ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ ಸಿಬಿ ತಂಡಕ್ಕೆ ಅಧಿಕೃತ ಜೀವವಿಮೆ ಒದಗಿಸುತ್ತಿದೆ ಮ್ಯಾಕ್ಸ್ ಲೈಫ್

IPL : Royal Challengers Bangalore partnership with Max Life Insurance

ಬೆಂಗಳೂರು, ಮಾರ್ಚ್ 19: ಮ್ಯಾಕ್ಸ್ ಲೈಫ್ ಇನ್ಸುರೆನ್ಸ್ ಸಂಸ್ಥೆಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಸಹಭಾಗಿತ್ವವನ್ನು ಪ್ರಕಟಿಸಿದೆ. ಈ ಪಾಲುದಾರಿಕೆಯ ಭಾಗವಾಗಿ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಟಿ20 ಲೀಗ್‍ನಲ್ಲಿ ಬೆಂಗಳೂರು ತಂಡಕ್ಕೆ ಅಧಿಕೃತ ಲೈಫ್ ಇನ್ಸುರೆನ್ಸ್ ಪಾಲುದಾರ ಸಂಸ್ಥೆಯಾಗಲಿದೆ.

ಟಿ20 ಲೀಗ್‍ನಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳಿಗೆ ವಾಣಿಜ್ಯ ಪಾಲುದಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ಜೀವದ ಅಪಾಯಗಳಿರುವ ಈ ಆಟಕ್ಕೆ ಸಂಬಂಧಿಸಿದಂತೆ ಕೆಲವೇ ಕೆಲವು ಪಾಲುದಾರಿಕೆಗಳು ಮಾತ್ರ ಮಹತ್ವ ನೀಡುತ್ತಿವೆ. ಕ್ರಿಕೆಟ್ ಆಟದ ಸಂದರ್ಭದಲ್ಲಿ ಆಟಗಾರರಿಗೆ ಗಂಭೀರ ಮತ್ತು ಮಾರಕ ಗಾಯಗಳಾಗಿರುವುದನ್ನು ನಾವು ಕಂಡಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಆಟಗಾರರಿಗೆ ಆನ್-ಗ್ರೌಂಡ್ ರಕ್ಷಣೆ ಒದಗಿಸುವುದು ಅತ್ಯಂತ ಸೂಕ್ಷ್ಮತೆಯ ವಿಷಯವಾಗಿದೆ.

ಈ ಹಿನ್ನೆಲೆಯಲ್ಲಿ ಆಟಗಾರರು ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸುವ ಇಂತಹ ಅಪಾಯಗಳಿಂದ ರಕ್ಷಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಹೆಚ್ಚಾಗಿದೆ. ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಮತ್ತು ಆರ್ ಸಿಬಿ ಜತೆಗಿನ ಪಾಲುದಾರಿಕೆ ಕೇವಲ ತಂಡದ ಆಟಗಾರರಿಗೆ ಪ್ರೇರಣೆಯಾಗುವುದಷ್ಟೇ ಅಲ್ಲ, ದೊಡ್ಡ ಮಟ್ಟದಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಜೀವಕ್ಕೆ ಒದಗುವ ಅಪಾಯಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಪ್ರೇರಣೆಯಾಗಲಿದೆ.

ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ತ್ರಿಪಾಠಿ ಅವರು ಈ ಸಹಭಾಗಿತ್ವದ ಬಗ್ಗೆ ಮಾತನಾಡಿ, ಭಾರತ ಯುವಜನಾಂಗದಿಂದ ಕೂಡಿದ ದೇಶವಾಗಿದೆ ಮತ್ತು ಟಿ20 ಟೂರ್ನಿಯು ಈ ಯುವ ಜನಾಂಗವನ್ನು ತಲುಪುವ ಅತ್ಯುತ್ತಮ ವೇದಿಕೆಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆಗಿನ ಪಾಲುದಾರಿಕೆಯೊಂದಿಗೆ ಮ್ಯಾಕ್ಸ್ ಲೈಫ್ ಪರಿಣಾಮಕಾರಿಯಾದ ರೀತಿಯಲ್ಲಿ ಈ ಯುವ ಜನಾಂಗವನ್ನು ತಲುಪುವ ಉದ್ದೇಶವನ್ನು ಹೊಂದಿದೆ ಎಂದರು.

ಈ ಒಪ್ಪಂದದ ಬಗ್ಗೆ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧ್ಯಕ್ಷ ಸಂಜೀವ್ ಚುರಿವಾಲ ಅವರು, ಆಟಗಾರರಿಗೆ ಹಲವು ಮಾರ್ಗಗಳಲ್ಲಿ ರಕ್ಷಣೆಯನ್ನು ನೀಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಆರ್ಥಿಕ ಅಭಿವ್ಯಕ್ತಿಯನ್ನು ಸಮಾನ ಚಿಂತನೆಯಲ್ಲಿ ನೀಡಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಅನ್ನು ನಮ್ಮ ಅಧಿಕೃತ ಲೈಫ್ ಇನ್ಷೂರರ್ ಆಗಿ ಮಾಡಿಕೊಂಡಿರುವುದು ನಮಗೆ ಸಂತಸ ತಂದಿದೆ. ಈ ಕಂಪನಿಯು ದೇಶದಲ್ಲಿ ಪ್ರಸ್ತುತ ಅತ್ಯುತ್ತಮವಾದ ರೀತಿಯಲ್ಲಿ ಕ್ಲೇಮ್‍ಗಳನ್ನು ನೀಡುತ್ತಿರುವ ಕಂಪನಿಯಾಗಿದೆ. ಈ ಒಪ್ಪಂದದ ಮೂಲಕ ನಾವು ಆರ್ಥಿಕ ರಕ್ಷಣೆಯ ಮಹತ್ವದ ಸಂದೇಶವನ್ನು ನೀಡುವ ಉದ್ದೇಶವನ್ನು ಹೊಂದಿದ್ದೇವೆ'' ಎಂದು ತಿಳಿಸಿದರು.

ಇಂದಿನ ಜಗತ್ತಿನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ಆರ್ಥಿಕ ರಕ್ಷಣೆ ಮತ್ತು ಅದರ ಮಹತ್ವವನ್ನು ಸಾರುವ ಉದ್ದೇಶವನ್ನು ಈ ಮ್ಯಾಕ್ಸ್ ಲೈಫ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಒಪ್ಪಂದ ಹೊಂದಿದೆ. ರಾಯಲ್ ಚಾಲೆಂಜರ್ಸ್ ಮೊದಲ ಪಂದ್ಯವನ್ನು ಮಾರ್ಚ್ 23 ರಂದು ಎಂಎ ಚಿದಂಬರಂ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಮೂಲಕ 12 ನೇ ಐಪಿಎಲ್‍ಗೆ ವಿದ್ಯುಕ್ತ ಚಾಲನೆ ದೊರೆಯಲಿದೆ.

Story first published: Tuesday, March 19, 2019, 14:20 [IST]
Other articles published on Mar 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X