ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!

IPL UAE leg: Aakash Chopra gives six suggestion to teams

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಆವೃತ್ತಿ ಇನ್ನೇನು ಶರುವಾಗಲಿದೆ. ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 15ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಯಲ್ಲಿ ಐಪಿಎಲ್ ಎರಡನೇ ಹಂತದ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಕಾದಾಡಲಿವೆ.

ಟಿ20 ವಿಶ್ವಕಪ್ 2021: ಎಲ್ಲಾ ತಂಡಗಳು, ವೇಳಾಪಟ್ಟಿ, ಸಂಪೂರ್ಣ ಮಾಹಿತಿಟಿ20 ವಿಶ್ವಕಪ್ 2021: ಎಲ್ಲಾ ತಂಡಗಳು, ವೇಳಾಪಟ್ಟಿ, ಸಂಪೂರ್ಣ ಮಾಹಿತಿ

ಭಾರತದಲ್ಲಿ ಆರಂಭಗೊಂಡಿದ್ದ ಐಪಿಎಲ್ ಟೂರ್ನಿ ಕೋವಿಡ್-19 ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಆರಂಭಿಕ ಹಂತದಲ್ಲಿ 29 ಪಂದ್ಯಗಳು ನಡೆದಿದ್ದವು. ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಪಂದ್ಯಗಳು ಆರಂಭವಾಗುವುದಕ್ಕೂ ಮುನ್ನ ಭಾರತದ ಮಾಜಿ ಬ್ಯಾಟ್ಸ್‌ಮನ್‌, ಕಾಮೆಂಟೇಟರ್ ಆಕಾಶ ಚೋಪ್ರಾ ಐಪಿಎಲ್ ತಂಡಗಳಿಗೆ ಕುತೂಹಲಕಾರಿ ಸಲಹೆಗಳನ್ನು ನೀಡಿದ್ದಾರೆ.

1. ಸ್ಪಿನ್ನರ್‌ಗಳಾ or ವೇಗಿಗಳಾ?

1. ಸ್ಪಿನ್ನರ್‌ಗಳಾ or ವೇಗಿಗಳಾ?

ಇಂಡಿಯನ್ ಪ್ರೀಮಿಯರ್ ಲೀಗ್‌ ದ್ವಿತೀಯ ಹಂತದಲ್ಲಿ ಪಂದ್ಯಗಳನ್ನು ಗೆಲ್ಲಬೇಕಾದರೆ ಐಪಿಎಲ್ ತಂಡಗಳಿಗೆ ಆಕಾಶ್ ಚೋಪ್ರಾ ನೀಡಿರುವ ಮೊದಲನೇ ಸಲಹೆಯೆಂದರೆ ತಂಡಗಳು ಹೆಚ್ಚಾಗಿ ವೇಗಿಗಳನ್ನು ಆಡಿಸಬೇಕು. ಮಧ್ಯಮ ವೇಗಿಗಳನ್ನು ಆಡಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರ್ಷಲ್ ಪಟೇಲ್ ಅವರನ್ನು ಆಡಿಸಬಾರದು. ನವದೀಪ್ ಸೈನಿ, ಮೊಹಮ್ಮದ್ ಸಿರಾಜ್ ಅಂಥವರನ್ನು ಆಡಿಸಬೇಕು. 137-140 kph ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್‌ಗಳನ್ನು ತಂಡಗಳು ಆಡಿಸಬೇಕು. "ಮಧ್ಯಮ ವೇಗಿಗಳನ್ನು ಆಡಿಸಬೇಡಿ. 140 kphಗೂ ಹೆಚ್ಚಿರುವ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಬಲ್ಲರು. ಇದರರ್ಥ ಏನಂದರೆ ಯುಎಇ ಪಿಚ್‌ಗಳು ವೇಗದ ಬೌಲಿಂಗ್‌ಗೆ ಹೆಚ್ಚು ಅನುಕೂಲಕಾರಿ. ಹೀಗಾಗಿ ಹರ್ಷಲ್ ಪಟೇಲ್ ಅವರಂಥವರನ್ನು ಆಡಿಸುವ ಬದಲು ನವದೀಪ್ ಸೈನಿ, ಮೊಹಮ್ಮದ್ ಸಿರಾಜ್ ಅವರಂಥವರನ್ನು ಆಡಿಸಿ," ಎಂದಿದ್ದಾರೆ.

