ಇರಾನಿ ಕಪ್ 2022: ಸೌರಾಷ್ಟ್ರ ತಂಡಕ್ಕೆ ಪೂಜಾರ ಆಯ್ಕೆ, ಜಯದೇವ್ ಉನಾದ್ಕಟ್‌ಗೆ ನಾಯಕತ್ವ, ಸಂಪೂರ್ಣ ಸ್ಕ್ವಾಡ್‌

ದೇಶೀಯ ಖ್ಯಾತ ಕ್ರಿಕೆಟ್ ಟೂರ್ನಮೆಂಟ್ ಇರಾನಿ ಕಪ್ 2022ಕ್ಕೆ ರಣಜಿ ಚಾಂಪಿಯನ್ ಸೌರಾಷ್ಟ್ರ ಸ್ಕ್ವಾಡ್ ಅನ್ನು ಘೋಷಣೆ ಮಾಡಿದ್ದು, ಅದ್ಭುತ ಫಾರ್ಮ್‌ನಲ್ಲಿರುವ ಚೇತೇಶ್ವರ ಪೂಜಾರರನ್ನು ತಂಡಕ್ಕೆ ಸೇರ್ಪಡಿಸಲಾಗಿದೆ. ಬೌಲರ್ ಜಯದೇವ್ ಉನಾದ್ಕಟ್‌ಗೆ ಸೌರಾಷ್ಟ್ರ ತಂಡವನ್ನ ಮುನ್ನಡೆಸಲಿದ್ದಾರೆ.

ಬಿಸಿಸಿಐ ಎಲ್ಲಾ ದೇಶೀಯ ಟೂರ್ನಮೆಂಟ್‌ಗಳನ್ನ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದು, ದೇಶೀಯ ಟೂರ್ನಿಗಳಿಂದಾಗಿ ಟೀಂ ಇಂಡಿಯಾ ಸಕ್ಸಸ್‌ಗೆ ನೇರ ಕಾರಣವಾಗಿದೆ. ಈ ದೇಶೀಯ ಟೂರ್ನಿಗಳಿಂದಾಗಿ ಸಾಕಷ್ಟು ಪ್ರತಿಭೆಗಳು ಗುರುತಿಸಿಕೊಳ್ಳುತ್ತಿದ್ದು, ಆಟಗಾರರು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಟೀಂ ಇಂಡಿಯಾ ಇದೇ ವರ್ಷದಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ 377 ರನ್‌ಗಳನ್ನ ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿತು. ಈ ಮೂಲಕ ಇಂಗ್ಲೆಂಡ್‌ ನೆಲದಲ್ಲಿ ಅವಿಸ್ಮರಣೀಯ ಗೆಲುವನ್ನ ಪಡೆಯಲು ವಿಫಲಗೊಂಡಿತು.

ಸೌರಾಷ್ಟ್ರ ಸ್ಕ್ವಾಡ್‌ಗೆ ಚೇತೇಶ್ವರ ಪೂಜಾರ ಹೆಸರು ಸೇರ್ಪಡೆ

ಸೌರಾಷ್ಟ್ರ ಸ್ಕ್ವಾಡ್‌ಗೆ ಚೇತೇಶ್ವರ ಪೂಜಾರ ಹೆಸರು ಸೇರ್ಪಡೆ

ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಚೇತೇಶ್ವರ ಪೂಜಾರ ಹೆಸರನ್ನು ಸೌರಾಷ್ಟ್ರ ಸ್ಕ್ವಾಡ್‌ನಲ್ಲಿ ಸೇರಿಸಲಾಗಿದೆ. ಇಂಗ್ಲೆಂಡ್‌ ದೇಶೀಯ ಕ್ರಿಕೆಟ್‌ನಲ್ಲಿ ರನ್‌ಗಳ ಹೊಳೆ ಹರಿಸಿರುವ ಚೇತೇಶ್ವರ ಪೂಜಾರ ಶತಕದ ಮೇಲೆ ಶತಕ ಸಿಡಿಸಿದ್ದಾರೆ. ಹೀಗಾಗಿ ಈತನ ಅನುಭವವನ್ನು ಇರಾನಿ ಕಪ್‌ನಲ್ಲಿ ಬಳಸಿಕೊಳ್ಳಲು ಸೌರಾಷ್ಟ್ರ ನಿರ್ಧರಿಸಿದೆ.

ಬಲಗೈ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್‌ ಇತ್ತೀಚೆಗೆ ರಾಯಲ್ ಲಂಡನ್ ಕಪ್‌ನಲ್ಲಿ ಅದ್ಭುತ ಪ್ರದರ್ಶನದಿಂದಾಗಿ ಸುದ್ದಿಪತ್ರಿಕೆಗಳಿಗೆ ಹೆಡ್‌ಲೈನ್ ಆಗಿದ್ದರು. ಜೊತೆಗೆ ತಾನು ಎಷ್ಟು ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡಬಲ್ಲೆ ಎಂಬುದನ್ನ ಸಹ ತೋರಿಸಿಕೊಟ್ಟಿದ್ದಾರೆ. ಸಾಕಷ್ಟು ಎಸೆತಗಳನ್ನ ಎದುರಿಸಿ ರನ್‌ ಕಲೆಹಾಕುತ್ತಿದ್ದ ಪೂಜಾರ ಕಳೆದೊಂದು ವರ್ಷದಲ್ಲಿ ತನ್ನ ಬ್ಯಾಟಿಂಗ್‌ ಸ್ಟ್ರೈಕ್‌ರೇಟ್ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇರಾನಿ ಕಪ್‌ನಲ್ಲಿ ರಣಜಿ ಚಾಂಪಿಯನ್ ಸೌರಾಷ್ಟ್ರ ತಂಡಕ್ಕೆ , ರೆಸ್ಟ್ ಆಫ್ ಇಂಡಿಯಾ ಸವಾಲೆಸೆಯಲಿದೆ. ಈ ರೆಸ್ಟ್ ಆಫ್ ಇಂಡಿಯಾದಲ್ಲಿ ಉಳಿದ ತಂಡದ ಆಟಗಾರರ ಸಮ್ಮಿಶ್ರಣವಿದೆ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ರಹಾನೆ ನೇತೃತ್ವದ ಬಲಿಷ್ಠ ಮುಂಬೈ ತಂಡ ಪ್ರಕಟ: ಪೃಥ್ವಿ ಶಾ, ಶಾರ್ದೂಲ್‌ಗೆ ಸ್ಥಾನ

