ಈ ಬಾರಿ ಗಣನೀಯ ಚೇತರಿಕೆ ಕಂಡಿರುವುದಕ್ಕೆ, ಹೊಸ ಹುಮ್ಮಸ್ಸಿನಲ್ಲಿರುವುದಕ್ಕೆ ರಿಕಿ ಪಾಂಟಿಂಗ್ ಕಾರಣ ಹೇಳಿಕೊಂಡಿದ್ದಾರೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಡೆಲ್ಲಿ ಕ್ಯಾಪಿಟಲ್ಸ್ ಗಮನಾರ್ಹ ಪ್ರದರ್ಶನ ನೀಡುತ್ತಿರುವುದರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ತಂಡದ ಕೋಚ್ ಪಾಂಟಿಂಗ್, 'ರಿಷಬ್‌ ಪಂತ್‌ ಅವರಂತ ಆಟಗಾರರು ತಂಡದಲ್ಲಿರುವುದು ಮತ್ತು ತಂಡವನ್ನು ಆಶಾಭಾವ ಕಾಯುತ್ತಿರುವುದು ಮುನ್ನಡೆಗೆ ಕಾರಣ' ಎಂದಿದ್ದಾರೆ.

'ಕೆಲ ಪಂದ್ಯಗಳಲ್ಲಿ ತಂಡದ ಕೆಲ ಆಟಗಾರರನ್ನು ಕೈ ಬಿಡಬೇಕಾ? ಎಂಬ ಪ್ರಶ್ನೆಗಳು ಏಳೋದಿದೆ. ಆದರೆ ನಾನು ಪ್ರತೀಸಾರಿಯೂ ನನ್ನ ತಂಡದಲ್ಲಿ ಉತ್ತಮ ಪ್ರತಿಭೆಗಳಿದ್ದಾರೆ, ನಾನವರನ್ನು ಬೆಂಬಲಿರುವುದನ್ನು ಮುಂದುವರೆಯಬೇಕು ಅಂದುಕೊಳ್ಳುತ್ತೇನೆ. ನನ್ನ ಈ ನಿಲುವು ಸಕಾರಾತ್ಮಕವಾಗಿ ಪರಿಣಾಮ ಬೀರಿದೆ' ಎಂದು ರಿಕಿ ಹೇಳಿದರು.

ಕ್ರಿಕೆಟ್‌: ಸುಂದರಂ ರವಿ ವಿಶ್ವಕಪ್‌ನಲ್ಲಿ ಭಾರತದ ಏಕೈಕ ಅಂಪೈರ್‌ಕ್ರಿಕೆಟ್‌: ಸುಂದರಂ ರವಿ ವಿಶ್ವಕಪ್‌ನಲ್ಲಿ ಭಾರತದ ಏಕೈಕ ಅಂಪೈರ್‌

ಮಾತು ಮುಂದುವರೆಸಿದ ಪಾಂಟಿಂಗ್, 'ವಿಶ್ವಕಪ್‌ ಆಯ್ಕೆ ಕುರಿತು ಯೋಚಿಸುವಾಗ ರಿಷಬ್ ಪಂತ್‌ನಂತ ಯುವ ಆಟಗಾರರು ನೆನಪಾಗುತ್ತಾರೆ. ನಿಜವಾಗಿಯೂ ಹೇಳಬೇಕೆಂದರೆ ಪಂತ್ ಬಾರಿಸಿದ ಅಜೇಯ 78 ರನ್‌ನಿಂದ ಐಪಿಎಲ್ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಜಯ ಗಳಿಸಲು ಸಾಧ್ಯವಾಯ್ತು' ಎಂದರು.

ಐಪಿಎಲ್‌ 2019: ಆರ್‌ಸಿಬಿ ಪಂದ್ಯದ ಬಳಿಕ ಸ್ಟೀವನ್‌ ಸ್ಮಿತ್‌ ಮನೆಗೆಐಪಿಎಲ್‌ 2019: ಆರ್‌ಸಿಬಿ ಪಂದ್ಯದ ಬಳಿಕ ಸ್ಟೀವನ್‌ ಸ್ಮಿತ್‌ ಮನೆಗೆ

ಆಡಿರುವ 11 ಪಂದ್ಯಗಳಲ್ಲಿ ಡೆಲ್ಲಿ 7 ಪಂದ್ಯಗಳನ್ನು ಗೆದ್ದು 4ರಲ್ಲಿ ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್ ಖಾತೆಯಲ್ಲಿ 14 ಅಂಕಗಳಿವೆ. 16 ಅಂಕ ಕಲೆ ಹಾಕಿರುವ ಚೆನ್ನೈ ಸದ್ಯ ಅಗ್ರ ಸ್ಥಾನದಲ್ಲಿದೆ. ಇನ್ನು ಮೂರುಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ 12 ಅಂಕಗಳೊಂದಿಗೆ ಮೂರನೇ ಸ್ಥಾನ ಆವರಿಸಿದೆ.

Story first published: Friday, April 26, 2019, 19:54 [IST]
Other articles published on Apr 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X