2. ಟಾಸ್ ಗೆದ್ದರೆ ಬ್ಯಾಟಿಂಗ್‌ or ಬೌಲಿಂಗ್?

2. ಟಾಸ್ ಗೆದ್ದರೆ ಬ್ಯಾಟಿಂಗ್‌ or ಬೌಲಿಂಗ್?

ಯೂ ಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ ನೀಡಿರುವ ಎರಡನೇ ಸಲಹೆಯೆಂದರೆ ಟಾಸ್ ಗೆಲ್ಲುವ ತಂಡಗಳು ಚೇಸಿಂಗ್‌ ಆರಿಸುವ ಬದಲು ಬ್ಯಾಟಿಂಗ್‌ ಆರಿಸಬೇಕು. 2020ರ ಸೀಸನ್‌ನ ವೇಳೆಯೂ ಬಹುತೇಕ ತಂಡಗಳು ಚೇಸಿಂಗ್‌ ಆರಿಸಿ ವಿಫಲವಾಗಿದ್ದವು. ಹೀಗಾಗಿ ಯುಎಇಯಲ್ಲಿ ಚೇಸಿಂಗ್ ಮಂತ್ರ ಫಲಿಸಲ್ಲ ಎಂದು ಚೋಪ್ರಾ ಹೇಳಿದ್ದಾರೆ. ಕಳೆದ ಸೀಸನ್‌ಗೆ ಹೋಲಿಸಿದರೆ ಚೋಪ್ರಾ ಹೇಳಿರುವ ಮಾತುಗಳು ಬಹುತೇಕ ನಿಜ. ಚೇಸಿಂಗ್‌ ಆಯ್ಕೆ ಮಾಡಿದ ತಂಡಗಳು ಅಂಥದ್ದೇನೂ ಯಶಸ್ಸು ಕಂಡಿರಲಿಲ್ಲ.

3. ಎಂಥ ಸ್ಪಿನ್ನರ್‌ಗಳು ಪರಿಣಾಮಕಾರಿ?

3. ಎಂಥ ಸ್ಪಿನ್ನರ್‌ಗಳು ಪರಿಣಾಮಕಾರಿ?

ಐಪಿಎಲ್ ದ್ವಿತೀಯ ಹಂತದ ವೇಳೆ ಎಂಥಹ ಸ್ಪಿನ್ನರ್‌ಗಳನ್ನು ಆಡಿಸಬೇಕೆನ್ನುವ ಬಗ್ಗೆಯೂ ಚೋಪ್ರಾ ಸಲಹೆ ನೀಡಿದ್ದಾರೆ. ತ್ವರಿತವಾಗಿ ಸ್ಪಿನ್ ಮಾಡುವ, ಅಂದರೆ ರಶೀದ್ ಖಾನ್ ಅಥವಾ ವರುಣ್ ಚಕ್ರವರ್ತಿ ಅಂಥ ಸ್ಪಿನ್ನರ್‌ಗಳನ್ನು ಆಡಿಸಬೇಕು ಎಂದು ಚೋಪ್ರಾ ಹೇಳಿದ್ದಾರೆ. ರಶೀದ್ ಖಾನ್, ವರುಣ್ ಚಕ್ರವರ್ತಿ ಅಂಥವರು ಮಾತ್ರ ತಂಡಕ್ಕೆ ಬಲ ತುಂಬಬಲ್ಲರು. ಸಾಮಾನ್ಯ ಸ್ಪಿನ್ನರ್ ಎದುರಾಳಿಗೆ ಹೆಚ್ಚು ರನ್‌ ನೀಡುವ ಸಾಧ್ಯತೆಗಳಿರುತ್ತವೆ ಎಂದು ಚೋಪ್ರಾ ಎಚ್ಚರಿಸಿದ್ದಾರೆ.

4. ಯಾರು ಆರಂಭಿಕರಾಗಿ ಆಡಬೇಕು?

4. ಯಾರು ಆರಂಭಿಕರಾಗಿ ಆಡಬೇಕು?

