ಐಪಿಎಲ್ 2020: ಆರ್‌ಸಿಬಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಪ್ರಗ್ಯಾನ್ ಓಜಾ

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಹೀಗಾಗಿ ಕಳೆದ ಹನ್ನೆರಡು ಆವೃತ್ತಿಯಲ್ಲಿ ಆರ್‌ಸಿಬಿ ತಂಡಕ್ಕೆ ಕನಸಾಗಿಯೇ ಉಳಿಸಿರುವ ಟ್ರೋಫಿ ಎತ್ತಿಹಿಡಿಯುವ ಕ್ಷಣ ಈ ಬಾರಿ ನನಸಾಗುವ ಭರವಸೆ ಅಭಿಮಾನಿಗಳಲ್ಲಿದೆ. ಇದಕ್ಕೆ ಪೂರಕವಾಗಿ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ತಂಡ ಯಾವಾಗಲೂ ಅದ್ಭುತ ಬ್ಯಾಟಿಂಗ್ ಲೈನ್‌ಅಪ್‌ಅನ್ನು ಹೊಂದಿರುತ್ತದೆ. ಮೂರು ಬಾರಿ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ಸಯಾಗಿದ್ದರೂ ಕಪ್ ಗೆಲ್ಲಲು ಆರ್‌ಸಿಬಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯ ಆವೃತ್ತಿಯಲ್ಲಿ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಆರ್‌ಸಿಬಿ ಹತ್ತಿರದಲ್ಲಿದೆ ಎಂದು ಓಜಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೊಹ್ಲಿ, ಎಬಿಡಿ, ಮೋರಿಸ್, ಚಾಹಲ್ ಹೊಸ ಹೇರ್ ಸ್ಟೈಲ್ ಫೋಟೋ ವೈರಲ್

ಕೆಕೆಆರ್ ವಿರುದ್ದದ ಪಂದ್ಯಕ್ಕೂ ಮುನ್ನ ಓಜಾ ಸ್ಪೋರ್ಟ್ಸ್ ಟುಡೇ ಗೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಅವರು ಆಡುತ್ತಿರುವ ರೀತಿಯನ್ನು ನೀಡಿದರೆ ಅವರು ತಮ್ಮ ಕನಸಿನ ಹತ್ತಿರದಲ್ಲಿದ್ದಾರೆ ಎನಿಸುತ್ತಿದೆ. ಅವರು ಮುನ್ನಡೆಯುತ್ತಿರುವ ರೀತಿಯನ್ನು ಗಮನಿಸಿದಾಗ ಕಪ್ ಗೆಲ್ಲುವ ಕನಸು ಕನಸಾಗಿಯೇ ಇರಲಾರದು. ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ, ಕ್ರಿಸ್ ಮೊರಿಸ್ ಅವರಂತಾ ಆಟಗಾರರು ಒಂದು ಬಾರಿ ತಮ್ಮ ಲಯವನ್ನು ಕಂಡುಕೊಂಡರೆ ಅವರು ವಿಭಿನ್ನ ಆಟಗಾರರಾಗಿರುತ್ತಾರೆ" ಎಂದು ಪ್ರಗ್ಯಾನ್ ಓಜಾ ಹೇಳಿದ್ದಾರೆ.

ಆರ್‌ಸಿಬಿ ತಂಡ ತುಂಬಾ ಸಂಯೋಜಿತವಾಗಿದೆ ಹಾಗೂ ಅದರ ಯೋಚನಾ ರೀತಿ ತುಂಬಾ ಸ್ಪಷ್ಟವಾಗಿದೆ. ಮೈಕ್ ಹಸ್ಸನ್ ಅವರ ನೇತೃತ್ವದ ಸಪೋರ್ಟ್ ಸ್ಟಾಫ್‌ಗಳ ತಂಡ ಅದ್ಭುತವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ಅದು ಅಂಗಳದಲ್ಲಿ ಪ್ರದರ್ಶನದ ಮೂಲಕ ವ್ಯಕ್ತವಾಗುತ್ತಿದೆ ಎಂದು ಓಜಾ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್ 2020: ಕ್ರಿಸ್ ಗೇಲ್ ಕಾಲೆಳೆದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್

ಆರ್‌ಸಿಬಿ ಬುಧವಾರದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸುತ್ತಿದ್ದು ಈ ಟೂರ್ನಿಯ ಮೊದಲ ಸುತ್ತಿನ ಕಾದಾಟದಲ್ಲಿ ಕೆಕೆಆರ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿತ್ತು. ಬುಧವಾರದ ಪಂದ್ಯದಲ್ಲಿ ಗೆದ್ದು ಎರಡು ಅಂಕಗಳನ್ನು ಖಾತೆಗೆ ಸೇರಿಸಿಕೊಂಡರೆ 2016ರ ಬಳಿಕ ಮೊದಲ ಬಾರಿಗೆ ಪ್ಲೇ ಆಫ್ ಹಂತಕ್ಕೇರುವ ಕನಸನ್ನು ಮತ್ತಷ್ಟು ಹತ್ತಿರವಾಗಿರಲಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, October 21, 2020, 17:02 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X