ಐಪಿಎಲ್ 2008: ಮೊದಲ ಆವೃತ್ತಿಯಲ್ಲಿ ನಾಯಕರಾಗಿದ್ದ ಎಲ್ಲಾ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ವಿಶ್ವ ಕ್ರಿಕೆಟ್‌ನಲ್ಲಿ ಐಪಿಎಲ್ ಲೀಗ್ ತನ್ನದೇ ಆದ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಜನಪ್ರಿಯತೆ, ಮನೊರಂಜನೆ ಜೊತೆಗೆ ಆರ್ಥಿಕ ವಿಚಾರವಾಗಿಯೂ ಐಪಿಎಲ್ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. 2008ರಲ್ಲಿ ಅದ್ಧೂರಿಯಾಗಿ ಆರಂಭವಾದ ಈ ಶ್ರೀಮಂತ ಕ್ರಿಕೆಟ್ ಲೀಗ್ ಈಗ 12 ಆವೃತ್ತಿಯನ್ನು ಪೂರ್ಣಗೊಳಿಸಿ 13ನೇ ಆವೃತ್ತಿಯತ್ತ ದೃಷ್ಟಿ ನೆಟ್ಟಿದೆ.

8 ನಗರಗಳನ್ನು ಪ್ರತಿನಿಧಿಸುವ ಫ್ರಾಂಚೈಸಿಗಳೊಂದಿಗೆ ಟೂರ್ನಿ ಸಾಕಷ್ಟು ವರ್ಣರಂಚಿತವಾಗಿ ಆರಂಭವಾಗಿ ಅದೇ ಮೆರುಗನ್ನು ಇಂದೂ ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಕಿಂಗ್ಸ್ xi ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಆರಂಭದ ಟೂರ್ನಿಯಲ್ಲಿ ಪಾಲ್ಗೊಂಡಿತ್ತು.

ಐಪಿಎಲ್‌ ದಾರಿಯಿನ್ನು ಸುಲಭ, ಐಸಿಸಿ ಟಿ20 ವಿಶ್ವಕಪ್ ಮುಂದೂಡಿಕೆ

ಈ 8 ತಂಡಗಳಿಗಳ ನಾಯಕರಾಗಿದ್ದ 8 ಖ್ಯಾತ ಕ್ರಿಕೆಟಿಗರು ಈಗ ಎಲ್ಲೆಲ್ಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸದೆ ಇರದು. ಆ ಬಗ್ಗೆ ವಿವರಗಳು ಈ ವರದಿಯಲ್ಲಿದೆ..

8. ವಿವಿಎಸ್ ಲಕ್ಷ್ಮಣ್- ಡೆಕ್ಕನ್ ಚಾರ್ಜರ್ಸ್

8. ವಿವಿಎಸ್ ಲಕ್ಷ್ಮಣ್- ಡೆಕ್ಕನ್ ಚಾರ್ಜರ್ಸ್

ಐಪಿಎಲ್‌ನ ಫ್ರಾಂಚೈಸಿಗಳಲ್ಲಿ ಒಂದಾಗಿದ್ದ ಡೆಕ್ಕನ್ ಚಾರ್ಜರ್ಸ್ ತಂಡದ ಮೊದಲ ಆವೃತ್ತಿಯಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದವರು ವಿವಿಎಸ್ ಲಕ್ಷ್ಮಣ್. ಆದರೆ ಮೊದಲ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಕೊನೆಯ ಸ್ಥಾನವನ್ನು ಗಳಿಸಿತ್ತು. ಲಕ್ಷ್ಮಣ್ ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಲು ಸಾಧ್ಯವಾಗಿರಲಿಲ್ಲ. ಆದರೆ ಮುಂದಿನ ವರ್ಷ ಗಿಲ್‌ಕ್ರಿಸ್ಟ್ ನಾಯಕತ್ವದಲ್ಲಿ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಮೊದಲ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕರಾಗಿದ್ದ ಲಕ್ಷ್ಮಣ್ ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಕ್ರಿಕೆಟ್ ಕಾಮೆಂಟೆಟರ್ ಆಗಿಯೂ ಯಶಸ್ಸು ಗಳಿಸಿದ್ದಾರೆ.

