ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂಪರ್ ಓವರ್ ಟೈ ಆದ್ರೆ?!: 2020ರ ಸೂಪರ್ ಓವರ್ ನಿಯಮಗಳಿವು!

IPL super over rules in 2020: Rules of Tied Super Over Explained in Kannada

ದುಬೈ: ವಿಭಿನ್ನ ಸನ್ನಿವೇಶಗಳಿಗೆ ತಕ್ಕಂತೆ ಕೆಲ ಕ್ರಿಕೆಟ್ ನಿಯಮಗಳು ಬದಲಾಗುತ್ತಿರುತ್ತವೆ. ಕ್ರಿಕೆಟ್‌ನ ಅನೇಕ ನಿಯಮಗಳು ಬದಲಾಗಿದ್ದನ್ನು ನಾವು ನೋಡಿದ್ದೇವೆ. ಪಂದ್ಯ ಸಮಬಲಗೊಂಡಾಗ ವಿಕೆಟ್ ಹಿಟ್ ಮೂಲಕ ವಿಜೇತರನ್ನು ಗುರುತಿಸಲಾಗುತ್ತಿತ್ತು. ಫಾಲ್ ಆಫ್ ವಿಕೆಟ್‌ ಮೂಲಕವೂ ವಿಜೇತರನ್ನು ನಿರ್ಧರಿಸಿದ್ದನ್ನೂ ನಾವು ನೋಡಿದ್ದೇವೆ. ಇನ್ನು ಬೌಂಡರಿ ಕೌಂಟ್ ಆಧಾರದಲ್ಲಿ ವಿಜೇತರನ್ನು ಹೆಸರಿಸಿದ್ದನ್ನು ನಾವು ಕಳೆದ ಬಾರಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ನೋಡಿದ್ದೆವು.

ಹಿಂದೆಯೂ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್‌ಗಳು ನಡೆದಿತ್ತು!ಹಿಂದೆಯೂ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್‌ಗಳು ನಡೆದಿತ್ತು!

ಆವತ್ತು ನ್ಯೂಜಿಲೆಂಡ್-ಇಂಗ್ಲೆಂಡ್ ನಡುವಿನ ಫೈನಲ್ ಪಂದ್ಯ ಟೈ ಎನಿಸಿದ್ದಾಗ ಸೂಪರ್ ಓವರ್ ನಡೆಸಲಾಯ್ತು. ಆಗಲೂ ಪಂದ್ಯ ಟೈ ಆಯ್ತು. ಆಗ ಬೌಂಡರಿ ಕೌಂಟ್ ನಿಯಮದ ಪ್ರಕಾರ ಇಂಗ್ಲೆಂಡ್ ಅನ್ನು ವಿಜಯಿ ಎಂದು ಘೋಷಿಸಲಾಯ್ತು. ವಿಶ್ವಕಪ್‌ನಲ್ಲಿನ ಈ ಫಲಿತಾಂಶ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ನೀಡಿರಲಿಲ್ಲ. ಬೌಂಡರಿ ಕೌಂಟ್ ನಿಯಮ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.

ಐಪಿಎಲ್ ಇತಿಹಾಸದ ಎಲ್ಲಾ ಸೂಪರ್ ಓವರ್ ಪಂದ್ಯಗಳ ಸಂಪೂರ್ಣ ಪಟ್ಟಿಐಪಿಎಲ್ ಇತಿಹಾಸದ ಎಲ್ಲಾ ಸೂಪರ್ ಓವರ್ ಪಂದ್ಯಗಳ ಸಂಪೂರ್ಣ ಪಟ್ಟಿ

ಹೀಗಾಗಿ ಸೂಪರ್ ಓವರ್ ಕೂಡ ಟೈ ಎನಿಸಿದರೆ ಏನು ಮಾಡಬೇಕು ಎನ್ನುವ ಬಗ್ಗೆ ನಿಯಮವನ್ನು ಕೊಂಚ ಬದಲಿಸಲಾಗಿದೆ. ಟಿ20ಯಲ್ಲಿ ಇದಕ್ಕೆ ನಿಯಮಗಳನ್ನು ರೂಪಿಸಲಾಗಿದೆ. ಈ ಬಗ್ಗೆ ಮಾಹಿತಿ ಕೆಳಗಿದೆ ನೋಡಿ.

ಸೂಪರ್ ಓವರ್‌ ಟೈ ಆದರೆ?

ಸೂಪರ್ ಓವರ್‌ ಟೈ ಆದರೆ?

