ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಬೇಲ್ಸ್ ಹಿಡಿದು ಹರಾಜುಕೂಗಿದ ವ್ಯಕ್ತಿಯ ಹಿಂದಿನ ಕುತೂಹಲಕಾರಿ ಮಾಹಿತಿ

IPL 2020: Story Behind IPL Auctioneer

13 ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈಗ ಎಲ್ಲರ ಕಣ್ಣೂ ಪಂದ್ಯಾವಳಿಯತ್ತ ನೆಟ್ಟಿದೆ. ಅಭಿಮಾನಿಗಳು ಕ್ರಿಕೆಟ್‌ ಪಂದ್ಯದಷ್ಟೇ ಕುತೂಹಲದಿಂದ ಈ ಹರಾಜನ್ನು ವೀಕ್ಷಿಸಿದ್ದಾರೆ. ಇಂತಾ ಬಿಸಿಬಿಸಿ ಹರಾಜು ಪ್ರಕ್ರಿಯೆ ನಡೆಸಿಕೊಟ್ಟಿರೋದು 61 ವರ್ಷದ ವ್ಯಕ್ತಿ. ಆದರೆ ಯಾರವರು?

ಆ ವ್ಯಕ್ತಿಯ ಹೆಸರು ಹಗ್ ಎಡ್ಮೆಂಡ್. ಇಂತಾ ಹರಾಜು ಪ್ರಕ್ರಿಯೆಗೆ ಎಡ್ಮೆಂಡ್ ವಿಶ್ವವಿಖ್ಯಾತಿಯನ್ನು ಹೊಂದಿದ್ದಾರೆ. ಕಳೆದ ವರ್ಷ ಅಂದರೆ 12ನೇ ಆವೃತ್ತಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮೊದಲ ಬಾರಿಗೆ ಹಗ್ ಎಡ್ಮೆಂಡ್ ಪಾಲ್ಗೊಂಡಿದ್ದರು.

ಈ ಹಿಂದೆ ರಿಚರ್ಡ್ ಮ್ಯಾಡ್ಲೆ ಅವರು ಸುಮಾರು 10 ವರ್ಷಗಳಿಂದಲೂ ಐಪಿಎಲ್ ಹರಾಜು ನಡೆಸಿದ ಖ್ಯಾತಿಯಿದ್ದವರು. ಆದರೆ ಕಳೆದ ಬಾರಿ ಬಿಸಿಸಿಐ, ಹರಾಜುದಾರರಾಗಿ ಮ್ಯಾಡ್ಲೆ ಬದಲಿಗೆ ಎಡ್ಮೆಂಡ್ ಅವರನ್ನು ಹೆಸರಿಸಿತ್ತು. ಈ ಬದಲಾವಣೆ ಕ್ರಿಕೆಟ್‌ ಬಗ್ಗೆ ಅರಿವಿರುವ ಹಲವಾರು ಮಂದಿಗೆ ಅಚ್ಚರಿ ಮೂಡಿಸಿತ್ತು.

ಎಡ್ಮಂಡ್ ಕ್ರಿಕೆಟ್ ಲೋಕಕ್ಕೆ ಅಷ್ಟೇನು ಪರಿಚಿತರಲ್ಲದಿರಬಹುದು. ಆದರೆ ಹರಾಜು ಪ್ರಕ್ರಿಯೆಯಲ್ಲಿ ಇವರದ್ದು ಎತ್ತಿದ ಕೈ. ಈ ವಿಚಾರವಾಗಿ ತನ್ನದೇ ಆದರೆ ಛಾಪು ಮೂಡಿಸಿದ್ದಾರೆ. ಹಗ್ ಎಡ್ಮೆಂಡ್ ಅವರ ಕುರಿತಾದ ಕುತೂಹಲಕಾರಿ ವಿಚಾರಗಳು ನಿಮ್ಮ ಮುಂದೆ.

