ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 13: ಲಾಕ್ ಡೌನ್ ನಲ್ಲಿ ಚೆನ್ನಾಗಿ ಉಂಡು ದಷ್ಟಪುಷ್ಟವಾಗಿರುವ ಆಟಗಾರರ ಪಟ್ಟಿ

ಹಲವು ಅಡೆತಡೆಗಳ ನಂತರ ಐಪಿಎಲ್ ಹದಿಮೂರನೇ ಆವೃತ್ತಿ ಗಲ್ಫ್ ರಾಷ್ಟ್ರದ ಅಬುಧಾಬಿಯಲ್ಲಿ ಆರಂಭವಾಗಿದೆ. ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಚೆನ್ನೈ ಸೂಪರ್ ಕಿಂಗ್ ನಡುವೆ ಪಂದ್ಯ ನಡೆಯುತ್ತಿದೆ.

ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ಇಲ್ಲದೇ ಇರುವುದರಿಂದ, ಚಿಯರ್ ಗರ್ಲ್ಸ್ ಗಳ ಡ್ಯಾನ್ಸ್, ಪ್ರೇಕ್ಷಕರ ಉದ್ಘಾರ ಎಲ್ಲಾ ಆರ್ಟಿಫಿಷಿಯಲ್. ಇವೆಲ್ಲಕ್ಕಿಂತ ಗಮನಿಸಬೇಕಾದ ಅಂಶವೇನಂದರೆ, ಹೆಚ್ಚಿನ ಆಟಗಾರರು ತೂಕ ಹೆಚ್ಚಿಸಿಕೊಂಡಿರುವುದು.

ಐಪಿಎಲ್: ಕೊಹ್ಲಿ ದಾಖಲೆ ಮುರಿಯುವ ಅವಕಾಶ ತಪ್ಪಿಸಿಕೊಂಡ ರೋಹಿತ್ಐಪಿಎಲ್: ಕೊಹ್ಲಿ ದಾಖಲೆ ಮುರಿಯುವ ಅವಕಾಶ ತಪ್ಪಿಸಿಕೊಂಡ ರೋಹಿತ್

ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್ ತಂಡಗಳು ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿವೆ. ಭಾರತ ಸೇರಿದಂತೆ ಹಲವು ದೇಶಗಳು ಮೈದಾನಕ್ಕಿಳಿಯದೇ ಹಲವು ತಿಂಗಳೇ ಕಳೆದು ಹೋಗಿವೆ.

ಈಗ, ಕೆಲವು ದೇಶಗಳ ಆಟಗಾರರನ್ನು ಹೊರತು ಪಡಿಸಿ, ಬಹುತೇಕ ಹೆಚ್ಚಿನ ದೇಶದ ಆಟಗಾರರು ಭಾಗವಹಿಸುವ ಐಪಿಎಲ್ ಆರಂಭವಾಗಿದೆ. 53ದಿನಗಳ ಕಾಲ ನಡೆಯುವ ಅತಿದೊಡ್ಡ ಟೂರ್ನಿಯಲ್ಲಿ ಎಂಟು ತಂಡದ ಆಟಗಾರರು ಬೆವರಿಳಿಸಬೇಕಿದೆ. ತೂಕ ಹೆಚ್ಚಿಸಿಕೊಂಡಿರುವ ಎರಡು ತಂಡದ ಆಟಗಾರರು:

ಐಪಿಎಲ್ 2020: ಬೇರೆ ಬೇರೆ ತಂಡಗಳಲ್ಲಿರುವ ಕನ್ನಡಿಗರ ಸಂಪೂರ್ಣ ಪಟ್ಟಿಐಪಿಎಲ್ 2020: ಬೇರೆ ಬೇರೆ ತಂಡಗಳಲ್ಲಿರುವ ಕನ್ನಡಿಗರ ಸಂಪೂರ್ಣ ಪಟ್ಟಿ