ಸೂಪರ್ ಓವರ್‌ ಕೂಡ ಸಮಬಲಗೊಂಡರೆ ಏನು ಮಾಡೋದು ಎನ್ನುವು ಪ್ರಶ್ನೆ ನಮ್ಮೆಲ್ಲರಲ್ಲಿತ್ತು. ಏನಾಗುತ್ತದೆ ಎನ್ನವುದು ಪಂದ್ಯವನ್ನೇ ನೋಡದೆ ವಿಚಾರ ಸ್ಪಷ್ಟವಾಗಿರಲಿಲ್ಲ. ಇದಕ್ಕೆ ಅಕ್ಟೋಬರ್ 18ರ ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಸ್ಪಷ್ಟನೆ ನೀಡಿದೆ.

ಎರಡನೇ ಸೂಪರ್ ಓವರ್ ಟೈ ಆದರೆ?

ಎರಡನೇ ಸೂಪರ್ ಓವರ್ ಟೈ ಆದರೆ?

ಐಪಿಎಲ್‌ನಲ್ಲಿ ಸೂಪರ್ ಓವರ್‌ಗಾಗಿ ನಿಯಮಗಳಿವೆ. ಒಂದು ವೇಳೆ ಎರಡನೇ ಸೂಪರ್ ಓವರ್‌ ಕೂಡ ಟೈ ಆದರೆ ಏನು ಮಾಡೋದು? ಮತ್ತೊಂದು ಸೂಪರ್ ಓವರ್ ನಡೆಯುತ್ತಾ? ಇಲ್ಲ ಇಲ್ಲ. ಐಪಿಎಲ್‌ನಲ್ಲಿ ಎರಡನೇ ಸೂಪರ್ ಕೂಡ ಟೈ ಎನಿಸಿದರೆ ಎರಡೂ ತಂಡಗಳಿಗೂ ಅಂಕ ಹಂಚಲಾಗುತ್ತದೆ. ಅಂದರೆ ತಲಾ 1 ಅಂಕಗಳನ್ನು ಎರಡೂ ತಂಡಗಳಿಗೆ ನೀಡಲಾಗುತ್ತದೆ.

ಮೊದಲು ಬ್ಯಾಟಿಂಗ್ ಯಾರು?

ಮೊದಲು ಬ್ಯಾಟಿಂಗ್ ಯಾರು?

ಟಿ20 ಕ್ರಿಕೆಟ್‌ನಲ್ಲಿ ಪಂದ್ಯ ಟೈ ಆದರೆ ಸೂಪರ್ ಓವರ್, ಸೂಪರ್ ಓವರ್‌ ಟೈ ಆದರೆ ಮತ್ತೊಂದು ಸೂಪರ್ ಓವರ್ ನಡೆಯುತ್ತದೆ ನಿಜ. ಆದರೆ ಬ್ಯಾಟಿಂಗ್ ಯಾರು ಮೊದಲು ಮಾಡಬೇಕು? ಪಂದ್ಯದಲ್ಲಿ ಸೆಕೆಂಡ್ ಇನ್ನಿಂಗ್ಸ್‌ ಆಡುವ ತಂಡ ಮೊದಲ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತದೆ. ಹಾಗೆಯೇ ಮೊದಲನೇ ಸೂಪರ್ ಓವರ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆಡುವ ತಂಡ ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತದೆ.

ಬ್ಯಾಟಿಂಗ್, ಬೌಲಿಂಗ್‌ ನಿಯಮ

ಬ್ಯಾಟಿಂಗ್, ಬೌಲಿಂಗ್‌ ನಿಯಮ

ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಸಂಬಂಧಿಸಿ ನಿಯಮಗಳಿವೆ. ಪಂದ್ಯದ ಫಲಿತಾಂಶ ಟೈ ಎನಿಸಿದಾಗ ಸೂಪರ್ ಓವರ್ ನಡೆಸಲಾಗುತ್ತದೆ. ಸೂಪರ್ ಓವರ್‌ ಕೂಡ ಟೈ ಆದ್ರೆ ಎರಡನೇ ಸೂಪರ್ ಓವರ್ ನಡೆಯುತ್ತದೆ. ಆದರೆ ಯಾವ ಆಟಗಾರ ಮೊದಲ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಿರುತ್ತಾರೊ ಅಥವಾ ಬೌಲಿಂಗ್ ಮಾಡಿರುತ್ತಾರೋ ಅವರಿಗೆ ಎರಡನೇ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಅವಕಾಶವಿರುವುದಿಲ್ಲ. ಬೇರೆಯವರು ಬ್ಯಾಟಿಂಗ್ ಯಾ ಬೌಲಿಂಗ್ ಮಾಡಬಹುದು.

Story first published: Monday, October 19, 2020, 12:30 [IST]
Other articles published on Oct 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X