ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇರಾನಿ ಕಪ್: ವಿಹಾರಿ ಆಟದ ಮೆರಗು, ಗೆಲುವಿನ ನಿರೀಕ್ಷೆಯಲ್ಲಿ ವಿದರ್ಭ

Irani Cup 2019: ROI slightly ahead at stumps on Day 4

ನಾಗ್ಪುರ್, ಫೆಬ್ರವರಿ 15: ನಾಗ್ಪುರ್‌ನಲ್ಲಿರುವ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇರಾನಿ ಕಪ್ ಟೂರ್ನಿಯ 4ನೇ ದಿನದಾಟದ ಅಂತ್ಯಕ್ಕೆ (ಫೆಬ್ರವರಿ 15) ದ್ವಿತೀಯ ಇನ್ನಿಂಗ್ಸ್‌ಗೆ ಇಳಿದಿರುವ ಆತಿಥೇಯ ವಿದರ್ಭ, ವಿಶ್ರಾಂತ ಭಾರತ ವಿರುದ್ಧ 16 ಓವರ್‌ಗೆ 1 ವಿಕೆಟ್ ಕಳೆದು 37 ರನ್ ಗಳಿಸಿದೆ. ವಿದರ್ಭ ಗೆಲುವಿಗೆ ಇನ್ನೂ 243 ರನ್‌ಗಳ ಅಗತ್ಯವಿದೆ.

ಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಸರಣಿಗಳಿಗೆ ಭಾರತ ತಂಡ ಪ್ರಕಟಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಸರಣಿಗಳಿಗೆ ಭಾರತ ತಂಡ ಪ್ರಕಟ

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಅಜಿಂಕ್ಯ ರಹಾನೆ ನಾಯಕತ್ವದ ವಿಶ್ರಾಂತ ಭಾರತ ತಂಡ, ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 95, ಹನುಮ ವಿಹಾರಿ 114 ರನ್ ನೆರವಿನೊಂದಿಗೆ 89.4 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 330 ರನ್ ಗಳಿಸಿತ್ತು.

ಇನ್ನಿಂಗ್ಸ್ ಆರಂಭಿಸಿದ ರಣಜಿ ಚಾಂಪಿಯನ್ ವಿದರ್ಭ 142.1 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 425 ರನ್ ಗಳಿಸಿತು. ಸಂಜಯ್ ರಘುನಾಥ್ 65, ಅಕ್ಷಯ್ ವಾಡೆಕರ್ 73, ಅಕ್ಷಯ್ ಕಾರ್ನೆವಾರ್ 102 ರನ್ ಬಾರಿಸಿದ್ದು ತಂಡದ ಮುನ್ನಡೆಗೆ ನೆರವು ನೀಡಿತು.

2019ರ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಪಂತ್ ಬೇಕಾ, ಇಲ್ಲ ದಿನೇಶ್ ಕಾರ್ತಿಕಾ?2019ರ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಪಂತ್ ಬೇಕಾ, ಇಲ್ಲ ದಿನೇಶ್ ಕಾರ್ತಿಕಾ?

ವಿಶ್ರಾಂತ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಹನುಮವಿಹಾರಿ ಅಜೇಯ 180 ರನ್ ಕೊಡುಗೆ ಲಭಿಸಿತು. ರಹಾನೆ ಬಳಗ 107 ಓವರ್‌ಗಳಲ್ಲಿ 3 ವಿಕೆಟ್ ಕಳೆದು 374 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತು. ವಿದರ್ಭ ಆರಂಭಿಕ ಇನ್ನಿಂಗ್ಸ್ ಲೆಕ್ಕಾಚಾರದಲ್ಲಿ ನೋಡಿದರೆ ಪಂದ್ಯವನ್ನು ಜಯಿಸುವ ನಿರೀಕ್ಷೆಯಿದೆ. ವಿದರ್ಭ ಖಾತೆಯಲ್ಲಿ ಇನ್ನೂ 9 ವಿಕೆಟ್‌ಗಳಿರುವುದೂ ಪ್ಲಸ್ ಪಾಯಿಂಟ್.

Story first published: Friday, February 15, 2019, 20:39 [IST]
Other articles published on Feb 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X