ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಬೈಲಿನಲ್ಲಿ ಐಪಿಎಲ್ ಲೈವ್ ನೋಡುತ್ತಿದ್ದ ಕಾನ್ಸ್ ಟೇಬಲ್ ಸಾವು

IPL Tragedy: Odisha Police Constable Dies Watching Match

ಇಂಡಿಯನ್ ಪ್ರೀಮಿಯರ್ ಲೀಗ್ ದೇಶದ ಮೂಲೆ ಮೂಲೆಗಳಲ್ಲೂ ಅಭಿಮಾನಿಗಳನ್ನು ಹುಟ್ಟು ಹಾಕಿದೆ. ಕೇರಳದ ತೋಟವೊಂದರಲ್ಲಿ ಎಂಎಸ್ ಧೋನಿ ಅಭಿಮಾನಿಯೊಬ್ಬ ಹತ್ತಾರು ಅಡಿ ಕಟೌಟ್ ಹಾಕಿ ಅಭಿಮಾನ ತೋರಿಸಿದ ಸುದ್ದಿ ಬಂದಿತ್ತು. ಎಲ್ಲಾ ವರ್ಗದ ಅಭಿಮಾನಿಗಳಲ್ಲೂ ಲೈವ್ ಮ್ಯಾಚ್ ನೋಡುವ ಜೋಶ್ ಇದ್ದೇ ಇರುತ್ತದೆ.

ಕೊರೊನಾವೈರಸ್‌ನಿಂದಾಗಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಯುಎಇಯಲ್ಲಿ ಪಂದ್ಯಗಳನ್ನಾಡಲಾಗುತ್ತಿದೆ. ಸ್ಟಾರ್ ಸ್ಪೋರ್ಟ್ ನಲ್ಲಿ ವಿವಿಧ ಭಾರತೀಯ ಭಾಷೆಗಳಲ್ಲಿ ಪಂದ್ಯಗಳನ್ನು ನೋಡುವುದಲ್ಲದೆ ಮೊಬೈಲ್ ಆಪ್ ಹಾಟ್ ಸ್ಟಾರ್ ಬಳಸಿ ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗೆ ಹಾಟ್ ಸ್ಟಾರ್ ನಲ್ಲಿ ಲೈವ್ ಪಂದ್ಯ ನೋಡುತ್ತಿದ್ದ ಅಭಿಮಾನಿಯೊಬ್ಬ ಮೃತ ಪಟ್ಟ ಘಟನೆ ಒಡಿಶಾದ ರಾಯಗಡ್ ಜಿಲ್ಲೆಯ ಚಂಡಿ ಪ್ರದೇಶದಲ್ಲಿ ನಡೆದಿದೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಮೃತಪಟ್ಟ ಅಭಿಮಾನಿಯನ್ನು ಯೋಗೇಶ್ವರ್ ದಾಸ್(27) ಎಂದು ಗುರುತಿಸಲಾಗಿದೆ. ಒಡಿಶಾ ವಿಶೇಷ ಸಶಸ್ತ್ರ ಪಡೆ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂರು ಮಹಡಿಯ ಕಟ್ಟಡದ ತುದಿಯಲ್ಲಿ ಪಂದ್ಯ ನೋಡುತ್ತಿದ್ದ ದಾಸ್, ಪಂದ್ಯದಲ್ಲಿ ತನ್ನ ನೆಚ್ಚಿನ ತಂಡದ ಕಳಪೆ ಪ್ರದರ್ಶನ ಕಂಡು ಕೋಪಗೊಂಡಿದ್ದಾರೆ.

ಈ ಸಮಯದಲ್ಲಿ ಸಮತೋಲನ ಕಳೆದುಕೊಂಡು ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಯೋಗೇಶ್ವರ್ ದಾಸ್ ಅವರನ್ನು ಅವರ ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅವರು ಮೃತಪಟ್ಟಿದ್ದಾರೆ.

ಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿ

2013 ರಲ್ಲಿ ಒಡಿಶಾ ವಿಶೇಷ ಸಶಸ್ತ್ರ ಪೊಲೀಸ್ ಪಡೆ (ಒಎಸ್ಎಪಿ) 3 ನೇ ಬೆಟಾಲಿಯನ್‌ಗೆ ಸೇರಿದ್ದ ದಾಸ್, ಐದು ತಿಂಗಳ ಹಿಂದೆ ಅವರನ್ನು ರಾಯಗಡ್ ಜಿಲ್ಲೆಗೆ ವರ್ಗಾಯಿಸಲಾಗಿತ್ತು.

Story first published: Friday, October 9, 2020, 10:12 [IST]
Other articles published on Oct 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X