ಚೋಪ್ರಾ ನೀಡಿರುವ ನಾಲ್ಕನೇ ಸಲಹೆಯೆಂದರೆ ಸರಿಯಾದ ಆರಂಭಿಕ ಆಟಗಾರರನ್ನು ಆಡಿಸಬೇಕು. ಅಂದರೆ ಹೊಡಿಬಡಿ ದಾಂಡಿಗರನ್ನು ಆರಂಭಿಕರಾಗಿ ಆಡಿಸುವುದಕ್ಕಿಂತ ಎಚ್ಚರಿಕೆಯಿಂದ ಆಡುವ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಆರಂಭಿಕರಾಗಿ ಆಡಿಸಿ ಎಂದು ಚೋಪ್ರಾ ಹೇಳಿದ್ದಾರೆ. "ನನ್ನ ನಾಲ್ಕನೇ ಸಲಹೆಯೆಂದರೆ, ಸರಿಯಾದ ಸರಿಯಾದ ಆರಂಭಿಕ ಆಟಗಾರರನ್ನು ಆಡಿಸಿ. ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಆರಂಭಿಕರಾಗಿ ಆಡಿಸಿ ಹೊಸದೊಂದು ಪ್ರಯತ್ನ ಮಾಡಬಹುದು ಎಂದು ನೀವಂದುಕೊಳ್ಳಬಹುದು. ಆದರೆ ಹಾಗೆ ಮಾಡಲು ಹೋಗಬೇಡಿ. ಇಂಥ ಪರಿಸ್ಥಿತಿಯಲ್ಲಿ ಸರಿಯಾದ ಕೌಶಲಗಳುಳ್ಳ ಸರಿಯಾದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಬೇಕು," ಎಂದು ಚೋಪ್ರಾ ಹೇಳಿದ್ದಾರೆ.

T20 World cup ನಲ್ಲಿ ಭಾರತವನ್ನು ಸೋಲಿಸೋಕೆ ಪಾಕಿಸ್ತಾನದ ಪ್ಲ್ಯಾನ್ ಏನು? | Oneindia Kannada
5. ಬಲಗೈ ಅಥವಾ ಎಡಗೈ ಆಟಗಾರರು?

5. ಬಲಗೈ ಅಥವಾ ಎಡಗೈ ಆಟಗಾರರು?

ಚೋಪ್ರಾ ನೀಡಿರುವ ಐದನೇ ಸಲಹೆಯೆಂದರೆ ಪಂದ್ಯದಲ್ಲಿ ಆಡಿಸುವಾಗ ಎಡಗೈ ಆಟಗಾರರನ್ನು ಹೆಚ್ಚು ಪರಿಗಣಿಸಬೇಕು. ಚೋಪ್ರಾ ವಿಶ್ಲೇಷಣೆ ಮಾಡಿದಂತೆ ಕಳೆದ 30 ಪಂದ್ಯಗಳಲ್ಲಿ ಎಡಗೈ ಆಟಗಾರರು ಪಂದ್ಯದ ಗೆಲುವಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದಾರೆ. ಹೀಗಾಗಿ ಎಡಗೈ ಆಟಗಾರರಿಗೆ ಹೆಚ್ಚು ಅವಕಾಶ ನೀಡಲು ಚೋಪ್ರಾ ಹೇಳಿದ್ದಾರೆ. ಜೊತೆಗೆ ಬ್ಯಾಟಿಂಗ್‌ ಮಾಡುವ ತಂಡ 180ಕ್ಕೂ ಹೆಚ್ಚು ಸ್ಕೋರ್ ಮಾಡಲು ಪ್ರಯತ್ನಿಸಲು ಸಲಹೆ ನೀಡಿದ್ದಾರೆ. ಏನಿಲ್ಲವೆಂದರೂ 170-175 ರನ್ ಗಳಿಸಿದರೂ ಎದುರಾಳಿ ತಂಡಕ್ಕೆ ಆ ಟೋಟಲ್ ಚೇಸ್ ಮಾಡೋದು ಸುಲಭವಿಲ್ಲ ಎಂದು ಚೋಪ್ರಾ ಅಭಿಪ್ರಾಯಿಸಿದ್ದಾರೆ.

Story first published: Thursday, September 16, 2021, 13:10 [IST]
Other articles published on Sep 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X