7. ಶೇನ್ ವಾರ್ನ್- ರಾಜಸ್ಥಾನ ರಾಯಲ್ಸ್

7. ಶೇನ್ ವಾರ್ನ್- ರಾಜಸ್ಥಾನ ರಾಯಲ್ಸ್

ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಮೊದಲ ಆವೃತ್ತಿಯ ಐಪಿಎಲ್ ಪ್ರಶಸ್ತಿಯನ್ನು ಗೆದ್ದು ಬೀಗಿತ್ತು. ಶೇನ್ ವಾರ್ನ್ ಹಾಗೂ ಯೂಸುಫ್ ಪಠಾಣ್ ಈ ಟೂರ್ನಿಯಲ್ಲಿ ಹೀರೋಗಳು ಎನಿಸಿದ್ದರು. ಸದ್ಯ ಶೇನ್ ವಾರ್ನ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಹಾಗೂ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯಲ್ಲಿ ಸಣ್ಣ ಪ್ರಮಾಣದ ಶೇರನ್ನು ಹೊಂದಿದ್ದಾರೆ.

6. ರಾಹುಲ್ ದ್ರಾವಿಡ್- ರಾಯಲ್ ಚಾಲೆಂಜರ್ಸ್ ಬೆಂಗಳೂರು

6. ರಾಹುಲ್ ದ್ರಾವಿಡ್- ರಾಯಲ್ ಚಾಲೆಂಜರ್ಸ್ ಬೆಂಗಳೂರು

ಅತ್ಯುತ್ತಮ ತಂಡವನ್ನು ಹೊಂದಿದ್ದರೂ ಆರ್‌ಸಿಬಿ ತಂಡ ಮೊದಲ ಆವೃತ್ತಿಯಲ್ಲಿ ನಿರಾಸೆಯನ್ನು ಅನುಭವಿಸಿತ್ತು. ರಾಹುಲ್ ದ್ರಾವಿಡ್ ನಾಯಕತ್ವ ತಂಡಕ್ಕಿದ್ದರೂ ತಂಡಕ್ಕೆ ಯಶಸ್ಸು ಇರಲಿಲ್ಲ. ಆ ಆವೃತ್ತಿಯಲ್ಲಿ ಆರ್‌ಸಿಬಿ 7ನೇ ಸ್ಥಾನದೊಂದಿಗೆ ಟೂರ್ನಿ ಮುಗಿಸಿತ್ತು. ಅಂದು ರಾಯಲ್ ಚಾಲೆಂಜರ್ಸ್ ಬೆಮಗಳೂರು ತಂಡದ ನಾಯಕರಾಗಿದ್ದ ಬಳಿಕ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡರು. ಸದ್ಯ ನಿವೃತ್ತಿ ಹೊಂದಿರುವ ಅವರು ಪ್ರತಿಷ್ಠಿತ 'ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ'ಯ ಮುಖ್ಯಸ್ಥರಾಗಿದ್ದಾರೆ.

5. ಸೌರವ್ ಗಂಗೂಲಿ- ಕೊಲ್ಕತ್ತಾ ನೈಟ್ ರೈಡರ್ಸ್

5. ಸೌರವ್ ಗಂಗೂಲಿ- ಕೊಲ್ಕತ್ತಾ ನೈಟ್ ರೈಡರ್ಸ್

ಫ್ರಿನ್ಸ್ ಆಫ್ ಕೊಲ್ಕತ್ತಾ ಎಂದೇ ಖ್ಯಾತರಾಗಿರುವ ಸೌರವ್ ಗಂಗೂಲಿ ಮೊದಲ ಆವೃತ್ತಿಯಲ್ಲಿ ಶಾರೂಖ್ ಖಾನ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ಆರಂಭದಲ್ಲಿನ ಅಬ್ಬರದ ಹೊರತಾಗಿಯೂ ಮೊದಲ ಟೂರ್ನಿಯಲ್ಲಿ ಕೊಲ್ಕತ್ತಾ ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿಯೂ ವಿಫಲವಾಯಿತು. ಬಳಿಕ ಕೊಲ್ಕತ್ತಾ ತಂಡವನ್ನು ತೊರೆದ ಗಂಗೂಲಿ ಪುಣೆ ತಂಡದ ಭಾಗವಾಗಿ ಕೆಲ ವರ್ಷ ಇದ್ದರು. ಸದ್ಯ ಭಾರತೀಯ ಕ್ರಿಕೆಟ್‌ ಮಂಡಳಿ ಬಿಸಿಸಿಐನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

4. ಎಂಎಸ್ ಧೋನಿ- ಚೆನ್ನೈ ಸೂಪರ್ ಕಿಂಗ್ಸ್

4. ಎಂಎಸ್ ಧೋನಿ- ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಮೊದಲ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಧೋನಿ ಮೂರು ಬಾರಿ ಚೆನ್ನೈ ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧೋನಿ ಈಗಲೂ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದು ಐಪಿಎಲ್ ಆರಂಭವಾದರೆ 13ನೇ ಆವೃತ್ತಿಯಲ್ಲೂ ಚೆನ್ನೈ ತಂಡವನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ.

