ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆಯೋಜನೆಯ ಕ್ರಮವನ್ನು ಪ್ರಶ್ನಿಸಿದ ಪಾಕ್ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್

Ipl Shouldnt Be Played Buring T20 World Cup Window-Inzamam-ul-Haq

ಟಿ20 ವಿಶ್ವಕಪ್ ಈ ಬಾರಿ ನಡೆಯುವ ಬಗ್ಗೆ ಐಸಿಸಿ ಇನ್ನೂ ತೀರ್ಮಾನವನ್ನು ಪ್ರಕಟಿಸಿಲ್ಲ. ಆದರೆ ಬಹುತೇಕ ಈ ಬಾರಿ ನಡೆಯುವ ಸಂಭವ ಇಲ್ಲ ಎಂಬುದು ಅಷ್ಟೇ ಸ್ಪಷ್ಟ. ಆದರೆ ಟಿ20 ವಿಶ್ವಕಪ್‌ಗೆ ನಿಗದಿಯಾದ ಸಮಯವನ್ನು ಐಪಿಎಲ್ ನಡೆಸಲು ಬಳಸಿಕೊಂಡರೆ ಹಲವು ಪ್ರಶ್ನೆಗಳು ಉದ್ಭವಿಸುತ್ತದೆ ಎಂದು ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

"ಟಿ20 ವಿಶ್ವಕಪ್ ಈ ವರ್ಷ ನಡೆಯುವುದಿಲ್ಲ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಮಾತ್ರವೇ ಬಾಕಿಯಿದೆ. ಮೂಲಗಳ ಮಾಹಿತಿಯ ಪ್ರಕಾರ ಟಿ20 ವಿಶ್ವಕಪ್ ಈ ಬಾರಿ ನಡೆಯುವುದಿಲ್ಲ ಎಂದು ಇನ್ಜಮಾಮ್ ಉಲ್ ಹಕ್ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಸಚಿನ್ ಯಾಕೆ ಮೊದಲ ಎಸೆತ ಎದುರಿಸುತ್ತಿರಲಿಲ್ಲ: ಗಂಗೂಲಿ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಸಚಿನ್ ಯಾಕೆ ಮೊದಲ ಎಸೆತ ಎದುರಿಸುತ್ತಿರಲಿಲ್ಲ: ಗಂಗೂಲಿ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿ

ವಿಶ್ವಕಪ್ ಆಯೋಜನೆಯ ಜವಾಬ್ಧಾರಿ ಹೊತ್ತಿರುವ ಆಸ್ಟ್ರೇಲಿಯಾಗೆ ಇಂತಾ ಸಂದರ್ಭದಲ್ಲಿ 18 ತಂಡಗಳಿಗೆ ಆತಿಥ್ಯ ನೀಡಿ ಟೂರ್ನಮೆಂಟ್ ಆಯೋಜನೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳುವ ಹಕ್ಕಿದೆ. ಆದರೆ ನ್ಯೂಜಿಲೆಂಡ್ ಜೊತೆ ಕೈ ಜೋಡಿಸಿಕೊಂಡರೆ ಟೂರ್ನಿ ಆಯೋಜನೆ ಮಾಡುವ ಸಾಧ್ಯತೆಯಿತ್ತು. ನ್ಯೂಜಿಲೆಂಡ್ ಕೊರೊನಾ ವೈರಸ್ ಮುಕ್ತವಾದ ಮೊದಲ ದೇಶ ಎಂದು ಸ್ವತಃ ಘೋಷಿಸಿಕೊಂಡಿತ್ತು ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

ವಿಶ್ವಕಪ್ ಆಯೋಜನೆಯಾಗದ ಸಂದರ್ಭದಲ್ಲಿ ಆ ಸಮಯದಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ನಿರ್ಧರಿಸಿರುವ ಬಗ್ಗೆ ಇನ್ಜಮಾಮ್ ಮಾತಾಡಿದರು. ಹಾಗಾದಲ್ಲಿ ಅದೊಂದು ಕೆಟ್ಟ ಸಂದೇಶವನ್ನು ನೀಡುತ್ತದೆ. ಐಸಿಸಿ ಕೂಡ ದೇಶಿಯ ಲೀಗ್‌ಗಳಿಗೆ ಮಣೆ ಹಾಕುವ ಬದಲು ಅಂತಾರಾಷ್ಟ್ರೀಯ ಟೂರ್ನಿಗೆ ಮೊದಲ ಒತ್ತು ನೀಡಬೇಕು ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್: ಐಸಿಸಿ ನಿರ್ಧಾರಕ್ಕೆ ಇನ್ನು ಕಾಯಲು ಸಾಧ್ಯವಿಲ್ಲ ಎಂದ ಬಿಸಿಸಿಐ ಕಾರ್ಯದರ್ಶಿಟಿ20 ವಿಶ್ವಕಪ್: ಐಸಿಸಿ ನಿರ್ಧಾರಕ್ಕೆ ಇನ್ನು ಕಾಯಲು ಸಾಧ್ಯವಿಲ್ಲ ಎಂದ ಬಿಸಿಸಿಐ ಕಾರ್ಯದರ್ಶಿ

ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಸಾರ್ವಜನಿಕರಿಗೆ ಸ್ಥಳೀಯ ಲೀಗ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂಬ ಈ ರೀತಿಯ ಸಂದೇಶ ಹೋಗಲು ಅವಕಾಶವನ್ನು ನೀಡಬಾರದು. ಹಾಗಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗರು ಖಾಸಗೀ ಲೀಗ್‌ಗಳತ್ತ ಹೆಚ್ಚಿನ ಗಮನವನ್ನು ನೀಡಲು ಬಯಸುತ್ತಾರೆ ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

Story first published: Monday, July 6, 2020, 21:17 [IST]
Other articles published on Jul 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X