ಜಯದೇವ್ ಉನಾದ್ಕಟ್‌ ಸೌರಾಷ್ಟ್ರ ತಂಡದ ನಾಯಕನಾಗಿ ಆಯ್ಕೆ

ಜಯದೇವ್ ಉನಾದ್ಕಟ್‌ ಸೌರಾಷ್ಟ್ರ ತಂಡದ ನಾಯಕನಾಗಿ ಆಯ್ಕೆ

ಸೌರಾಷ್ಟ್ರ ತಂಡವು ಜಯದೇವ್ ಉನಾದ್ಕಟ್‌ ಅವರನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿದೆ. ಎಡಗೈ ಪೇಸರ್‌ ಇತ್ತೀಚೆಗಷ್ಟೇ ಹೇಳಿಕೆಯಲ್ಲಿ ತಾನು ಇನ್ನೂ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಬಲ್ಲೇ ಎಂದಿದ್ದರು. 2010ರಲ್ಲಿ ಜಯದೇವ್ ಉನಾದ್ಕಟ್‌ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು.

ಐಪಿಎಲ್ 2022ರ ಸೀಸನ್‌ನಲ್ಲಿ ಮುಂಬೈ ತಂಡದಲ್ಲಿದ್ದ ಜಯದೇವ್ ಉನಾದ್ಕಟ್‌ ಅಂತಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ರು. ಮುಂಬೈ ಮ್ಯಾನೇಜ್‌ಮೆಂಟ್ ಈತನಿಗೆ ಡೆತ್‌ ಓವರ್ ಬೌಲಿಂಗ್‌ ಮಾಡುವ ಜವಾಬ್ದಾರಿ ನೀಡಿದ್ರು. ಆದ್ರೆ ಉತ್ತಮ ಯಾರ್ಕರ್ ಹಾಕುವಲ್ಲಿ ವಿಫಲಗೊಂಡಿದ್ದ ಉನಾದ್ಕಟ್ ಹೆಚ್ಚು ರನ್ ಬಿಟ್ಟುಕೊಟ್ಟರು.

ಆದ್ರೀಗ ಸೌರಾಷ್ಟ್ರ ತಂಡದ ನಾಯಕತ್ವ ವಹಿಸಿಕೊಂಡಿರುವ ಜಯದೇವ್ ಉನಾದ್ಕಟ್‌ ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಯಶಸ್ಸು ಸಾಧಿಸುತ್ತಾರೆಯೇ ಎಂಬುದನ್ನ ಕಾದು ನೋಡಬೇಕಿದೆ.

T20 World Cup: ಬಹುಮಾನದ ಮೊತ್ತ ಘೋಷಣೆ ಮಾಡಿದ ಐಸಿಸಿ, ಕಪ್ ಗೆದ್ದ ತಂಡಕ್ಕೆ ಸಿಗುವ ಹಣ ಎಷ್ಟು ಗೊತ್ತಾ?

ಇರಾನಿ ಕಪ್‌ಗೆ ಸೌರಾಷ್ಟ್ರ ಸ್ಕ್ವಾಡ್

ಇರಾನಿ ಕಪ್‌ಗೆ ಸೌರಾಷ್ಟ್ರ ಸ್ಕ್ವಾಡ್

ಜಯದೇವ್ ಉನಾದ್ಕತ್ (ನಾಯಕ), ಚೇತೇಶ್ವರ್ ಪೂಜಾರ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾಡ, ಚಿರಾಗ್ ಜಾನಿ, ಕಮಲೇಶ್ ಮಕ್ವಾನಾ, ಧರ್ಮೇಂದ್ರಸಿನ್ಹ್ ಜಡೇಜಾ, ಪ್ರೇರಕ್ ಮಂಕಡ್, ಚೇತನ್ ಸಕರಿಯಾ, ಸ್ನೆಲ್ ಪಟೇಲ್, ವಿಶ್ವರಾಜ್‌ಸಿನ್ಹ್ ಜಡೇಜಾ, ಕುಶಾಂಗ್ ಪಟೇಲ್, ಹಾರ್ವಿಕ್ ದೇಸಾತಿ, ಸಮರ್ಥ್‌ ವ್ಯಾಸ್, ಪಾರ್ತ್ ಬುಟ್, ಕಿಶನ್ ಪರ್ಮಾರ್

For Quick Alerts
ALLOW NOTIFICATIONS
For Daily Alerts
Story first published: Friday, September 30, 2022, 14:21 [IST]
Other articles published on Sep 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X