ನಾಲ್ಕು ದಶಕದಿಂದ ಹರಾಜು ಪ್ರಕ್ರಿಯೆ

ನಾಲ್ಕು ದಶಕದಿಂದ ಹರಾಜು ಪ್ರಕ್ರಿಯೆ

ಎಡ್ಮಂಡ್ ಹಗ್ ಮೊದಲಬಾರಿಗೆ ಹರಾಜು ನಡೆಸಿಕೊಟ್ಟಿದ್ದು 1984 ರಲ್ಲಿ. ಕಳೆದ ನಾಲ್ಕು ದಶಕಗಳಲ್ಲಿ ಹರಾಜು ಪ್ರಕ್ರಿಯೆಗಳನ್ನು ನಿರಂತರವಾಗಿ ನಡೆಸಿಕೊಡುತ್ತಿದ್ದಾರೆ. 'ಕ್ರಿಸ್ಟಿ' ಎಂಬ ಹರಾಜು ಕಂಪನಿಯಲ್ಲಿ 38 ವರ್ಷ ಕಾರ್ಯ ನಿರ್ವಹಿಸಿ ಇದೀಗ ಸ್ವತಂತ್ರವಾಗಿ ಜಗತ್ತಿನಾದ್ಯಂತ ಹರಾಜು ನಡೆಸಿಕೊಡುತ್ತಿದ್ದಾರೆ.

ಕ್ರಿಕೆಟ್‌ಗೆ ಸಂಬಂಧಿಸಿದ ವ್ಯಕ್ತಿಯಲ್ಲ ಹಗ್

ಕ್ರಿಕೆಟ್‌ಗೆ ಸಂಬಂಧಿಸಿದ ವ್ಯಕ್ತಿಯಲ್ಲ ಹಗ್

ಕ್ರಿಕೆಟ್‌ಗೆ ಸಂಬಂಧಿಸಿದವರಲ್ಲ ಹಗ್ ಎಡ್ಮೆಡ್ಸ್ ಅವರು ಕ್ರಿಕೆಟ್‌ಗೆ ಸಂಬಂಧಿಸಿದ ವ್ಯಕ್ತಿಯಲ್ಲ. ಆದರೆ 1987ರಲ್ಲಿ ಲಾರ್ಡ್‌ನಲ್ಲಿ ಮೊದಲ ಬಾರಿಗೆ ಕ್ರಿಕೆಟ್‌ಗೆ ಸಂಬಂಧಿಸಿದ ಹರಾಜನ್ನು ನಡೆಸಿಕೊಟ್ಟಿದ್ದಾರೆ.ಆ ಹರಾಜು ಪ್ರಕ್ರಿಯೆ 12 ಗಂಟೆಗಳ ಕಾಳ ನಡೆದಿತ್ತು ಎಂದು ಹಗ್ ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖ ಆಟಗಾರರು ಪಾಲ್ಗೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಹರಾಜಿನಲ್ಲೇ ವಿಶ್ವವಿಖ್ಯಾತಿ

ಹರಾಜಿನಲ್ಲೇ ವಿಶ್ವವಿಖ್ಯಾತಿ

ದಾಖಲೆ ಹರಾಜು 30 ವರ್ಷಗಳ ಸುದೀರ್ಘ ಕಾಲ ಹರಾಜುಗಾರನಾಗಿ ದುಡಿದ ಎಡ್ಮೆಡ್ಸ್ ಸುಮಾರು 2,500 ಹರಾಜು ಪ್ರಕ್ರಿಯೆಗಳನ್ನು ನಡೆಸಿಕೊಟ್ಟಿದ್ದಾರೆ. ಈ ವೇಳೆ 2.7 ಬಿಲಿಯನ್ ಪೌಂಡ್ಸ್ ಗೆ ಹರಾಜು ನಡೆಸಿದ್ದು ವಿಶ್ವದ ಅತ್ಯಧಿಕ ಮೊತ್ತವಾಗಿ ಗುರುತಿಸಿಕೊಂಡಿದೆ.

ಮ್ಯಾಡ್ಲಿ ಸ್ಥಾನಕ್ಕೆ ಬಂದ ಹಗ್

ಮ್ಯಾಡ್ಲಿ ಸ್ಥಾನಕ್ಕೆ ಬಂದ ಹಗ್

ಈ ಹಿಂದೆ ರಿಚರ್ಡ್ ಮ್ಯಾಡ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡುತ್ತಿದ್ದರು. ಆದರೆ ಕಳೆದ ಬಾರಿ ಮ್ಯಾಡ್ಲಿ ಅವರೊಂದಿಗಿನ ಒಪ್ಪಂದವನ್ನು ಬಿಸಿಸಿಐ ಅಂತ್ಯಗೊಳಿಸಿ ಹಗ್ ಎಡ್ಮಂಡ್ ಅವರನ್ನು ಹರಾಜುಗಾರನಾಗಿ ನೇಮಕ ಮಾಡಿತ್ತು.

Story first published: Friday, December 20, 2019, 13:39 [IST]
Other articles published on Dec 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X