ಅಬುಧಾಬಿಯ ಶೇಖ್ ಜುಯೇದ್ ಕ್ರೀಡಾಂಗಣ

ಅಬುಧಾಬಿಯ ಶೇಖ್ ಜುಯೇದ್ ಕ್ರೀಡಾಂಗಣ

ಯುಎಇ ದೇಶದ ಕಡಲ ನಗರಿ ಅಬುಧಾಬಿಯ ಶೇಖ್ ಝುಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ, ಟಿ20 ಪಂದ್ಯಕ್ಕೆ ಕಮ್ಮಿ ಎನ್ನಬಹುದಾದ ಮೊತ್ತವನ್ನು ಪೇರಿಸಿದರೂ, ಸಿಎಸ್ಕೆ ಆರಂಭಕ ಪತನವನ್ನು ಎದುರಿಸಿದೆ.

ಹನ್ನೆರಡನೇ ಆವೃತ್ತಿಯ ಫೈನಲ್

ಹನ್ನೆರಡನೇ ಆವೃತ್ತಿಯ ಫೈನಲ್

ಹನ್ನೆರಡನೇ ಆವೃತ್ತಿಯ ಫೈನಲ್ ನಲ್ಲಿ ಕೇವಲ ಒಂದು ರನ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನು ಸೋತಿತ್ತು. ಈ ಐಪಿಎಲ್ ನಲ್ಲಿ ಬಲಿಷ್ಠ ತಂಡವಾಗಿರುವ ಈ ಎರಡೂ ತಂಡಗಳು, ಟೂರ್ನಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಎರಡೂ ತಂಡಗಳಲ್ಲಿ ತೂಕ ಹೆಚ್ಚಿಸಿರುವ ಆಟಗಾರರು ಬಹಳಷ್ಟು ಇದ್ದಾರೆ.

ಟ್ರೆಂಟ್ ಬೋಲ್ಟ್

ಟ್ರೆಂಟ್ ಬೋಲ್ಟ್

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಲವು ವಿದೇಶಿ ಆಟಗಾರರು ತಮ್ಮ ತೂಕವನ್ನು ಮೈಂಟೇನ್ ಮಾಡಿಕೊಂಡಿದ್ದಾರೆ. ಸಿಎಸ್ಕೆ ತಂಡದ ಡು ಪ್ಲೆಸಿಸ್, ಲುಂಗಿ ಎಂಗಿಡಿ, ಮುರಳಿ ವಿಜಯ್, ಇನ್ನು ಮುಂಬೈ ಇಂಡಿಯನ್ಸ್ ತಂಡದ ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಟ್ರೆಂಟ್ ಬೋಲ್ಟ್ ಮುಂತಾದವರ ತೂಕದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ.

ಇನ್ನು ಎರಡೂ ತಂಡದಲ್ಲಿ ತೂಕ ಹೆಚ್ಚಿಸಿಕೊಂಡ ಆಟಗಾರರು:

ಇನ್ನು ಎರಡೂ ತಂಡದಲ್ಲಿ ತೂಕ ಹೆಚ್ಚಿಸಿಕೊಂಡ ಆಟಗಾರರು:

ಎಂ.ಎಸ್.ಧೋನಿ (ಸಿಎಸ್ಕೆ)
ಶೇನ್ ವಾಟ್ಸನ್ (ಸಿಎಸ್ಕೆ)
ಪಿಯೂಶ್ ಚಾವ್ಲಾ (ಸಿಎಸ್ಕೆ)
ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್)
ಕೆವಿನ್ ಪೊಲಾರ್ಡ್ (ಮುಂಬೈ ಇಂಡಿಯನ್ಸ್)
ಹಾರ್ದಿಕ್ ಪಾಂಡ್ಯ (ಮುಂಬೈ ಇಂಡಿಯನ್ಸ್)
ಜಸಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್)
ಸೌರಭ್ ತಿವಾರಿ (ಮುಂಬೈ ಇಂಡಿಯನ್ಸ್)
ಪ್ಯಾಟಿನ್ಸನ್ (ಸಿಎಸ್ಕೆ)

Story first published: Saturday, September 19, 2020, 23:02 [IST]
Other articles published on Sep 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X