3. ಸಚಿನ್ ತೆಂಡೂಲ್ಕರ್- ಮುಂಬೈ ಇಂಡಿಯನ್ಸ್

3. ಸಚಿನ್ ತೆಂಡೂಲ್ಕರ್- ಮುಂಬೈ ಇಂಡಿಯನ್ಸ್

ಐಪಿಎಲ್‌ನಲ್ಲಿ ಆರೆಂಜ್ ಟೋಫಿಯನ್ನು ಧರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ಆರಂಭಕ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ಸಚಿನ್ ಕೆಲ ಪಂದ್ಯಗಳಲ್ಲಿ ಅಲಭ್ಯರಾಗಿದ್ದರು. ಹೀಗಾಗಿ ಮುಂಬೈ ಸೆಮಿ ಫೈನಲ್ ಪ್ರವೇಶಿವಲ್ಲಿ ವಿಫಲವಾಗಿತ್ತು. ಸದ್ಯ ಕ್ರಕೆಟ್‌ಇಂದ ನಿವೃತ್ತಿಯನ್ನು ಪಡೆದುಕೊಂಡಿರುವ ಸಚಿನ್ ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರರಾಗಿದ್ದಾರೆ. ನಿವೃತ್ತಿಯ ನಂತರ ಸಚಿನ್ ಅನೇಕ ಪ್ರದರ್ಶನ ಪಂದ್ಯಗಳನ್ನು ಕೂಡ ಸಚಿನ್ ಆಡಿದ್ದಾರೆ.

2. ಯುವರಾಜ್ ಸಿಂಗ್-ಕಿಂಗ್ಸ್ XI ಪಂಜಾಬ್

2. ಯುವರಾಜ್ ಸಿಂಗ್-ಕಿಂಗ್ಸ್ XI ಪಂಜಾಬ್

ಮೊದಲ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಓವರ್‌ನ ಎಲ್ಲಾ ಎಸೆಗಳಲ್ಲಿ ಸಿಕ್ಸರ್ ಚಚ್ಚಿ ಟಿ20 0ಕ್ರಿಕೆಟ್‌ನಲ್ಲಿ ಸೆನ್ಸೇಶನ್ ಮೂಡಿಸಿದ್ದ ಯುವರಾಜ್ ಸಿಂಗ್ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕರಾಗಿದ್ದರು. ಮೊದಲ ಟೂರ್ನಿಯಲ್ಲಿ ಪಂಜಾಬ್ ತಂಡವನ್ನು ಸೆಮಿ ಫೈನಲ್‌ವರೆಗೆ ತಲುಪಿಸಿದ್ದರು. ಸದ್ಯ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳುತ್ತಿರುವ ಯುವಿ ಅಭಿಮಾನಿಗಳನ್ನು ಈ ಮೂಲಕ ರಂಜಿಸುತ್ತಿದ್ದಾರೆ.

1. ವೀರೇಂದ್ರ ಸೆಹ್ವಾಗ್- ಡೆಲ್ಲಿ ಡೇರ್ ಡೆವಿಲ್ಸ್

1. ವೀರೇಂದ್ರ ಸೆಹ್ವಾಗ್- ಡೆಲ್ಲಿ ಡೇರ್ ಡೆವಿಲ್ಸ್

ವೀರೇಂದ್ರ ಸೆಹ್ವಾಗ್ ನಾಯಕತ್ವವನ್ನು ಹೊಂದಿದ್ದ ಡೆಲ್ಲಿ ಡೆರ್ ಡೆವಿಲ್ಸ್ ತಂಡ ಸಾಕಷ್ಟು ಅತ್ಯುತ್ತಮ ಆಟಗಾರರನ್ನು ಹೊಂದಿತ್ತು. ಗೌತಮ್ ಗಂಭೀರ್, ಎಬಿ ಡಿವಿಲಿಯರ್ಸ್ ಶೋಯೆಬ್ ಮಲಿಕ್ ಅವರಣತಾ ಆಟಗಾಋರು ತಂಡದಲ್ಲಿದ್ದರು. ಮೊದಲ ಆವೃತ್ತಿಯಲ್ಲಿ ಡೆಲ್ಲಿ ತಂಡ ಸೆಮಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. 2015ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿರುವ ಸೆಹ್ವಾಗ್ ಸಚಿನ್ ತೆಂಡೂಲ್ಕರ್ ರೀತಿಯಲ್ಲೇ ಅನೇಕ ಪ್ರದರ್ಶನ ಪಂದ್ಯಗಳನ್ನು ಆಡುತ್ತಿದ್ದಾರೆ. ಜೊತೆಗೆ 'ನಾಡಾ'ದ ಆ್ಯಂಟಿ ಡೋಪಿಂಗ್ ಅಪೀಲ್ ಪ್ಯಾನೆಲ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, July 21, 2020, 13:36 [IST]
Other articles published on Jul 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X