ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ರುತುರಾಜ್ ಗಾಯಕ್ವಾಡ್ ಚೊಚ್ಚಲ ಶತಕ; ಸ್ಯಾಮ್ಸನ್ ಪಡೆಗೆ ಕಠಿಣ ಗುರಿ ನೀಡಿದ ಸಿಎಸ್‌ಕೆ

IPL 2021: Ruturaj Gaikwad scored his debut IPL century and CSK have given the target of 190 runs to RR

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 47ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಬಾರಿಸಿದ್ದಾರೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿದರು. ಹೀಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದ್ದು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು 190 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.

ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ 60 ಎಸೆತಗಳಲ್ಲಿ ಅಜೇಯ 101 ರನ್ ಚಚ್ಚುವುದರ ಮೂಲಕ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಬಾರಿಸಿದ್ದಾರೆ. 59 ಎಸೆತಗಳಲ್ಲಿ 95 ರನ್ ಕಲೆಹಾಕಿದ್ದ ರುತುರಾಜ್ ಗಾಯಕ್ವಾಡ್ ಪಂದ್ಯದ ಅಂತಿಮ ಓವರ್‌ನ ಅಂತಿಮ ಎಸೆತದಲ್ಲಿ ಮುಸ್ತಫಿಜರ್ ರಹಮಾನ್ ಬೌಲಿಂಗ್‌ಗೆ ಸಿಕ್ಸರ್ ಬಾರಿಸುವುದರ ಮೂಲಕ ಭರ್ಜರಿಯಾಗಿ ಶತಕವನ್ನು ತಮ್ಮದಾಗಿಸಿಕೊಂಡಿದ್ದು, ರುತುರಾಜ್ ಗಾಯಕ್ವಾಡ್ ಸಿಡಿಸಿದ ಶತಕದಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ ಕೂಡ ಸೇರಿವೆ. ಈ ಶತಕದ ಮೂಲಕ ರುತುರಾಜ್ ಗಾಯಕ್ವಾಡ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರನಾಗಿದ್ದು, ಇದುವರೆಗೂ ತಾವು ಆಡಿರುವ ಒಟ್ಟು 11 ಪಂದ್ಯಗಳಲ್ಲಿ 516 ರನ್ ಗಳಿಸಿ ಆರೆಂಜ್ ಕ್ಯಾಪ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನುಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಫಾಫ್ ಡು ಪ್ಲೆಸಿಸ್ 25 ರನ್, ಸುರೇಶ್ ರೈನಾ 3, ಮೊಯಿನ್ ಅಲಿ 21 ಮತ್ತು ಅಂಬಾಟಿ ರಾಯುಡು 2 ರನ್ ಗಳಿಸಿದರೆ ಆರನೇ ಕ್ರಮಾಂಕದಲ್ಲಿ ಬಂದ ರವೀಂದ್ರ ಜಡೇಜಾ 15 ಎಸೆತಗಳಲ್ಲಿ ಅಜೇಯ 32 ರನ್ ಚಚ್ಚಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿ ಪ್ಲೇ ಆಫ್ ಕನಸನ್ನು ಹೊಂದಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 190 ರನ್‌ಗಳ ಗುರಿಯನ್ನು ನೀಡಿದೆ.

RCB ಪರವಾಗಿ ತೀರ್ಪು ನೀಡಿದ Umpire ಗೆ ಮಂಗಳಾರತಿ | Oneindia Kannada

ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ಪರ ರಾಹುಲ್ ತೆವಾಟಿಯಾ 3 ಮತ್ತು ಚೇತನ್ ಸಕಾರಿಯಾ 1 ವಿಕೆಟ್ ಪಡೆದರು.

Story first published: Saturday, October 2, 2021, 22:07 [IST]
Other articles published on Oct 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X