ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಕ್ಬಾಲ್-ಸರ್ಕಾರ್ ಆರ್ಭಟ, ವಿಂಡೀಸ್ ವಿರುದ್ಧ ಏಕದಿನ ಸರಣಿ ಗೆದ್ದ ಬಾಂಗ್ಲಾ

Iqbal, Sarkar shine as Bangladesh cruise to series win over Windies

ಸಿಲ್ಹೆಟ್, ಡಿಸೆಂಬರ್ 14: ಬಾಂಗ್ಲಾದೇಶದ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಡಿಸೆಂಬರ್ 14) ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆತಿಥೇಯ ಬ್ಲಾಂಗ್ಲಾದೇಶ 8 ವಿಕೆಟ್ ಜಯ ಗಳಿಸಿದೆ. ಇದರೊಂದಿಗೆ ಬಾಂಗ್ಲಾ ಮೂರು ಪಂದ್ಯಗಳ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ.

'ಚಮತ್ಕಾರಿಕ ಕ್ಯಾಚ್‌'ನಿಂದ ಹ್ಯಾಂಡ್ಸ್‌ಕಾಂಬ್ ಪೆವಿಲಿಯನ್‌ಗಟ್ಟಿದ ವಿರಾಟ್ ಕೊಹ್ಲಿ!'ಚಮತ್ಕಾರಿಕ ಕ್ಯಾಚ್‌'ನಿಂದ ಹ್ಯಾಂಡ್ಸ್‌ಕಾಂಬ್ ಪೆವಿಲಿಯನ್‌ಗಟ್ಟಿದ ವಿರಾಟ್ ಕೊಹ್ಲಿ!

ಬಾಂಗ್ಲಾದೇಶ ಪರ ತಮೀಮ್ ಇಕ್ಬಾಲ್ ಮತ್ತು ಸೌಮ್ಯ ಸರ್ಕಾರ್ ಅರ್ಧ ಶತಕ ಬಾರಿಸಿ ತಂಡದ ಗೆಲುವಿನ ರುವಾರಿಗಳೆನಿಸಿದರೆ, ವಿಂಡೀಸ್ ಪರ ಶೈ ಹೋಪ್‌ ಅವರ ಶತಕದ ಏಕಾಂಗಿ ಹೋರಾಟ ವ್ಯರ್ಥವೆನಿಸಿತು. ವಿಂಡೀಸ್ ತಂಡ ಬ್ಯಾಟಿಂಗ್‌ ದೌರ್ಬಲ್ಯಕ್ಕೆ ಬೆಲೆ ತೆರಬೇಕಾಯ್ತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ಪರ ಹೋಪ್ ಒಬ್ಬರೇ ತಂಡದ ಹೋಪ್‌ ಕಾದವರು. ಕ್ರೀಸ್‌ಗೆ ಅಂಟಿ ನಿಂತ ಹೋಪ್ ಅಜೇಯ 108 ರನ್ ಬಾರಿಸಿದರಾದರೂ ಉಳಿದ ಆಟಗಾರರ ಬೆಂಬಲವಿಲ್ಲದೆ ತಂಡಕ್ಕೆ ಫಲಿತಾಂಶವನ್ನು ತಂದುಕೊಡಲಾಗಲಿಲ್ಲ. ವಿಂಡೀಸ್ 50 ಓವರ್‌ನಲ್ಲಿ 9 ವಿಕೆಟ್ ಕಳೆದು 198 ರನ್ ಪೇರಿಸಿತು.

ರಣಜಿ ಕ್ರಿಕೆಟ್: ಗುಜರಾತ್ ವಿರುದ್ಧ ಕರ್ನಾಟಕಕ್ಕೆ ಆರಂಭಿಕ ಆಘಾತರಣಜಿ ಕ್ರಿಕೆಟ್: ಗುಜರಾತ್ ವಿರುದ್ಧ ಕರ್ನಾಟಕಕ್ಕೆ ಆರಂಭಿಕ ಆಘಾತ

ವಿಂಡೀಸ್ ಇನ್ನಿಂಗ್ಸ್ ವೇಳೆ ಬಾಂಗ್ಲಾದಿಂದ ಮೆಹಿದಿ ಹಸನ್ ಬೌಲಿಂಗ್ ದಾಳಿ ನಡೆಸಿ 29 ರನ್‌ಗೆ 4 ವಿಕೆಟ್ ಕೆಡವಿದರು. ಬಾಂಗ್ಲಾ ಇನ್ನಿಂಗ್ಸ್ ವೇಳೆ ಇಕ್ಬಾಲ್ 81, ಸರ್ಕಾರ್ 80 ರನ್ ಗಳಿಸಿದ್ದು ತಂಡಕ್ಕೆ ಪ್ಲಸ್ಸಾಗಿ ಪರಿಣಮಿಸಿತು. ಬಾಂಗ್ಲಾ 38.3 ಓವರ್‌ನಲ್ಲಿ 2 ವಿಕೆಟ್ ಕಳೆದು 202 ರನ್ ಗಳಿಸಿತು. ಮೆಹಿದಿ ಹಸನ್ ಪಂದ್ಯಶ್ರೇಷ್ಠರೆನಿಸಿದರೆ, ಶೈ ಹೋಪ್ ಸರಣಿ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.

Story first published: Friday, December 14, 2018, 22:23 [IST]
Other articles published on Dec 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X